ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ ೫.] ಅಯೋಧ್ಯಾಕಾಂಡವು. ಆಳ ರಲ್ಲಿ ನೀನೇ ಮೇಲೆನಿಸಿಕೊಂಡಿರುವೆ.!ದೈವಬಲವನ್ನೂ ತಲೆಕೆಳಗುಮಾಡತಕ್ಕ ಮಹಾವಿಠ್ಯವುಳ್ಳ ನೀನು, ಕೇವಲದುರ್ಬಲವಾದ ದೈವವನ್ನು ಮಹಾಪ್ರ ಬಲವೆಂದು ಹೇಳುವೆಯಲ್ಲವೆ ! ಇದು ಕೇವಭ್ರಾಂತಿಯೇ ಹೊರತು ಬೇರೆ ಯಲ್ಲ. ದೈವವೆಂಬುದು ಯಾವಾಗಲೂ ದುರ್ಬಲರಾದವರಿಗೆ ಮಾತ್ರವೇ ಪರಿ ಗ್ರಾಹ್ಯವಾದುದು. ಪುರುಷಕಾರವಿಲ್ಲದೆ*ವೈವಕ್ಕೆ ಸ್ವತಃ ಯಾವಶಕ್ತಿಯೂ ಇಲ್ಲ. ಹೀಗೆ ಅಶಕ್ತವಾಗಿಯೂ, ಕೃಪಣವಾಗಿಯೂ ಇರುವ ದೈವವನ್ನು ಏನೆಂದು ನೀನು ಪ್ರಶಂಸೆಮಾಡುವೆ ? ಬಹುದೂರದವರೆಗೆ ಧಕ್ಕೆ ಸೂಕ್ತ ವನ್ನು ವಿಚಾರಿಸತಕ್ಕ ನೀನು, ಪಾಪಾತ್ಮರಾದ ಆ ಕೈಕೇಯಿದಶರಥರ ದುಸ್ವಭಾವವನ್ನು ವಿಚಾರಿಸದಿರಬಹುದೆ ? ಅಂತಹ ಪಾಪಿಗಳ ಮಾತನ್ನು ನಡೆಸದಿದ್ದ ಮಾತ್ರಕ್ಕೆ ನಿನಗೆ ಬರತಕ್ಕ ಧರೆಹಾನಿಯೇನು ? ಕೈಕೇಯಿ ದಶರಥರಿಬ್ಬರೂ ಸತ್ಯವೆಂಬ ಒಂದು ವ್ಯಾಜವನ್ನಿಟ್ಟುಕೊಂಡು, ನಿನಗೆ ಈ ವನವಾಸವನ್ನಾ ಜ್ಞಾಪಿಸಿದ್ದರೂ ಇರಬಹುದು. ಲೋಕದಲ್ಲಿ ಹೀಗೆ ಅನೇಕರುಂಟು. ಮೇಲೆಮಾತ್ರ ಧರವೆಂಬ ವ್ಯಾಜವನ್ನು ತೋರಿಸಿ, ಕಪಟ ದಿಂದ ಸ್ವಕಾರವನ್ನು ಸಾಧಿಸಿಕೊಳ್ಳುವವರನ್ನು ನೀನು ನೋಡಿಲ್ಲವೆ? ಮತ್ತು ಧಾರಿ ಕರ ವೇಷವನ್ನು ಹಾಕಿಕೊಂಡು, ಸ್ವಾರಪರರಾಗಿ ಕಾಠ್ಯಗಳನ್ನು ನಡೆ ಸುವವರೂ ಎಷ್ಟೋಮಂದಿಯುಂಟು. ಹಾಗೆಯೇ ಈಗ ಆ ಕೈಕೇಯಿದಶ ರಥರಿಬ್ಬರೇ, ಧರಕ್ಕೆ ಕಟ್ಟುಬಿದ್ದವರಂತೆ ನಟಿಸಿ, ನಿನ್ನ ಪಟ್ಟಾಭಿಷೇಕವನ್ನು ತಪ್ಪಿಸಿಬಿಡಬೇಕೆಂದು ದುರಾಲೋಚನೆಯನ್ನು ನಡೆಸಿರುವರು. ಈ ದುರಭಿ ಪ್ರಾಯವು ಅವರಿಗೆ ಈಗಲೇ ಹುಟ್ಟಿರುವುದೆಂದು ನಂಬಬೇಡ! + ಬಹುಕಾ

  • ಅದೃಷ್ಟವೆಂಬುದಕ್ಕೆ ಸ್ವತ: ಒಂದು ಕಾರವನ್ನು ಮಾಡುವುದಕ್ಕೆ ಶಕ್ತಿಯಿಲ್ಲ ದಿರುವಾಗ, ಅದರಿಂದ ಕಾರವು ಸಿದ್ಧಿಸುವುದೆಂಬುದು ಅಸಮಂಜಸವು. ಆದುದರಿಂದ ಕಾರದ ಫಲದಿಂದಲೇ ದೈವವಿರುವುದೆಂದು ಅನುಮಾನಿಸುವುದಕ್ಕೂ ಸಾಧ್ಯವಿಲ್ಲ. ಹೀಗೆ ಅದರ ಸ್ಥಿತಿಯೇ ಸಂದಿಗ್ಧವಾಗಿರುವಾಗ, ಅಂತಹ ವಸ್ತುವನ್ನು ಆಶ್ರಯಿಸುವೆನೆಂಬುದು ನಿನಗೆ ಕೇವಲಭ್ರಮೆಯೇ ಹೊರತು ಮತ್ತೆ ಬೇರೆಯಲ್ಲ” ಎಂದು ಹೇಳಿ ಲಕ್ಷಣನ್ನು, ಅದೃ ಹೃದಪ್ರಾಬಲ್ಯವನ್ನು ಹೇಳಿದ ರಾಮನ ಮತವನ್ನು ಖಂಡಿಸಿದುದಾಗಿ ತಿಳಿಯಬೇಕು,
  • ದಶರಥನು ಕೈಕೇಯಿಗೆ ವರವನ್ನು ಕೊಟ್ಟು, ಬಹುಕಾಲವಾಯಿತು, ಆದುದ ರಿಂದ ಕೈಕೇಯಿಯು ಇದಕ್ಕೆ ಮೊದಲು ಯಾವಾಗಲೋ ಆ ವರಗಳನ್ನು ಕೇಳಿ ತೆಗೆದು

29