ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೨೧.] ಅಯೋಧ್ಯಾಕಾಂಡವು. ೪೩ ಬೇಕೆಂಬ ಆಸೆಯು ಈಗಲೂನಿನಗಿದ್ದರೆ, ನೀನು ಇಲ್ಲಿಯೇ ಇದ್ದು,ನನ್ನ ಶುಶ್ನ ಷೆಯನ್ನು ಮಾಡುತ್ತ,ಮಾತೃಶುಕ್ರೂಷೆಯೆಂಬ ಈ ಪರಮಧರವನ್ನು ನಡೆಸಿ ಕೊಂಡುಬಾ ! ಮಾತೃಶುಕ್ರೂಷೆಗಿಂತಲೂ ಮೇಲಾದ ಧರವೊಂದೂ ಇಲ್ಲ. ಪೂತ್ವದಲ್ಲಿ ಕಶ್ಯಪನ ಮಕ್ಕಳಲ್ಲೊಬ್ಬನು, ತನ್ನ ಮನೆಯಲ್ಲಿಯೇ ಇದ್ದು ಮಾತೃಶುಶೂಷೆಯೆಂಬ ಮಹಾತಪಸ್ಸನ್ನು ಸಾಧಿಸಿ ಸ್ವರ ಲೋಕವನ್ನು ಪಡೆದನು. ನಿನಗೆ ತಂದೆಯು ಹೇಗೆ ಪೂಜ್ಯನೋ, ಹಾಗೆಯೇ ತಾಯಿಯಾದ ನಾನೂ ಪೂಜ್ಯಳಲ್ಲವೆ?ನಮ್ಮಿಬ್ಬರಮಾತನ್ನೂ ನೀನು ಒಂದೇವಿಧವಾಗಿ ಗೌರ ವಿಸಬೇಕಲ್ಲವೆ? ನಿನ್ನ ತಂದೆಯು ನಿನ್ನನ್ನು ಕಾಡಿಗೆ ಹೋಗೆಂದು ಹೇಳಿದನ? ನೀನು ಇಲ್ಲಿಯೇ ಇರಬೇಕೆಂಬುದು ನನ್ನ ಮತವು. ನೀನು ಕಾಡಿಗೆ ಹೋ ಗುವುದು ನನಗೆ ಸ್ವಲ್ಪವೂ ಸಮ್ಮತವಿಲ್ಲ. ರಾಮಾ ! ನಿನ್ನ ನಗಲಿದಮೇಲೆ ನನಗೆ ಈ ಜೀವವೇಕೆ ? ಈ ಸುಖವೇಕೆ ? ನೀನಿಲ್ಲದೆ ಇಲ್ಲಿ ಅನೇಕರಾಜ ಭೋಗಗಳನ್ನನುಭವಿಸುವುದಕ್ಕಿಂತಲೂ, ನಿನ್ನೊಡಗೂಡಿ ಕಡ್ಡಿ ಕಸಗಳನ್ನಾ ದರೂ ತಿಂದು ಜೀವಿಸುವುದು ಮೇಲೆಂದು ನನಗೆ ತೋರಿರುವುದು. ಮತ್ತೆ ರಾಮಾ ! ವ್ಯಸನದಿಂದ ತಲ್ಲಣಿಸುತ್ತಿರುವ ನನ್ನನ್ನು ಇಲ್ಲಿ ಬಿಟ್ಟು, ನೀನು ಕಾಡಿಗೆ ಹೋಗುವುದಾದರೆ, ನಾನು ಇಲ್ಲಿ ಅನ್ನಾಹಾರಗಳನ್ನು ಬಿಟ್ಟು ಪ್ರಾಣ ತ್ಯಾಗವನ್ನು ಮಾಡಿಕೊಳ್ಳುವೆನೇಹೊರತು ಬದುಕಿರಲಾರೆನು. ಇದರಿಂದ ನೀನು ಇದೊಂದು ಮಹಾಪಾತಕಕ್ಕೂ ಗುರಿಯಾಗಬೇಕಾಗುವುದಲ್ಲದೆ ಬೇರೊಂದೂ ಇಲ್ಲವು! ನದಿಗಳಿಗೆಲ್ಲಾ ಒಡೆಯನಾದ ಸಮುದ್ರನು, ಒಪ್ಪ ಲಾದನೆಂಬ ಬ್ರಾಹಣನೊಬ್ಬನಿಗೆ ಅಪಕಾರವನ್ನು ಮಾಡಿ, ಅದರಿಂದುಂ ವಾದ'ಬ್ರಹ್ಮಹತ್ಯಾಪಾತಕಕ್ಕೊಳಗಾಗಿ ಸಂಕಟವನ್ನನುಭವಿಸಿದಂತೆ,ನೀನೂ

  • ಬ್ರಹ್ಮಹತ್ಯೆಯೆಂದರೆ ಬ್ರಾಹ್ನ ಕರನ್ನು ಕೊಂದುದರಿಂದುಂಟಾಗತಕ್ಕ ಮಹಾ ಪಾತಕವು, ಸಮುದ್ರಕ್ಕೆ ಈ ವಿಧವಾದ ಬ್ರಹ್ಮ ಹತ್ಯೆಯುಂಟಾದಂತೆ ಎಲ್ಲಿಯೂ ಪ್ರಸಿದ್ದಿಯಿಲ್ಲ. ಆದರೆ, “ ಪಿಪ್ಪಲಾದಸಮುನ್ನೇ ಕೃತ್ಯ ಲೋಕಭಯಂಕರಿ” ಎಂಬುದಾಗಿ, ಹಿಂದೆ ಸಮುದ್ರನು ಪಿಪ್ಪಲಾದನೆಂಬ ಬ್ರಾಹ್ಮಣನಲ್ಲಿ ಅಪರಾಧಪಟ್ಟು ದರಿಂದ, ಆ ಬ್ರಾಹ್ಮಣನು ಒಂದು ಕೃತ್ಯೆಯನ್ನು (ನ್ಯದ ಬೊಂಬೆ) ಮಾಡಿ ಪ್ರಯೋಗಿಸಿದನು. ಅದು ಸಮುದ್ರವನ್ನು ಪೀಡಿಸಿತು. ಈ ಹಿಂಸೆಯನ್ನೇ ಬ್ರಹ್ಮ ಹತ್ಯೆಯೆಂದು ವ್ಯವಹರಿಸಿದುದಾಗಿ ಗ್ರಹಿಸಬಹುದು. ಆಸಿಯು, ಮೊದಲು

.28%