ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫೨ ಶ್ರೀಮದ್ರಾಮಾಯಣವು [ಸರ್ಗ,೨೩, ಶಕ್ಕೂ ಅಡಗದೆ, ಉನ್ಮಾರ್ಗದಲ್ಲಿ ಹೋಗುತ್ತಿರುವ ಮದದಾನೆಯನ್ನು ತಡೆ ದಿಡುವ ಮಾವಟಿಗನಂತೆ, ನಿನಗೆ ವಿಮುಖವಾಗಿ ಹೋಗುತ್ತಿರುವ ದೈವವನ್ನು ನಿನಗೆ ಈಗಲೇ ಅಭಿಮುಖವಾಗಿ ಮಾಡುವೆನು. ನನ್ನ ಪಾರುಷವನ್ನಾದರೂ ನೋಡು! ದಿಕ್ಕಾಲಕರೆಲ್ಲರೂ ಒಂದಾಗಿ ಬಂದು ನನ್ನನ್ನಿ ದಿರಿಸಿದರೂ, ಮೂರು ಲೋಕವೂ ಒಟ್ಟುಗೂಡಿ ಬಂದು ತಾಗಿದರೂ, ಈಗೆ ನಾನು ಸಂಕಲ್ಪಿಸಿರುವ ನಿನ್ನ ಅಭಿಷೇಕವನ್ನು ತಪ್ಪಿಸಲಾರರು. ಇನ್ನು ಆ ನಮ್ಮ ಮುದಿತಂದೆಯು ಏಕಾ ಕಿಯಾಗಿದ್ದು ಏನುಮಾಡಬಲ್ಲನು? ಅಣ್ಣಾ! ಇನ್ನು ನೀನೇ ಮಹಾರಾಜನೆಂದು ತಿಳಿ! ಈಗ ರಹಸ್ಯವಾಗಿ ಯಾರು ಈ ದುರಂತ್ರವನ್ನಾಲೋಚಿಸಿರುವರೋ, ಆ ಪಾಪಿಗಳು ನಿನಗೆ ಹೇಳಿದ ಆ ಹದಿನಾಲ್ಕು ವರ್ಷಗಳ ವನವಾಸವನ್ನು ತಾವೇ ಅನುಭವಿಸುವಂತೆ ಮಾಡುವೆನು, ಮತ್ತು ಯಾವಳು ನಿನ್ನ ಅಭಿಷೇಕ ವನ್ನು ತಪ್ಪಿಸಿ ತನ್ನ ಮಗನಿಗೆ ರಾಜ್ಯವನ್ನು ಕೊಡಿಸಬೇಕೆಂದು ದುರಾಶೆಪಟ್ಟೆ ರುವಳೋ, ಅವಳಿಗೂ,ಅವಳ ಮಾತಿಗೆ ಮರುಳಾಗಿರುವ ಆ ಮುದಿತಂದೆಗೂ ಉಂಟಾಗಿರುವ ಈ ದುರುದ್ದೇಶಕ್ಕೆ ಈಗಲೇ ಭಂಗವನ್ನು ತರುವೆನು. ತಂದೆಗೆ ದೈವಬಲವಿರುವಾಗ ನಿನ್ನ ಪೌರುಷವು ಯಾವಕೆಲಸಕ್ಕೆ ಬಂದೀತೆಂದು ನೀನು ಶಂಕಿಸಬಹುದು. ಅಣ್ಣಾ ! ನನ್ನ ಪೌರುಷದಮುಂದೆ ದೈವವೂ ನಿಲ್ಲಲಾ ರದೆಂದು ತಿಳಿ! ತಂದೆಯಾದರೇನು ? ಬೇರೆ ಯಾರಾದರೇನು ? ನನ್ನೊಡನೆ ವಿರೋಧಿಸಿದವನಿಗೆ ಎಷೆ ದೈವಬಲವಿದ್ದರೂ, ಆದರಿಂದುಂಟಾಗತಕ ಶ್ರೇ ಯಸ್ಸಿಗಿಂತಲೂ, ನನ್ನ ಪೌರುಷದಿಂದುಂಟಾಗತಕ್ಕೆ ಅಪಾಯವೇ ಹೆಚ್ಚೆ೦ ದು ತಿಳಿ ! ನನ್ನ ಪೌರುಷದಲ್ಲಿ ಸಿಕ್ಕಿಕೊಂಡವನನ್ನು ದೈವವೂ ಬಿಡಿಸಿಕೊಳ್ಳ ಲಾರದು, ನೀನು, ಇನ್ನು ಮುಂದೆ ಬಹುಕಾಲದವರೆಗೆ ರಾಜ್ಯಪರಿಪಾಲನೆಯ ನ್ನು ಮಾಡಿ, ರಾಜ್ಯಸುಖಗಳನ್ನೆಲ್ಲಾ ಮನಸ್ತ್ರಪ್ತಿಯಾಗುವವರೆಗೂ ಅನು ಭವಿಸಿ, ಸಾವಿರಾರುವರ್ಷಗಳಮೇಲೆ ವಾನಪ್ರಸ್ಥಾಶ್ರಮವನ್ನoಗೀಕರಿಸಿ ನಿನ್ನ ಇಷ್ಟದಂತೆ ನೀನೇ ಕಾಡಿಗೆ ಹೊರಟುಹೋದರೂ, ಆಮೇಲೆಯೂ, ನಿನ್ನ ಮಕ್ಕಳೇ ರಾಜ್ಯವನ್ನನುಭವಿಸಬೇಕೇ ಹೊರತು, ಭರತನಿಗೆ ಎಂದಿ ಗೂ ಈ ರಾಜ್ಯವು ದೊರಕಲಾರದು. ಶಕ್ತಿಯಿರುವವರೆಗೂ ಪ್ರಜೆಗಳನ್ನು ಧರದಿಂದ ಪಾಲಿಸಿ, ಆಮೇಲೆ ಆ ಪ್ರಜೆಗಳನ್ನು ಮಕ್ಕಳ ವಶಕ್ಕೊಪ್ಪಿಸಿ, ಪ್ರಜೆಗಳನ್ನು ಪುತ್ರವಾತ್ಸಲ್ಯದಿಂದ ಕಾಪಾಡುತ್ತಿರಬೇಕೆಂದು ಅವರಿಗೂ