ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೯೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೪೪ ಶ್ರೀಮದ್ರಾಮಾಯಣವು (ಸರ್ಗ.೨೨, ಬೇಕೆಂದು ಎಷ್ಟೋ ಪ್ರಯತ್ನದಿಂದ ಸಾಧಿಸುತ್ತಿರುವ (ಮಂಥರೆಯೇ ಮೊದ ಲಾದ ಜನರಿಗೂ ನಾವು ಆಶಾಭಂಗವನ್ನುಂಟುಮಾಡಬಾರದು. ಆದುದರಿಂದ ಈಗ ಅವರೆಲ್ಲರ ಸಂತೋಷಾರವಾಗಿಯಾದರೂ ನಾನೂ ಕಾಡಿಗೆ ಹೊರಡು ವುದೇ ನ್ಯಾಯವು.ಎಲೆ ವತೃನೆ! ಅದೆಲ್ಲವೂ ಹೋಗಲಿ! ನನ್ನನ್ನು ಕಾಡಿಗೆ ಕಳು ಹಿಸುವುದಕ್ಕಾಗಲಿ, ನನಗೆ ಸೇರಬೇಕಾದ ರಾಜ್ಯದ ಬಾಧ್ಯತೆಯನ್ನು ತಪ್ಪಿಸು ವುದಕ್ಕಾಗಲಿ, ಆಕೈಕೇಯಿಯನ್ನು ಕಾರಣವೆಂದೆಣಿಸಬೇಡ, ಇದಕ್ಕೆ ದೈವವೇ ಕಾರಣವು. ಕೈಕೇಯಿಗೂ ಆದೈವವೇ ಪ್ರೇರಿಸಿರುವುದು.ಹಾಗಿಲ್ಲದಿದ್ದರೆ ನನ್ನಲ್ಲಿ ಅಸಾಧಾರಣವಾತ್ಸಲ್ಯವುಳ್ಳ ಅಕೆಗೆ, ನನ್ನನ್ನು ಹೀಗೆ ವ್ಯಸನದಲ್ಲಿರಿಸಬೇಕೆಂಬ ಬುದ್ದಿಯು ಹೇಗೆ ಹುಟ್ಟುತಿತ್ತು? ಇದನ್ನು ನೀನೇ ಚೆನ್ನಾಗಿ ಆಲೋ ಚಿಸಿ ನೋಡು, ಇದುವರೆಗೆ ನಾನು ಯಾವಾಗಲೂ ನನ್ನ ಮಾತೆಯರ ವಿಷ ಯದಲ್ಲಿ ಹೆತ್ತ ತಾಯಿಯೆಂದೂ, ಮಲತಾಯಿಯೆಂದೂ ಭೇದಬುದ್ಧಿಯನ್ನಿ ವ್ಯವನಲ್ಲ. ಇದನ್ನು ನೀನೂ ಚೆನ್ನಾಗಿ ತಿಳಿದಿರುವೆ! ಆ ಕೈಕೇಯಿಯಕೂಡ ನನ್ನನ್ನೂ , ಭರತನನ್ನೂ ಒಂದೇರೀತಿಯಿಂದ ನೋಡುತಿದ್ದಳು. ಹೀಗಿರುವಾಗ ಅವಳಿಗೆ ದೈವಪ್ರೇರಣೆಯಿಲ್ಲದಿದ್ದರೆ ಈ ಬುದ್ದಿಯು ಹೇಗೆ ಹುಟ್ಟುತಿತ್ತು ? ಮೊದಲಿಂದಲೂ ನನ್ನನ್ನು ಅಷ್ಟೊಂದು ವಾತ್ಸಲ್ಯದಿಂದ ನೋಡುತಿದ್ದ ಆಕೆ ಯು, ಈಗ ನನನು ಕರೆದು ತನ್ನ ಬಾಯಿಂದಲೆ ತಾನು.ನನಗೆ ಅಭಿಷೇಕವ ನ್ನು ಬಿಟ್ಟು ಕಾಡಿಗೆ ಹೋಗಬೇಕೆಂದು, ಆಡಬಾರದ ಈಕ್ರ ವಾಕ್ಯವನ್ನಾ ಡಿರುವಳಲ್ಲವೆ? ಇದಕ್ಕೆ ದೈವವಲ್ಲದೆ ಬೇರೆ ಯಾವ ಕಾರಣವನ್ನೂ ಹಿಸಬಹು ದು?ಮತ್ತು ಆಕೆಯು ಬಹಳ ಮೃದುಸ್ವಭಾವವುಳ್ಳವಳು, ಅದರಲ್ಲಿಯೂ ಮ

  • ಕಥಂಪ್ರಕೃತಿಸಂಪನ್ನಾ ರಾಜಪ್ರಿ ತಧಾಗುಣಾ|

ಬೂಯಾತ್ಸಾ ಪ್ರಾಕೃತೇ ವ ಸ್ತ್ರೀ ಮಡಾಂ ಭರ್ತೃಸದೌ||” ಎಂಬುದು ಇಲ್ಲಿ ಮೂಲವು. ಇಲ್ಲಿ ಪ್ರಕೃತಿ ಸಂಪನ್ಮಾ, ರಾಜಪುಶ್ರೀ,ತಥಾಗುಣಾ.'ಎಂಬೀ ಮೂರು ಏಶೇಷಣಗಳಿಂದ, ಕ್ರಮವಾಗಿ ಆ ಕೈಕೇಯಿಯ ಸುಭಾವವೂ, ವಂಶೋನ್ನತಿಯೂ, ಉತ್ತಮಗುಣವೂ ಹೇಳಲ್ಪಡು ನವು, ಇಂತಹ ಕೈಕೇಯಿಯುಪ್ರಾಕೃತಾ ಸ್ತ್ರೀವ'ಕೇವಲ ಸಾಮಾನ್ಯAಯಂತೆಎಂ ದರೆ, ತನಗೆ ಅನುರೂಪಳಲ್ಲದೆ ದುಭಾವದಿಂದಲೂ, ದುಷ್ಟುಲದಿಂದಲೂ,ದುರ್ಗು ಕಗಳಿಂದಲೂ ಕೂಡಿದ ಸ್ತ್ರೀಯಂತೆ, ಭರ್ತೃಸನ್ನಿಧ?” ತನ್ನ ಗಂಡನಿದಿರಾಗಿ, ಇತರ ಸಾಮಾನ್ಯಜನರ ಮುಂದೆಯಾಗಲಿ, ದೂತಮುಖದಿಂದಲಾಗಲಿ ಹೇಳಿದವಳಲ್ಲ. ತನ್ನ ಯು, ಈಗ ನನ್ನನ್ನು ಕರೆ