ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ho ಆಳ ಶ್ರೀಮದ್ರಾಮಾಯನವು (ಸರ್ಗ, ೨s' ಮುಖ್ಯವೆಂಬುದು ಸಿದ್ಧವಾಗುವುದಲ್ಲವೆ ? ಈ ಅನುಮಾನಪ್ರಮಾಣದಿಂದ ಲೇ ದೈವವಿರುವುದೆಂದು ನಾವು ಚೆನ್ನಾಗಿ ನಿರ್ಧರಿಸಬಹುದು. ಕಾರಗಳ ಫಲಾಫಲಗಳುಮಾತ್ರವಲ್ಲದೆ,ದೈವವನ್ನು ನಂಬುವುದಕ್ಕೆ ಬೇರೆ ಸಾಧನವಿಲ್ಲ. ಆದುದರಿಂದ ದೈವವೆಂಬುದನ್ನು ಕಾಲ್ಯದಬಲದಿಂದಲೇ ಅನುಮಾನಿಸಿತಿಳಿದು ಕೊಳ್ಳಬೇಕು. ದೈವವೆಂಬುದನ್ನು ಫಲಪ್ರಾಪ್ತಿಗೆಮೊದಲೇ ತಿಳಿಯಬಹುದಾ ನಮಗೆ ಪ್ರತಿಕೂಲವಾಗಿರುವುದೆಂದೂ ತೋರಿಬಂದರೆ, ಅದಕ್ಕೆ ತಕ್ಕ ಪ್ರತೀಕಾರವೇನೆಂದು ನಾವು ಚಿಂತಿಸಿಯಾದರೂ ಚಿಂತಿಸಬಹು ದು, ಫಲಪ್ರಾಪ್ತಿಗೆಮೊದಲು ಅದೃಷ್ಟವನ್ನು ನಿಶ್ಚಯಿಸುವುದಕ್ಕೆ ಆ ಗದಮೇಲೆ, ನಾವು ಯಾವ ಪುರುಷಪ್ರಯತ್ನವನ್ನು ತಾನೇ ಮಾಡ ಬಹುದು ? ಹೀಗೆ ದೈವವನ್ನು ಪುರುಷಪ್ರಯತ್ನದ ಬಲದಿಂದ ತಪ್ಪಿಸು ವುದಕ್ಕೆ ಎಂದಿಗೂ ಸಾಧ್ಯವಲ್ಲ. ಸುಖದುಃಖಗಳಾಗಲಿ, ಲಾಭನಷ್ಟಗ ಳಾಗಲಿ, ನಿಗ್ರಹಾನುಗ್ರಹಗಳಾಗಲಿ, ಜನನಮರಣಗಳಾಗಲಿ, ಲೋಕದಲ್ಲಿ ಕಾರಣವನ್ನು ತಿಳಿಯಬಾರದ ಯಾವಕಾರಗಳೇ ಆಗಲಿ, ಅವೆಲ್ಲವೂ ದೈವಾಧೀ ನವೆಂದೇ ತಿಳಿಯಬೇಕು. ಉಗ್ರ ತಪಸ್ಸನ್ನು ಮಾಡಿ ದೇವತೆಗಳನ್ನು ಕೂಡ ಲಕ್ಷಕ್ಕೆ ತಾರದ ವಿಶ್ವಾಮಿತ್ರಾದಿಮರ್ಹಷಿ್ರಗಳುಕೂಡ, ದೈವವಶರಾಗಿ, ತಾ ವು ನಡೆಸುತ್ತಿದ್ದ ವ್ರತೋಪವಾಸಾಥಿನಿಯಮಗಳನ್ನು ಬಿಟ್ಟು, ಕಾಮಕ್ರೋಧ ಗಳಿಗೊಳಗಾಗಿ ಮುರ್ದೆಯನ್ನು ಹೊಂದಿರುವರು. ಲೋಕದಲ್ಲಿ ಆರಂಭಿಸಿದ ಕಾರವು ತಪ್ಪಿ, ಅದಕ್ಕೆ ಮೊದಲು ಮನಸ್ಸಿನಲ್ಲಿಯೂ ಯೋಚಿಸದ ಬೇರೆ ಯಾವುದೋ ಒಂದು ಕಾರವು ಥಟ್ಟನೆ ಸಂಭವಿಸುವುದುಂಟಲ್ಲವೆ ? ಇದು ದೈವಿಕವಲ್ಲದೆ ಬೇರೆ ಯಾರ ಕಾರವು ? ನಾನು ಈಗ ಹೇಳಿರುವ ಬುದ್ಧಿ ವಾದಗಳೆಲ್ಲವನ್ನೂ ಯಥಾರ್ಥವೆಂದು ತಿಳಿ ! ನಾನು ಇದೆಲ್ಲವನ್ನೂ ಚೆನ್ನಾಗಿ ಯೋಚಿಸಿಯೇ ಮನಸ್ಸನ್ನು ಸ್ಥಿರಪಡಿಸಿಕೊಂಡು, ನನಗಾಗುವ ಪಟ್ಟಾಭಿಷೇ ಕವು ತಪ್ಪಿಹೋದರೂವ್ಯಸನಪಡದಿರುವೆನು. ಆದುದರಿಂದ ನೀನೂದೈವಶಕ್ತಿ ಯೇ ಪ್ರಬಲವೆಂಬುದನ್ನು ತಿಳಿದು, ವ್ಯಸನವನ್ನು ಬಿಟ್ಟು, ನನ್ನ ದಾರಿಯನ್ನನು ಸರಿಸು!ಅಭಿಷೇಕಾರವಾಗಿ ಈಗ ನಡೆದಿರುವ ಅಲಂಕಾರಾದಿಕಾರಗಳನ್ನು ತೆಗೆ ದುಬಿಡು! ಈ ಮಂಗಳಕುಂಭಗಳಿಂದಲೇ ನನಗೆ ತಾಪಸಯೋಗ್ಯವಾದ ವ್ರತ ಸ್ನಾನವನ್ನು ಮಾಡಿಸುವುದಕ್ಕೆ ಪ್ರಯತ್ನಿಸು! ಅಥವಾ ರಾಜದ್ರವ್ಯದಿಂದ