ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೨೧.] ಅಯೋಧ್ಯಾಕಾಂಡವು: ೪೩೬ ಹಿಂತಿರುಗುವೆನು. ಪೂತ್ವದಲ್ಲಿ ಸ್ವರ್ಗಲೋಕವನ್ನು ಬಿಟ್ಟು ಬಂದ ಯ ಯಾತಿಯು,ಪುನಃ ಸ್ವರ್ಗವನ್ನು ಸೇರಿದಂತೆ, ಈ ಅಯೋಧ್ಯೆಗೇ ಬಂದುಬಿಡು ವೆನು. ದಶರಥನ ಆಜ್ಞೆಯನ್ನು ನಿಧ್ವಹಿಸುವ ಭಾರವು ನನ್ನೊಬ್ಬನಿಗೇ ಸೇರಿದು ದೆಂದೆಣಿಸಬೇಡ! ನಾನಾಗಲಿ, ನೀನಾಗಲಿ,ಸೀತೆಯಾಗಲಿ, ಲಕ್ಷ್ಮಣನಾಗಲಿ ಸುಮಿತ್ರೆಯಾಗಲಿ ಅವನ ಅಪ್ಪಣೆಯನ್ನನುಸರಿಸಿ ನಡೆಯಬೇಕಾದುದೇ ನ್ಯಾಯವು. ಇದೊಂದು ಅನಾದಿಯಾದ ಧರವೆಂದು ತಿಳಿ!ಎಲೆ ತಾಯೆ!ಈಗ ನೀನು ನನ್ನ ಶ್ರೇಯಃಪ್ರಾದ್ದನೆಗಾಗಿ ಮಾಡಿರುವ ಪೂಜಾದ್ರವ್ಯಸಂಭಾರ ಗಳನ್ನು ತೆಗೆದಿಡು! ವ್ಯಸನವನ್ನು ನಿನ್ನ ಮನಸ್ಸಿನಲ್ಲಿಯೇ ಅಡಗಿಸಿಕೊಳ್ಳುವ ಳಾಗು! ನಾನು ಈಗ ವನವಾಸಕ್ಕಾಗಿ ಮನಸ್ಸನ್ನು ಸ್ಥಿರಪಡಿಸಿಕೊಂಡಿರು ವಂತೆಯೇ, ನೀನೂ ಮನಸ್ಸನ್ನು ದೃಢಪಡಿಸಿಕೊಂಡು, ನನ್ನ ಮಾರ್ಗವನ್ನ ನುಮೋದಿಸು.”ಎಂದನು. ಹೀಗೆ ರಾಮನು ಧೈಯ್ಯದಿಂದಲೂ, ಧರಬುದ್ದಿಯಿಂ ದಲೂ ಹೇಳಿದ ಮಾತನ್ನು ಕೇಳಿ ಕೌಸಲ್ಯಯು ವ್ಯಸನದಿಂದ ಮುಂದು ಗಾಣದಿದ್ದ ತನ್ನ ಮನಸ್ಸನ್ನು ಸಮಾಧಾನಕ್ಕೆ ತಂದುಕೊಂಡು,ಪುನಃರಾಮ ನನ್ನು ಕುರಿತು (ವತ್ಪಾ!ಇದುವರೆಗೆ ನಾನು ನಿನ್ನನ್ನು ಸಾಕಿ ವೃದ್ಧಿಗೆ ತಂದ ಕೃತಜ್ಞತಾಥರವನ್ನಾದರೂ ಪದ್ಯಾಲೋಚಿಸು, ವಾತ್ಸಲ್ಯದ ವಿಷಯದ ಕ್ಲಿಯೂ, ದೇಹಸಂಸಂಬಂಧದ ವಿಷಯದಲ್ಲಿಯೂ,ನಿನಗೆ ತಂದೆಯು ಹೇಗೋ ಹಾಗೆಯೇನಾನೂ ಪೂಜ್ಯಳಲ್ಲವೆ?ತಂದೆಯ ಮಾತಿನಂತೆಯೇ ನನ್ನ ಮಾತನ್ನೂ ನೀನು ಆದರಿಸಬೇಕಲ್ಲವೆ?ಸೀನು ಕಾಡಿಗೆ ಹೋಗುವುದಕ್ಕೆ ನಾನು ಎಂದಿಗೂ ಸಮ್ಮತಿಸಲಾರೆನು. ನನ್ನ ನ್ನು ವ್ಯಸನದಲ್ಲಿರಿಸಿ ಹೋಗುವುದು ನಿನಗೆ ಥರ? ವಲ್ಲ. ನೀನಿಲ್ಲದಮೇಲೆ ನನಗೆ ಈಜೀವನವೇಕೆ?ಬಂಧುಗಳೇಕೆ!ಪರಲೋಕಕ್ಕೆ ಪಿತೃಲೋಕದಲ್ಲಿ ಸ್ವಧೆಯು ಸಿಕ್ಕಿದರೂ,ಸ್ಪರಲೋಕದಲ್ಲಿ ಅಮೃತವೇ ಲಭಿ ಸಿದರೂ ನನಗೆ ತೃಪ್ತಿಯಿರದು. ಆನಂದಪದಗಳಾದ ಮಹತ್ತೋಕವೇ ಮೊದಲಾದ ಊರಲೋಕದಲ್ಲಿರುವ ಪ್ರಾಣಿಸಮೂಹಗಳೆಲ್ಲವೂ, ನನ್ನಿಧಿ ರಾಗಿ ಬಂದುನಿಂತರೂ, ನೀನು ಕಣ್ಣಿದಿರಿಗಿದ್ದಂತೆ ತೃಪ್ತಿಕರವಾಗುವುದಿಲ್ಲ ” ಎಂದಳು. “ಕಾಡಿನಲ್ಲಿ ಆನೆಗಳನ್ನು ಹಿಡಿಯತಕ್ಕವರು, ಕೊಳ್ಳೆಗಳನ್ನು ಹಿಡಿದು,

  • ಇಲ್ಲಿ 'ಮಹಾಗಜೋSಧ್ಯಾನಮನುಪೂವಿಷ್ಯ:”ಎಂದು ಮೂಲವು. ಇದು ವಿಂದರಾಜೀಯವ್ಯಾಖ್ಯಾನಾನುಸಾರವಾದ ಪಾಠವು.“ಮಹಾಗಜೋ ಧ್ಯಾನಮನುಪ್ರವಿ