ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗರ್ಗ, ೨೪, ] ಅಯೋಧ್ಯಾಕಾಂಡವು. ನಿವಾರಕನಾದ ಆ ರಾಮನನ್ನು ಕುರಿತು «ವತೃರಾಮಾ! ಸರಿ! ಇನ್ನು ಮಾಡ ತಕ್ಕುದೇನು? ಹಾಗೆಯೇ ನಡೆಸುತ್ತಿರುವೆನು.”ಎಂದಳು. ಧಾರೀಕರಲ್ಲಿ ಮೇಲೆ ನಿಸಿಕೊಂಡ ರಾಮನು, ತಾಯಿಯು ಹೇಳಿದ ಆ ಮಾತನ್ನು ಕೇಳಿ,ಇನ್ನೂ ವ್ಯಸ ನದಲ್ಲಿಯೇ ಮುಳುಗಿರುವ ಆಕೆಯನ್ನು ನೋಡಿ, ಪುನಃ ಒಂದಾನೊಂದು ಮಾ ತನ್ನು ಹೇಳುವನು. (ಎಲೆ ತಾಯೆ!ತಂಯ ಮಾತನ್ನು ನಡೆಸಬೇಕೆಂಬ ನಿಯ ಮವು ನನಗೆ ಮಾತ್ರವೇ ಅಲ್ಲ. ನಿನಗೂ ಆತನ ಆಜ್ಞೆಯಂತೆ ನಡೆಯುವುದೇ ಮುಖ್ಯ ಕರ್ತವ್ಯವು.ಆತನನ್ನು ನೀನು ಗಂಡನೆಂದುಮಾತ್ರವೇ ಎಣಿಸಬೇಡ! ತನೇ ನಮಗೆಲ್ಲರಿಗೂ ರಾಜನು! ಆತನೇ ನಮಗೆ ಆಚಾರನು! ಆತನೇ ನಮಗೆಪೂ ಜ್ಯನು.ಆತನೇ ನಮಗೆ ಸರೂವಿಷಯಗಳಲ್ಲಿಯೂ ನಿಯಾಮಕನಾದ ಪ್ರಭುವು. ಆದುದರಿಂದ ನಮ್ಮೆಲ್ಲರಿಗೂ ಆತನ ಆಜ್ಞೆಯನ್ನು ನಡೆಸಬೇಕಾದುದೇ ಪರ ಮಧ ವು. ಅಮಾ ! ಈಗ ನಾನು ನಿನ್ನ ಮಾತನ್ನು ಲಕ್ಷೀಕರಿಸದೆ ಕಾಡಿಗೆ ಹೋಗುವೆನೆಂದು ನೀನು ನನ್ನಲ್ಲಿ ಕೆಪಿಸಬೇಡ : * ನಾನು ಕಾಡಿನಲ್ಲಿರ ಬೇಕಾದುದು ಮೊದಲು ಒಂಬತ್ತು ವರ್ಷಗಳು!ಅದರಮೇಲೆ ಐದುವರ್ಷಗಳು! ಇಷ್ಟೆ ಅಲ್ಲವೆ?ಈ ಬಹುಸ್ವಲ್ಪ ಕಾಲವನ್ನು ಕಾಡಿನಲ್ಲಿವಿನೋದದಿಂದ ಕಳೆದು ಕಾಲಹರಣವನ್ನು ಮಾಡಿ, ಸಂತೋಷದಿಂದ ಹಿಂತಿರುಗಿ ಬಂದು, ಆಮೇಲೆ ಎಂದೆಂದಿಗೂ ನಿನ್ನ ಆಜ್ಞಾಧಾರಕನಾಗಿರುವೆನು.”ಎಂದನು. ಈ ಮಾತನ್ನು ಕೇಳಿ ಪುತ್ರವತ್ಸಲೆಯಾದ ಆ ಕೌಸಲ್ಯಯು, ತನ್ನ ಮನಸ್ಸಿನ ದುಃಖವನ್ನು ತಡೆಯಲಾರದೆ ಕಣ್ಣೀರನ್ನು ಬಿಡುತ್ಯ, ಪ್ರಿಯಪುತ್ರನಾದ ರಾಮನನ್ನು ಕುರಿತು « ಎಲೆ ವತ್ರನೆ ! ನೀನು ಹೇಳುವುದೇನೋ ನಿಜವು. ಆದರೆ ಈ' ಸವತಿ ಯರ ನಡುವೆ ಸಿಕ್ಕಿಕೊಂಡು ನಾನು ಎಂದಿಗೂ ಜಿವಿಸಿರಲಾ ರನು. ತಂದೆಯ ಆಜ್ಞೆಯಂತೆ ನೀನು ಕಾಡಿಗೆ ಹೋಗಬೇಕೆಂದೇ ಸಿಲ್ಸ್

  • ಇಲ್ಲಿ “ವಿಕೃತ್ಯ ನವ ಪಂಚಟ” ಎಂದು ಮೂಲವು, ಹದಿನಾಲ್ಕು ವರ್ಷಗ ಇಂದು ಕೂಡಿಸಿ ಹೇಳದೆ, "ನವ ಪಂಚಚ” ಒಂಬತ್ತು ವರ್ಷಗಳು, ಐದುವರ್ಷಗಳೆಂ ದು ಬಿಡಿಸಿ ಹೇಳಿದುದೇಕೆಂದರೆ, ಬಹುಸ್ವಲ್ಪ ಕಾಲವೆಂಬುದನ್ನು ತೋರ್ಪಡಿಸುವುದಕ್ಕಾ ಗಿಯೇ ಹೊರತು ಬೇರೆಯಲ್ಲ. ಹಾಗೆಯೇ ವಿಕೃತ್ಯ" ಎಂಬುದರಿಂದ ಆ ಸ್ವಲ್ಪ ಕಾಲ ವೂ ತನಗೆ ಬಹುವಿನೋದದಿಂದ ಕಳೆದು ಹೋಗುವುದೆಂದು ತಾಯಿಗೆ ಆಪ್ಯಾಯನಾ ರವಾಗಿ ಹೇಳಿದಂತೆ ಭಾವಿಸಬೇಕು.