ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯರು [ಸರ್ಗ' ೨೨ - .....ರಾಮನು ಕೈಕೇಯಿಯ ವಿಷಯದಲ್ಲಿ ಲಕ್ಷಕ -

  • ನಿಗುಂಟಾದ ಕೋಪವನ್ನು ತಗ್ಗಿಸಿದುದು. :) ದುಃಖದಿಂದ ಕುಗ್ಗಿ, ಹಾವಿನಂತೆ ಉದ್ಯವಾಗಿ ನಿಟ್ಟುಸಿರು ಬಿಡುತ್ತ, ಕೋಪದಿಂದ ಬಿಚ್ಚಿದ ಕಣ್ಣುಳ್ಳವನಾಗಿರುವ ತನ್ನ ಪ್ರಿಯಸಹೋದರ ನಾದ ಲಕ್ಷಣವನ್ನು ನೋಡಿ,ರಾಮನು, ಥೈಲ್ಯದಿಂದ ತನ್ನ ಮನೋವಿಕಾರ ವನ್ನು ಹೊರಕ್ಕೆ ಕಾಣಿಸಿಕೊಳ್ಳದೆ, ಒಂದಾನೊಂದು ಮಾತನ್ನು ಹೇಳುವನು. « ವತ್ಸ ಲಕ್ಷಣಾವ್ಯವಾಗಿ ಹೀಗೇಕೆ ಕೋಪಿಸುವೆ? ತಂದೆಯ ವಿಷಯ. ದಲ್ಲಿ ನಿನ್ನ ಕೋಪವನ್ನ ಡಗಿಸು, ನನಗೆ ಈ ವ್ಯಸನವು ಸಂಭವಿಸಿತೆಂದು. ನೀನು ಸ್ವಲ್ಪವೂ ದುಃಖಿಸಬೇಡ ! ಥೈರವನ್ನವಲಂಬಿಸು. ಈ ಅಭಿಷೇಕವು ನಿಂತುಹೋದಮಾತ್ರಕ್ಕೆ, ನಮಗೆ ಯಾವವಿಧವಾದ ಅವಮಾನವೂ ಇಲ್ಲ. ಮನಸ್ಸಿನಲ್ಲಿ ಸಂತೋಷದಿಂದಿರು. ಈಗ ನನ್ನ ಅಭಿಷೇಕಕ್ಕೊಸ್ಕರ ಸಿದ್ಧ ವಾಗಿರುವ ಅಲ್ಪಸ್ವಲ್ಪಸನ್ನಾಹಗಳೆಲ್ಲವನ್ನೂ ಇಷ್ಟಕ್ಕೇ ನಿಲ್ಲಿಸಿ, ಅಲಂ ಕಾರಾದಿಗಳನ್ನು ತೆಗೆದುಬಿಡು. ಅಪಾಯವಿಲ್ಲದಕಾರದಲ್ಲಿ ಪ್ರಯತ್ನಿ ಸು. ಲಕ್ಷಣಾ ! ಇದುವರೆಗೆ ನನ್ನ ಅಭಿಷೇಕಕ್ಕಾಗಿ ಎಷ್ಟು ಉತ್ಸಾಹದಿಂದ ಸಾಮಗ್ರಿಗಳನ್ನೊದಗಿಸುತಿದ್ದೆಯೋ, ಅಷ್ಮೆ ಉತ್ಸಾಹದಿಂದ ಈಗ ನನ್ನನ್ನು ಕಾಡಿಗೆ ಕಳುಹಿಸುವುದಕ್ಕೆ ತಕ್ಕ ಪ್ರಯತ್ನವನ್ನು ಮಾಡು!ಅದಕ್ಕೆ ಬೇಕಾದ ನಾರುಮಡಿ, ಕೃಷ್ಣಾಜಿನ,ಮೊದಲಾದುವುಗಳನ್ನೊದಗಿಸು!ಎಲ್ಲಿ ನನಗೆ ಅಭಿ, ಷೇಕವು ನಡೆದುಹೋಗುವುದೋ ಎಂದು ಕೈಕೇಯಿಯು, ಮನಸ್ಸಿನಲ್ಲಿ ಸಂಕಟಪಡುತ್ತಿರುವಳು. ಈಗ ನಾವಿಬ್ಬರೂ ಕಲೆತು ಮಾತಾಡುತ್ತಿರುವುದ ನ್ನು ನೋಡಿದರೆ, ಇನ್ನೂ ಸಂದೇಹಪಟ್ಟು,ನಾವಿಬ್ಬರೂ ಅವಳ ಪ್ರಯತ್ನಕ್ಕೆ ಯಾವವಿಭೂತವನ್ನು ತಂದಿಡುವೆವೋ ಎಂದು ಶಂಕಿಸಬಹುದು. ಅಷಕ ನಾವು ಈಗ ಅವಕಾಶವನ್ನು ಕೊಡಬಾರದು. ಅತ್ತಲಾಗಿ ನನಗೆ ಅಭಿಷೇಕವು. ಎಲ್ಲಿ ನಿಂತುಹೋಗುವುದೋ ಎಂದು ಕೊರಗುತ್ತಿರುವ ನನ್ನ ತಾಯಿಯಾದ ಕೌಸಲ್ಯಗೂ ಪಿತೃವಾಕ್ಯ ಪರಿಪಾಲನವೇ ನಮಗೆ ಮುಖ್ಯ ಕರ್ತವ್ಯವೆಂಬ ಥರ ಸೂಕ್ಷವನ್ನು ತಿಳಿಸಿ, ಅವಳ ಶಂಕೆಯನ್ನು ನಿವಾರಿಸಬೇಕು. ನಮ್ಮ ಮಾತೆ

ಯರಾದ ಕೈಕೇಯಿಗಾಗಿ,ಕೌಸಲ್ಯಗಾಗಿ ನಮಗಾಗಿ ಮನಸ್ಸಿನಲ್ಲಿ ದುಃಖ, ವುಂಟಾಗುವಂತೆ ಮಾಡುವುದು ನಮಗೆ ಶ್ರೇಯಸ್ಕರವಲ್ಲ. ಅವರ ದುಃಖ