ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪to ಶ್ರೀಮದ್ರಾಮಾಯಣವು [ಸರ್ಗ' ೨೫ ನೀನು ಪಿತೃವಾಕ್ಯ ಪರಿಪಾಲನವೆಂಬ ವ್ರತವನ್ನು ಮುಗಿಸಿ, ಕೃತಾರ್ಥನಾಗಿ, ತಂದೆಯ ಋಣವನ್ನು ತೀರಿಸಿ, ಹಿಂತಿರುಗಿಬಂದಮೇಲೆಯೇ ನಾನು ಸೌಖ್ಯ ವನ್ನು ಹೊಂದಬೇಕು. ರಾಮಾ ! ದೈವಗತಿಯನ್ನು ಹೀಗೆಂದು ನಿರ್ಣ ಯಿಸುವುದಕ್ಕೆ ಯಾರಿಂದಲೂ ಸಾಧ್ಯವಲ್ಲ. ಆ ದುರ್ದೈವದ ಪ್ರೇರಣೆಯಿಂ ದಲೇ ಅಲ್ಲವೇ, ಈಗ ನಾನು ಹೊಟ್ಟೆಯಲ್ಲಿ ಹುಟ್ಟಿದ ಮಗನಾದ ನಿನ್ನನ್ನು ಕ ರೆದು, ಕಾಡಿಗೆ ಹೋಗೆಂದು ಬಾಯಿಬಿಟ್ಟು! ಹೇಳಬೇಕಾದ ಕಾಲವು ಬಂದೊ ದಗಿತು. ಆ ದೈವವು ನಿನ್ನ ತಾಯಿಯಾದ ನನ್ನ ಬಾಯಿಯಿಂದಲೇ ಈ ಮಾತ ನ್ನು ನುಡಿಸಿತಲ್ಲವೆ? ಎಲೆ ಪುತ್ರನೇ! ಇನ್ನು ನೀನು ಹೊರಡು ! ಮಹಾಬಾಹುಬ 'ಲವುಳ್ಳ ನೀನು ಕ್ಷೇಮದಿಂದ ಹಿಂತಿರುಗಿಬಂದು, ಆಮೇಲೆ ನಿನ್ನ ಪ್ರಿಯವಾಕ್ಯ ಗಳಿಂದ ನನ್ನನ್ನು ಆನಂದಗೊಳಿಸು! ನೀನು ಹದಿನಾಲ್ಕು ವರ್ಷಗಳವರೆಗೆ ಜಟಾ ವಲ್ಕಲಗಳನ್ನು ಧರಿಸಿ ಕಾಡಿನಲ್ಲಿದ್ದು,ಕ್ಷೇಮದಿಂದ ಹಿಂತಿರುಗಿ ಬರುವಾಗ,ನಿನ್ನ ನ್ನು ನೋಡಿ ಆನಂದಿಸತಕ್ಕ ಕಾಲವು ಈಗಲೇ ನನಗೆ ಒದಗಿಬರಬಾರದೇ?”ಎಂದ ಳು. ಹೀಗೆ ರಾಮನು ಪಿತೃವಾಕ್ಯ ಪರಿಪಾಲನಕ್ಕಾಗಿ ಕಾಡಿಗೆ ಹೋಗಬೇಕೆಂದು ನಿಶ್ಚಯಿಸಿಕೊಂಡಿರಲು, ಕೌಸಿಯು ಆತ್ಯಾದರದಿಂದ ಆತನನ್ನು ನೋಡಿ, ಆತನಿಗೆ ಪ್ರಯಾಣ ಕಾಲದಲ್ಲಿ ಮಾಡಬೇಕಾದ ಮಂಗಳಾತೀಬ್ಯಾಡಗಳನ್ನು ಮಾಡುವುದಕ್ಕೆ ತೊಡಗಿದಳು. ಇಲ್ಲಿಗೆ ಇಪ್ಪತ್ತುನಾಲ್ಕನೆಯ ಸರ್ಗವು. ( ಕಸಿಯು ರಾಮನಿಗೆ ಮಂಗಳಾಶೀದ್ವಾದಗಳನ್ನು . ++ *ಸಲ್ಯಯು .. ಮಾಡಿದುದು. ಕೌಸಲ್ಯಯು ಯುಕ್ತಾಯುಕ್ತಗಳನ್ನು ಚೆನ್ನಾಗಿ ವಿಚಾರಿಸತಕ್ಕ ಉದಾ ರಮನಸ್ಸುಳ್ಳವಳಾದುದರಿಂದ, ತಾನು ಇದುವರೆಗೆ ಹಿಡಿದಿದ್ದ ಹಣವನ್ನು ಬಿಟ್ಟು, ರಾಮನ ಮತವನ್ನೇ ಹಿಂಬಾಲಿಸಿದಳು. ಇದುವರೆಗೂ ತಾನು ಎಡೆ ಬಿಡದೆ ಕಣ್ಣೀರನ್ನು ಬಿಟ್ಟು ಅಳುತಿದ್ದುದರಿಂದ, ತನಗುಂಟಾದ ಅಶುಚಿತ್ವ ವನ್ನು ನೀಗಿಸುವುದಕ್ಕಾಗಿ ಆಚಮನವನ್ನು ಮಾಡಿ ಬಂದು, ರಾಮನಿಗೆ ಮಂಗ ಳಾತೀರಾದಗಳನ್ನು ಮಾಡತ್ತಾ, ಆತನನ್ನು ಕುರಿತು 11 ವತ್ಸ ರಾಮಾ ! ಇನ್ನು ನಾನು ನಿನ್ನನ್ನು ತಡೆಯಲಾರನು. ನಿನ್ನ ಇಷ್ಟದಂತೆ ನೀನು ಕಾಡಿಗೆ ಹೋಗಿಬರಬಹುದು. ಆದರೆ ನೀನುಆಲ್ಲಿರಬೇಕಾದಅವಧಿಯು ಕಳೆದೊಡನೆಯೇ