ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- He ಶ್ರೀಮದ್ರಾಮಾಯಣವು [ಸರ್ಗ, ೨೪ ಸಿರುವ ಪಕ್ಷದಲ್ಲಿ ನನ್ನನ್ನೂ ನಿನ್ನೊಡನೆಯೇ ಕರೆದುಕೊಂಡು ಹೋಗು. *ಕಾಡುಜಿಂಕೆಯಂತೆ ನಾನೂ ಅಲ್ಲಿಯೇ ಇದ್ದು ಕಾಲವನ್ನು ಕಳೆಯುವೆನು.” ಎಂದಳು. ಹೀಗೆ ಗೋಳಿಡುತ್ತಿರುವ ತಾಯಿಯ ದುಃಖವನ್ನು ನೋಡಿಸಹಿಸ ಲಾರದೆ, ರಾಮನು ತಾನೂ ಅಳುತ್ತ, ಅಮ್ಮಾ! ಸ್ತ್ರೀಯರು ಬದುಕಿರುವವರೆ ಗೋ ಗಂಡನೇ ದೈವವು;ಆ ಗಂಡನೇ ಪ್ರಭುವು. ಆದುದರಿಂದ ನಿನಗೂನನಗೂ ಆದಶರಥನೇ ನಿಯಾಮಕನು. ಈ ಲೋಕಕ್ಕೆಲ್ಲವೂನಾಥನೆನಿಸಿಕೊಂಡ ಮಹಾ ಬುದ್ದಿವಂತನಾದ ಆ ರಾಜನು ಬದುಕಿರುವಾಗ, ನಾವು ಅನಾಥರೆಂದು ಹೇಳಿಕೊಳ್ಳುವುದುಚಿತವೇ? ಆದುದರಿಂದ ನಿನ್ನನ್ನು ಪೋಷಿಸತಕ್ಕ ರಾಜರು ವಾಗ ನೀನು ಹೇಗೆ ತಾನೇ ಅನಾಥೆಯಾಗುವೆ? ಭರತನ ವಿಷಯದಲ್ಲಿಯೂ ನೀನು ಬೇರೆ ವಿಧವಾಗಿ ಯೋಚಿಸಬೇಕಾದುದಿಲ್ಲ. ಆತನು ಬಹಳ ಥರ ಬುದ್ಧಿ `ಯುಳ್ಳವನು. ಸಮಸ್ತಭೂತಗಳಲ್ಲಿಯೂ ಪ್ರಿಯವನ್ನೇ ನುಡಿಯತಕ್ಕವನು, ಯಾವಾಗಲೂ ಧರವನ್ನು ಬಿಟ್ಟು ಹೋಗತಕ್ಕವನಲ್ಲ. ನಿನ್ನ ಮನಸ್ಸನ್ನು ಸರಿಸಿಯೇ ನಡೆಯುವನು. ಒಂದುವೇಳೆ ಆತನ ತಾಯಿಯೇ ಬಂದು ಅವನನ್ನು ನಿರ್ಬಂಧಿಸಿದರೂ ಅಧರಕ್ಕೆ ಹೋಗತಕ್ಕವನಲ್ಲ. ಆತನ ವಿಷಯದಲ್ಲಿ ನೀನು ಸ್ವಲ್ಪವೂ ಶಂಕಿಸಬೇಕಾದುದಿಲ್ಲ.ಎಲೆ ಜನನಿ! ಅದೆಲ್ಲವೂ ಹಾಗಿರಲಿ! ನಾನು ಇತ್ತಲಾಗಿ ಕಾಡಿಗೆ ಹೊರಟಮೇಲೆ, ತಂದೆಯಾದ ದಶರಥನು ಈ ಪತ್ರವಿರ ಹದಿಂದ ಸಲವೂ ಆಯಾಸಪಡದಹಾಗೆ ನೋಡಿಕೊಳ್ಳುವ ಭಾರವು ನಿನಗೆ ಸೇರಿದೆ. ಬಹುಜಾಗರೂಕಳಾಗಿ ಆತನ ಕ್ಷೇಮಲಾಭವನ್ನು ವಿಚಾರಿಸುತ್ತಿರು. ಯಾರಿಗಾದರೇನು ? ಪತ್ರವಿರಹವೆಂಬುದು ಬಹಳ ವ್ಯಸನವನ್ನುಂಟುಮಾಡು ವುದು. ನಮ್ಮ ತಂದೆಯು ಮೊದಲೇ ವೃದ್ಧನು.ಇದರಮೇಲೆ ಭಯಂಕರವಾದ ಈ ಪುತ್ರಶೋಕವು ಆತನ ದೇಹವನ್ನು ಕೆಡಿಸದಂತೆ ನೀನು ಎಚ್ಚರಿಕೆಯಿಂದ ಆತನಿಗೆ ಹಿತಕರವಾದ ಕಾವ್ಯಗಳನ್ನು ಮಾಡುತ್ತಿರು. ಅಮ್ಮಾ! ನಿನಗೆ ನಾನು ಹೇಳಬೇಕಾದುದೊಂದೂ ಇಲ್ಲ. ಆದರೂ ಒಂದೆರಡು ವಿಷಯಗಳನ್ನು ಜ್ಞಾಪಿಸುವೆನು ಕೇಳು. ಯಾವಾಗಲೂ ವ್ರತೋಪವಾಸಗಳನ್ನು ನಡೆಸಿ

  • ಇಲ್ಲಿ ಕಾಡುಜಿಂಕೆಯೆಂದು ಹೇಳಿರುವುದರಿಂದ, ಕಾಡಿನಲ್ಲಿ ಜಿಂಕೆಗಳು ಸಂ ತೋಷದಿಂದಿರುವಂತೆ,ನಿನ್ನೊಡನೆ ನಾನೂ ನಿಶ್ಚಿಂತಳಾಗಿರಬಹುದೆಂದು ಅಭಿಪ್ರಾಯವ

+


........