ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಶ್ರೀಮದ್ರಾಮಾಯಣರ [ಸರ್ಗ, ೨೧ ದುರ್ಗತಿಗಿಳಿಯಬೇಕಾಗುವುದು.” ಎಂದಳು. ಹೀಗೆ ದೈನ್ಯದಿಂದ ಗೋಳಿಡುತ್ತಿ ರುವ ಕೌಸಲ್ಯಯ ಮಾತನ್ನು ಕೇಳಿ ಥರಾ ಇನಾದ ರಾಮನು, ಥರ ಯು ಕವಾಗಿರುವಂತೆ ಒಂದಾನೊಂದು ಮಾತನ್ನು ಹೇಳುವನು, ಎಲೆ ಮಾತೆ ! ನಿನ್ನ ಮಾತಿನಂತೆ ನಡೆಯಬೇಕಾದುದೇ ನನಗೆ ಧರವೆಂಬುದರಲ್ಲಿ ಸಂದೇಹ ವಿಲ್ಲ. ತಂದೆಯ ಮಾತಿನಂತೆ ನಿನ್ನ ಮಾತನ್ನೂ ನಾನು ಗೌರವಿಸಬೇಕಾದುದೇ ನ್ಯಾಯವು! ಆದರೆ ಅವುಗಳಲ್ಲಿ ಬಲಾಬಲವನ್ನು ವಿಚಾರಮಾಡಬೇಡವೆ? ನಿನ ಗಿಂತಲೂ ಮೊದಲೇ ಆತನು ನನಗೆ ಆಜ್ಞೆಯನ್ನು ಕೊಟ್ಟಿರುವನು. ನಾನೂ ಅದರಂತೆ ನಡೆಯುವುದಾಗಿ ಮೊದಲೇ ಒಪ್ಪಿ ಬಂದಿರುವೆನು. ಅದನ್ನು ಮೀರಿ ನಡೆಯುವುದಕ್ಕೆ ನಾನು ಶಕ್ತನಲ್ಲ. ಆದುದರಿಂದ ಪ್ರಣಾಮಪೂರೈಕವಾಗಿ ನಿನ್ನ ಕಮೆಯನ್ನು ಬೇಡುವೆನು. ನಾನು ಕಾಡಿಗೆ ಹೊರಡುವೆನು, ಪೂರ್ವದಲ್ಲಿ ಮ ಹಾಜ್ಞಾನಿಯಾಗಿ,ವ್ರತನಿಷ್ಠನೆನಿಸಿಕೊಂಡಿದ್ದ ಕಂಡುಮಹರಿಯು, ತಂದೆಯ ಅಪ್ಪಣೆಯಂತೆ ಗೋಹತ್ಯೆಯನ್ನೇ ಮಾಡಿಬಿಟ್ಟನು. ಆತನೇನು ಧರ್ಮವನ್ನು ತಿಳಿದವನಲ್ಲವೆ ? ನಮ್ಮ ಇಕ್ಷಾಕುವಂಶದಲ್ಲಿಯೇ ಪ್ರತ್ವದಲ್ಲಿ ಸಗರಪುತ್ರರು, ತಮ್ಮ ತಂದೆಯಾದ ಸಗರನ ಆಜ್ಞೆಯಿಂದ ಭೂಮಿಯನ್ನು ಭೇದಿಸಿ ದೊಡ್ಡ ಮೃತ್ಯುವಿಗೆ ಗುರಿಯಾದರು. ಜಮದಗ್ನಿ ಪುತ್ರನಾದ ಪರಶುರಾಮನೂಕೂಡ, ತನ್ನ ತಂದೆಯ ಆಜ್ಞೆಯನ್ನು ಮೀರಲಾರದೆ, ಹೆತ್ತತಾಯನ್ನೇ ಕತ್ತರಿಸಿ ದನು. ಹೀಗೆಯೇ ದೇವತೆಗಳಿಗೆ ಸಮಾನವಾದ ಮಹಿಮೆಯುಳ್ಳ ಇನೂ ಅನೇಕಮಹಾತ್ಮರು, ಪಿತೃವಚನಪರಿಪಾಲನವನ್ನು ಬಹುಸಾಹಸದಿಂದ ನಡೆ ಸಿರುವರು. ಈಗ ನಾನೂ ತಂದೆಯ ಹಿತವನ್ನು ಅನುಸರಿಸಿಯೇ ನಡೆಯ ಬೇಕಾದುದು ಧರವು. ತಂದೆಯ ಮಾತಿಗಾಗಿ ಗೋವಧೆಯೇ ಮುಂತಾದ ಮಹಾಘೋರಕೃತ್ಯಗಳೆಲ್ಲವನ್ನೂ ನಡೆಸಿರುವಾಗ, ನಾನು ಈಗ ಸ್ವಲ್ಪಕಾಲದ ಕಷ್ಯಕ್ಕಾಗಿ ಪಿತೃವಾಕ್ಯವನ್ನುಲ್ಲಂಘಿಸುವುದು ಥರವೆ?ನಾನೊಬ್ಬನೇ ಹೀಗೆ ಅತ್ಯವಾದಿಗಳ ದೃಷ್ಟಾಂತದಿಂದ, ಮಾತೃಶುಶೂಷೆಯಿಂದ ಲಭಿಸಬಹುದಾದ ಫಲವನ್ನು ಹೇಳಿ, ಈಗ ಆ ಶುಕ್ರೂಷೆಯನ್ನು ಮಾಡದವರಿಗುಂಟಾಗುವ ದುಷ್ಪಲಗಳಿಗೆ ಉದಾ ಕರಣವಾಗಿ ಸಮುದ್ರವನ್ನು ಹೇಳಿದುದಾಗಿ ಗ್ರಹಿಸಬೇಕು. ಸಮುದ್ರನು ಮಾತೃ ದುಃಖವನ್ನುಂಟುಮಾಡಿದುದರಿಂದ,ಬ್ರಹ್ಮ ಹತ್ತಿಯಿಂದ ಪ್ರಾಪ್ತವಾಗಬಹುದಾದ ನರಕ ವನ್ನು ಹೊಂದಿದನೆಂಬ ಶರಾಹಕಥೆಯನ್ನು ಅನುಸಂಧಿಸಿಕೊಳ್ಳಬೇಕು. -~