ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪, ಶ್ರೀಮದ್ರಾಮಾಯಣವು [ಸರ್ಗ, ಹಗಲು ರಾತ್ರಿಗಳು, ಮುಹೂರ್ತಗಳು, ಇವೇ ಮೊದಲಾದ ಕಾಲಪರಿಮಾಣ ಗಳೂ ನಿನಗೆ ಮಂಗಳವನ್ನುಂಟುಮಾಡಲಿ! 'ಧ್ಯಾನಯೋಗಗಳೂ, ಶ್ರುತಿ ಸ್ಕೃತಿಗಳಲ್ಲಿ ಪ್ರತಿಪಾದಿತಗಳಾದ ಥರವೂ ನಿನಗೆ ಯಾವಾಗಲೂ ಮಂಗಳ ವನ್ನುಂಟುಮಾಡಲಿ! ಪೂಜ್ಯನಾದ ಕುಮಾರಸ್ವಾಮಿಯೂ, ಚಂದ್ರನೂ, ಬೃಹಸ್ಪತಿಯೂ, ಸಪ್ತರ್ಷಿಗಳೂ, ನಾರದನೂ, ನಿನಗೆ ಸತ್ವವಿಧದಲ್ಲಿಯೂ, ಮಂಗಳವನ್ನುಂಟುಮಾಡಲಿ ! ದಿಕ್ಷಾಲಕರೊಡಗೂಡಿದ ಲೋಕಪ್ರಸಿದ್ದಗ ಳಾದ ದಿಕ್ಕುಗಳೂ, ಈ ನನ್ನ ಪ್ರಾರನೆಗೆ ಪ್ರಸನ್ನರಾಗಿ, ನೀನು ಕಾಡಿನಲ್ಲಿ ರುವವರೆಗೂ ನಿನ್ನನ್ನು ಕ್ಷೇಮದಿಂದ ಕಾಪಾಡಲಿ! ಸಪ್ರಕುಲಪಕ್ವತಗಳೂ, ಸಪ್ತಸಮುದ್ರಗಳೂ, ಕುಬೇರ, ವರುಣನೂ, ಭೂಮಾಕಾಶಗಳೂ, ಸ್ವರ್ಗಲೋಕವೂ, ಸಮಸ್ಯಪುಣ್ಯನದಿಗಳೂ, ಸಮಸ್ತ ನಕ್ಷತ್ರಗಳೂ, ನವ ಗ್ರಹಗಳೂ, ಆಯಾಗ್ರಹಗಳ ಆಧಿದೇವತೆಗಳೂ, ಅಹೋರಾತ್ರಿಗಳೂ, ತ್ರಿ ಸಂಧ್ಯಗಳೂ, ಕಾಡಿನಲ್ಲಿ ನಿನ್ನನ್ನು ಕಾಪಾಡಲಿ! ಪವಿತ್ರಗಳಾದ ಆರುಋತು ಗಳೂ, ಮಾಸಗಳೂ,ಸಂವತ್ಸರಗಳೂ, ಕಾಷ್ಠೆ,ಕಲೆ, ಮೊದಲಾದ ಕಾಲವಿ ಭಾಗಗಳೂ ನಿನಗೆ ಕ್ಷೇಮವನ್ನು ಕೊಡಲಿ! ಮುನಿವೇಷವನ್ನು ಧರಿಸಿ ಕಾಡಿ ನಲ್ಲಿ ಸಂಚರಿಸುತ್ತಿರುವ ನಿನಗೆ, ದೇವದಾನವರಿಬ್ಬರೂ ಸಮಪ್ರೇಮದಿಂದ ಸೌಖ್ಯವನ್ನು ಕೊಡುತ್ತಿರಲಿ ! ಯಾವಾಗಲೂ ಕೂರಸ್ವಭಾವವುಳ್ಳವರಾ ದ ರಾಕ್ಷಸರಿಂದಲೂ, ಪಿಶಾಚಗಳಿಂದಲೂ, ಮಾಂಸಭಕ್ಷಕಗಳಾದ ಇತರ ಕ್ರೂರಮೃಗಗಳಿಂದಲೂ ನಿನಗೆ ಯಾವಾಗಲೂ ಭಯವಿಲ್ಲದಿರಲಿ ! ಕಾಡು ಕಪಿಗಳು, ತೋಳುಗಳು, ಕಾಡುನೋಣಗಳು, ಹುಳುಗಳು, ಇವೇ ಮೊದಲಾದ ವಿಷಜಂತುಗಳಿಂದಲೂ ನಿನಗೆ ಕಾಡಿನಲ್ಲಿ ಯಾವ ಭಯವೂ ಇಲ್ಲದಿರಲಿ! ಕಾಡಾ ನೆಗಳೂ, ಸಿಂಹಗಳೂ, ಹುಲಿಕರಡಿಗಳೂ, ಕಾಡುಹಂದಿ ಮೊದಲಾದ ಕೊರೆಯುಳ್ಳ ಮೃಗಗಳೂ, ಕಾಡೆಮ್ಮೆ ಮೊದಲಾದ ಕೊಂಬುಳ್ಳ ಕ್ರೂರ ಮೃಗಗಳೂ,ನಿನಗೆ ಕೇಡನ್ನುಂಟು ಮಾಡದಿರಲಿ!ಮತ್ತು ಕಾಡಿನಲ್ಲಿ ಮನುಷ್ಯ ಮಾಂಸವನ್ನು ಭಕ್ಷಿಸತಕ್ಕ ಇತರ ಕ್ರೂರಜಂತುಗಳಾವುವುಂಟೋ ಅವೆಲ್ಲವ ದಿಂದ ಹಿಂದೆ ಹೇಳಿದುದನ್ನು ಮರೆತು, ಪುನಃಶನಃ ಅದನ್ನೇ ಹೇಳುತ್ತಿದ್ದಳೆಂದೂ ಕೆಲವರ ಅಭಿಪ್ರಾಯವುಂಟು.