ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯಣವು [ಸರ್ಗ, ೨. ಲಕ್ಕೆ ಮೊದಲೇ ! ಅವರಿಗೆ ಈ ದುರಾಲೋಚನೆಯಿದ್ದಿರಬೇಕು. ವರಪ್ರದಾನ ಕಾಲದಲ್ಲಿಯೇ ಅವರಿಬ್ಬರೂ ಸೇರಿ, ಈ ದುಶ್ಯಂತ್ರವನ್ನು ನಡೆಸಿರಬೇಕು. ಹಾಗಿಲ್ಲದಿದ್ದರೆ ಬಹುಕಾಲದ ಹಿಂದೆ ವಾಗ್ದಾನಮಾಡಿದ ವರಗಳನ್ನು ಇದು ವರೆಗೆ ನಿಲ್ಲಿಸಿಡಬೇಕಾದ ಕಾರಣವೇನು? ನಮ್ಮ ತಂದೆಗೆ ಈ ದುರಾಲೋಚನೆ ಯಿಲ್ಲದಿದ್ದರೆ ಆ ವರಗಳನ್ನು ಯಾವಾಗಲೋ ಕೊಟ್ಟುಬಿಡುತ್ತಿದ್ದನಲ್ಲವೆ? ಹಿರಿ ಯಮಗನಾದ ನಿನ್ನನ್ನು ಬಿಟ್ಟು ಬೇರೊಬ್ಬನಿಗೆ ರಾಜ್ಯಾಭಿಷೇಕವೆಂದರೇನು? ಲೋಕದಲ್ಲಿ ಯಾರುತಾನೇ ಇದನ್ನೂ ಓವರು ? ಈ ಲೋಕಕ್ಕೇ ಅಪ್ರಿಯ ವಾಗಿರುವ ಈ ಕಾವ್ಯವನ್ನು ನಾನು ಎಂದಿಗೂ ಸಹಿಸಲಾರೆನು! ಈ ಭಾಗದಲ್ಲಿ ಮಾತ್ರ ನೀನು ನನ್ನನ್ನು ಮನ್ನಿಸಬೇಕು ! ಮಹಾಬುದ್ಧಿಶಾಲಿಯಾದ ನಿನ್ನ ಮನಸ್ಸು ಇದ್ದಕ್ಕಿದ್ದ ಹಾಗೆ ಈ ರೀತಿಯಲ್ಲಿ ಮಾರ್ಪ್ಪಡುವುದಕ್ಕೆ ಕಾರಣ ವೇನು? ಯಾವ ಧರವನ್ನು ದ್ವೇಶಿಸಿ ನಿನ್ನ ಬುದ್ಧಿಯು ಹೀಗೆ ಭೇದಿಸಿಹೋಗಿ ರುವುದೋ, ಯಾವ ಥರಕ್ಕಾಗಿ ನಿನ್ನ ಮನಸ್ಸು ಹೀಗೆ ಮರುಳಾಗಿರು ವುದೋ, ಪಿತೃವಾಕ್ಯ ಪರಿಪಾಲನವೆಂಬ ಆ ಧರವು, ಈಗ ನನಗೆ ಬಹಳಷ ಕಾರಣವಾಗಿರುವುದು. ನಿನ್ನ ಪೌರುಷದಿಂದ ನೀನು ವಿಮುಖವಾದ ದೈವ ವನ್ನು ಅನುಕೂಲಪಡಿಸಿಕೊಳ್ಳತಕ್ಕ ಶಕ್ತಿಯುಳ್ಳವನಾಗಿರುವಾಗಲೂ, ಕೈ ಕೇಯಿಯಬಲೆಗೆ ಸಿಕ್ಕಿ,ಅನ್ಯಾಯಕ್ಕೆ ಪ್ರವರ್ತಿಸಿರುವ ತಂದೆಯ ಆಜ್ಞೆಯನ್ನು ಕೊಳ್ಳಬಹುದಾಗಿತ್ತು. ಅಥವಾ ಒಂದು ವೇಳೆ ಕೈಕೇಯಿಯು ತಾನಾಗಿ ಕೇಳದಿದ್ದ ರೂ,ಧರ ನಿರತನಾದ ದಶರಥನು ತಾನೇ ಅವಳನ್ನು ನಿರ್ಬಂಧಿಸಿ ಕೊಟ್ಟುಬಿಡುತಿದನೇ ಹೊರತು, ಇದುವರೆಗೆ ಅವುಗಳನ್ನಿಡುತ್ತಿರಲಿಲ್ಲ. ಹೀಗಿದ್ದರೂ ಇದುವರೆಗೆ ಅವುಗಳ ನ್ನು ಬಚ್ಚಿಟ್ಟುಕೊಂಡಿದ್ದು, ಈಗ ನಿನ್ನ ಅಭಿಷೇಕದ ಸನ್ನಾಹಗಳೆಲ್ಲವೂ ಸಿದ್ಧವಾಗಿರು ವಸಂದರ್ಭದಲ್ಲಿ, ಆ ವರಗಳನ್ನು ಹೊರಪಡಿಸಿದುದನ್ನು ನೋಡಿದರೆ,ಇದೊಂದು ತ್ರವೆಂದೇ ತೋರುವುದೆಂದು ಲಕ್ಷಣನ ಅಭಿಪ್ರಾಯವು, ಹಿರಿಯಮಗನಾದ ರಾಮನಿ ರುವಾಗ ಆತನನ್ನು ಬಿಟ್ಟು ಭರತನಿಗೆ ರಾಜ್ಯವನ್ನು ಕೊಡುವುದು ಉಚಿತವಲ್ಲ. ಇದಕ್ಕೆ ಗಿ ರಾಮನಿಗೆ ಅಭಿಷೇಕವನ್ನು ನಡೆಸುವುದಕ್ಕೆ ಪ್ರಯತ್ನ ಪಟ್ಟಂತೆ ನಟಿಸಿ, ಈನಡುವೆ ಈ ಎರಡುವರಗಳ ಸಂದರ್ಭವನ್ನು ತಂದು, ಈ ಅಭಿಷೇಕವನ್ನು ತಪ್ಪಿಸಿಬಿಡಬೇಕೆಂದು ಕೈಕೇಯಿದಶರಥರಿಬ್ಬರೂ ಬಹುಕಾಲಕ್ಕೆ ಮೊದಲೇ ಈ ದುರಾಲೋಚನೆಯನ್ನು ಮಾ ಡಿಟ್ಟರಂದು ಅವನ ಮನೋಭಾವವು