ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೯೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೪o ಶ್ರೀಮದ್ರಾಮಾಯಣವು [ಸರ್ಗ, ೨೧, ವಿಲ್ಲದೆ ನಡೆಸಬೇಕಾದುದೇ ನನ್ನ ಕರ್ತವ್ಯವು. ಎಂದಿಗೂ ನಾನು ಅದಕ್ಕೆ ವ್ಯತಿರಿಕ್ತವಾಗಿ ನಡೆಯಲಾರೆನು. ವತ್ಸ ಲಕ್ಷಣಾ! ನಮ್ಮ ತಂದೆಗೆ ನನ ಗಾಗಲಿ, ಭರತನಿಗಾಗಲಿ,ಯಾವ ವಿಷಯವನ್ನಾದರೂ ಆಜ್ಞಾಪಿಸುವುದಕ್ಕೆ ಅಥಿಕಾರವುಂಟು! ಈ ನಮ್ಮ ತಾಯಿಗೂ ಆತನೇ ನಿಯಾಮಕನು, ನಮ್ಮೆ ಲ್ಲರಿಗೂ ಆತನೇ ಗತಿ ಯು. ನಾವೆಲ್ಲರೂ ಆತನನ್ನು ಧರಸ್ವರೂಪವೆಂದೇ ತಿಳಿ ಯಬೇಕು. ತಾಯಿಯಾದ ಕೌಸಲೈಗೂಕೂಡ ಆತನ ಮನಸ್ಸನ್ನನುಸರಿಸಿ ನಡೆಯುವುದೇ ಮುಖ್ಯಥರವು. ಈಕೆಯ ಪರಲೋಕಶ್ರೇಯಸ್ಸಿಗೂ ಆತನೇ ಮುಖ್ಯಸಾಧನವು. ಹೀಗೆ ನಮ್ಮೆಲ್ಲರಿಗೂ ಧಮ್ಮ ನಿಯಾಮಕನಾಗಿ, ನಮ್ಮ ವಂ ಶದ ಪೂರೈರಾಜರಿಗಿಂತಲೂ ಅತಿಶಯವಾಗಿ ಸ್ವಧರವನ್ನು ಬಿಡದೆ ವರ್ತಿಸು ತಿರುವ ಆನಮ್ಮ ತಾತನು ಬದುಕಿರುವಾಗಲೂ, ತಾಯಿಯು ಪತಿಯಾದ ಆತನನ್ನು ಬಿಟ್ಟು ನನ್ನೊಡನೆ ಕಾಡಿಗೆ ಬರುವೆನೆಂಬುದು ಧರವೆ? ತನ್ನ ಕೈಹಿ ಡಿದ ಗಂಡನು ತನಗೆ ದಿಕ್ಕಾಗಿ ಕಣ್ಣಿದಿರಿಗಿರುವಾಗ,ನಮ್ಮ ತಾಯಿಯುಮಕ್ಕಳ ಕೈಕೆಳಗೆ ಸಿಕ್ಕಿಕೊಂಡು ಕಷ್ಟಜೀವನವನ್ನು ನಡೆಸುತ್ತಿರುವ ಇತರ ವಿಧವಾ ಸ್ತ್ರೀಯರಂತೆ ನನ್ನೊಡನೆ ಬರುವುದೆಂದರೇನು ? ಎಷ್ಟು ಮಾತ್ರವಾದರೂ ಇವಳು ಪತಿಯನ್ನು ಬಿಟ್ಟು ಆಗಲಿರಕೂಡದು. ಎಲೆ ಮಾತೆ!ಪತಿಯು ಜೀವಿಸಿ ರುವಾಗ ನೀನು ಆತನನ್ನು ಬಿಟ್ಟು ಬರುವುದು ಎಂದಿಗೂ ಉಚಿತವಲ್ಲ! ನನಗೆ ಕಾಡಿಗೆ ಹೋಗುವುದಕ್ಕೆ ಅನುಜ್ಞೆಯನ್ನು ಕೊಡು: ಯಯಾತಿಯು,ತನ್ನ ದೌ ಹಿತ್ರನ ಸತ್ಯವಾಕ್ಯದಿಂದ ಹಿಂತಿರುಗಿ ಸ್ವರಕ್ಕೆ ಬಂದಂತೆಯೇ, ನಾನೂ ಹ ದಿನಾಲ್ಕು ವರ್ಷಗಳವರೆಗೆ ಪಿತೃವಾಕ್ಯ ಪರಿಪಾಲನವೆಂಬ ನನ್ನ ನಿಯಮವನ್ನು ಮುಗಿಸಿಕೊಂಡು, ಸುಖವಾಗಿಹಿಂತಿರುಗಿ ಇಲ್ಲಿಗೆ ಬಂದು ಸೇರುವೆನು.*ನಮಗೆ ಮಂಗಳಾತೀಲ್ವಾದವನ್ನು ಮಾಡು! ಅತ್ಯಲ್ಪವಾದ ಈ ರಾಜ್ಯಕ್ಕಾಗಿ,ಸರೋ ತಮವಾದ ಕೀರ್ತಿಯನ್ನು ಕೆಡಿಸಿಕೊಳ್ಳುವುದು ನನಗೆ ಸರ್ವಧಾ ಸಮ್ಮ

  • ಇಲ್ಲಿ ಕುರುಷ್ಯ ನ ಯನಾನಿ”ಎಂದು ಮೂಲದಲ್ಲಿರುವುದರಿಂದ ರಾಮನು ತಾಯಿಯನ್ನು ಕುರಿತು ನಮಗೆ ಮಂಗಳಾಶೀರಾದಗಳನ್ನು ಮಾಡಬೇಕಂ* ದು ಕೇಳಿದಂತೆ ಅರವಾಗುವುದು.ರಾಮನು ತಾನೊಬ್ಬನೇಹಾಡಿಗೆ ಹೊರಡುವುದಾಗಿರು ವಗ'ನಮಗೆ”ಎಂದು ಬಹುವಚನವನ್ನೇ ಉಪಯೋಗಿಸಿರುವನೆಂದು ಶಂಕಯಂ