ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

, ೨೫] ಅಯೋಧ್ಯಾಕಾಂಡವ ನ್ಯೂ ಇಲ್ಲಿ ನಾನು ಪ್ರಾರ್ಥಿಸಿಕೊಳ್ಳುವೆನು. ಅವು ನನ್ನಲ್ಲಿ ಪ್ರಸನ್ನಗಳಾಗಿ ನಿನ್ನನ್ನು ಬಾಧಿಸದಿರಲಿ ! ನೀನು ಸಂಚರಿಸತಕ್ಕ ಮಾರ್ಗಗಳೆಲ್ಲವೂ ಫಲ ಮೂಲಾದಿಗಳಿಂದ ಸಮೃದ್ಧವಾಗಿ ನಿನಗೆ ಸೌಖ್ಯಪ್ರದಗಳಾಗಿರಲಿ ! ನಿನ್ನ ಪರಾಕ್ರಮಕಾರಗಳೆಲ್ಲವೂ ತಡೆಯಿಲ್ಲದೆ ಸಿದ್ಧಿಯನ್ನು ಹೊಂದಲಿ ! ಈ ಸ್ವಸ್ಮಯನಗಳೇ ನಿನಗೆ ಸಮಸ್ತ ಸಂಪತ್ತುಗಳಿಗೂ ಮೂಲಾಧಾರವಾಗಿರಲಿ! ಇವುಗಳನ್ನು ಹೊಂದಿ ನೀನು ಕಾಡಿನಲ್ಲಿ ಕ್ಷೇಮದಿಂದಿದ್ದು ಬರುವನಾಗು. ಅಂತರಿಕ್ಷದಲ್ಲಿಯೂ, ಭೂಮಿಯಲ್ಲಿಯೂ ಸಂಚರಿಸತಕ್ಕ ಸಮಸ್ಯದೇವತೆ ಗಳೂ ನಿನಗೆ ಮಂಗಳವನ್ನುಂಟುಮಾಡಲಿ ! ವತ್ಸ ರಾಮಾ ! ಇಂದ್ರನೂ, ಚಂದ್ರನೂ, ಶೂರನೂ, ಕುಬೇರನೂ, ವರಣನೂ ಈ ನನ್ನ ಪ್ರಾರ್ಥನೆ ಯಿಂದ ಪ್ರಸನ್ನರಾಗಿ, ದಂಡಕಾರಣ್ಯವಾಸಿಯಾದ ನಿನ್ನನ್ನು ಎಡೆಬಿಡದೆ ರಕ್ಷಿಸುತ್ತಿರಲಿ ! ಎಲೈ ರಘುವಂಶೋತ್ತಮನೆ ! ನದೀನದಾರಿಪುಣ್ಯತೀರಗ ಇಲ್ಲಿ ನೀನು ಸ್ನಾನಕ್ಕಿಳಿಯುವಾಗ, ಅಗ್ನಿ ಯೂ, ವಾಯುವೂ, ಅಗ್ನಿಹೋತ್ರ ಧ್ಯಮಗಳೂ, ವಿಶ್ವಾಮಿತ್ರನು ನಿನಗುಪದೇಶಿಸಿರುವ ರಕ್ಷಾಮಂತ್ರಗಳೂ ನಿನಗೆ ಅಪಾಯವಿಲ್ಲದಂತೆ ಕಾಪಾಡಲಿ ! ಸತ್ವಲೋಕಪ್ರಭುವಾದ ಬ್ರ ಹನೂ, ಸಮಸ್ತಲೋಕಗಳನ್ನೂ ಪೋಷಿಸತಕ್ಕ ಶ್ರೀಮನ್ನಾರಾಯಣನೂ, ಇತರದೇವತೆಗಳೂ, ಋಷಿಗಳೂ ನಿನ್ನನ್ನು ಕ್ಷೇಮದಿಂದ ರಕ್ಷಿಸಲಿ.” ಎಂದು ಹೇಳುತ್ತ, ಕೌಸಲ್ಯಯು, ಆಯಾದೇವತೆಗಳನ್ನು ಗಂಧಪುಷ್ಪಮಾಲ್ಯಾ ಳಿಂದ ಪೂಜಿಸಿ, ಆಯಾದೇವತೆಗಳಿಗೆ ತಕ್ಕ ಸ್ತೋತ್ರವಾಕ್ಯಗಳಿಂದ ಬಾರಿಬಾರಿಗೂ ಸ್ತುತಿಸಿ, ರಾಮನಿಗೆ ಮಂಗಳಾತೀರಾದಗಳನ್ನು ಮಾಡಿ ದಳು. ಮತ್ತು ರಾಮನ ಶ್ರೇಯೋಭಿವೃದ್ಧಿಗಾಗಿ, ಅಗ್ನಿ ಹೋತ್ರವನ್ನು ಪ್ರತಿಷ್ಠಿಸಿ, ಮಹಾತ್ಮರಾದ ಬ್ರಾಹ್ಮಣಶ್ರೇಷ್ಠರಿಂದ ಮಂತ್ರೋಕ್ತವಾಗಿ ಹೋಮವನ್ನು ಮಾಡಿಸಿದಳು. ಇದಕ್ಕಾಗಿ ತುಪ್ಪ, ಬಿಳಿಹೂಗಳು, ಸಮಿ ತುಗಳು, ಬಿಳೀಸಾಸುವೆ, ಮುಂತಾದ ದ್ರವ್ಯಗಳೆಲ್ಲವನ್ನೂ ತರಿಸಿಟ್ಟಳು. ಪುರೋಹಿತರು ರಾಮನ ಅನಿಷ್ಟನಿವಾರಣಾರ್ಥವಾಗಿಯೂ, ಆರೋ ಗ್ಯಾಭಿವೃದ್ಧಿಗಾಗಿಯೂ ಶಾಸ್ರೋಕ್ತವಾಗಿ ಮಾಡಬೇಕಾದ ಶಾಂತಿ ಹೋಮಗಳನ್ನು ಮಾಡಿ, ಉಳಿದ ಹವಿಸ್ಸುಗಳಿಂದ ಹೊರಗೆ ಮಾಡಬೇ ಕಾದ ಬಲಿಕರ್ಮಗಳನ್ನೂ ನಡೆಸಿದರು ! ಮತ್ತು ಕೌಸಲ್ಯಯು, ಬ್ರಾ