ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯಣವು [ಸಣೆ, ೨೫ ಹ್ಮಣರಿಗೆ ಜೇನು, ಮೊಸರು, ಅಕ್ಷತೆ, ತುಪ್ಪ ಮೊದಲಾದ ದಾನಗಳನ್ನು ಮಾಡಿ, ಅವರಿಗೆ ಭೂರದಕ್ಷಿಣೆಗಳನ್ನು ಕೊಟ್ಟು ತೃಪ್ತಿಪಡಿಸಿ, ರಾಮನಿಗೆ ಸ್ವಸ್ತಿವಾಚನಗಳನ್ನು ಮಾಡಿಸಿದಳು. ಆಮೇಲೆ ಪುರೋಹಿತನಿಗೂ ಮನಸ್ಯಪ್ತಿಯಾಗುವಂತೆ ಕೇಳಿದಷ್ಟು, ದಕ್ಷಿಣೆಯನ್ನು ಕೊಟ್ಟು, ರಾಮ ನನ್ನು ಕುರಿತು, ಸಮಸ್ತ ದೇವತೆಗಳಿಂದಲೂ ನಮಸ್ಕರಿಸಲ್ಪಡುವ ದೇವೇಂ ದ್ರನು ವೃತ್ರಾಸುರಸಂಹಾರಕ್ಕೆ ಹೋದಾಗ, ಆತನಿಗೆ ಯಾವ ಮಂಗಳ ಪುಂಟಾಯಿತೋ ಅದೇ ಮಂಗಳವು ಈಗ ನಿನಗೂ ಉಂಟಾಗಲಿ ! ಪೂರ ದಲ್ಲಿ ಗರುಡನು ಅಮೃತವನ್ನು ತರುವುದಕ್ಕಾಗಿ ಹೊರಡುವಕಾಲದಲ್ಲಿ, ಆತನ ತಾಯಿಯಾದ ವಿನತೆಯು ಅವನಿಗೆ ಯಾವ ಮಂಗಳವನ್ನು ಮಾಡಿದ ಲೋ, ನಿನಗೂ ಈಗ ಅದೇ ವಿಧವಾದ ಮಂಗಳವಾಗಲಿ ! ಅಮೃತವನ್ನು ಪಡೆಯುವ ಕಾಲದಲ್ಲಿ ವಿರೋಧಿಗಳಾಗಿದ್ದ ದೈತ್ಯರನ್ನು ಕೊಲ್ಲುವುದಕ್ಕಾಗಿ ಇಂದ್ರನು ಹೊರಟಾಗ, ಅವನ ತಾಯಿಯಾದ ಅದಿತಿಯು ಆತನಿಗೆ ಯಾವ ಮಂಗಳವನ್ನು ಕಲ್ಪಿಸಿದಳೋ, ಅದೇ ಮಂಗಳವು ಈಗ ನಿನಗೂ ಉಂಟಾಗಲಿ! ಮಹಾತೇಜಸ್ವಿಯಾದ ವಿಷ್ಣುವು ಬಲಿಚಕ್ರವರ್ತಿಯಲ್ಲಿ ಮೂರಡಿಗಳ ಭೂಮಿಯನ್ನು ಯಾಚಿಸಿ, ಈ ತೈಲೋಕ್ಯವನ್ನೂ ಅಡಿಯಿಟ್ಟು ಅಳೆದಾಗ, ಆತನಿಗುಂಟಾದ ಮಂಗಳವೇ ಈಗ ನಿನಗೂ ಉಂಟಾಗಲಿ ! ವತ್ಸ ರಾಮ ! ಬಾರಿಬಾರಿಗೂ ನಾನು ಪ್ರಾರ್ಥಿಸಿ ಕೇಳುವನು. ವಸಂತಾದಿಋತುಗಳೂ, ಸಪ್ತಸಾಗರಗಳೂ, ಸಪ್ತದ್ವೀಪಗಳೂ, ಚತುರೈದಗಳೂ, ಚತುರ್ದಶ ಲೋಕಗಳೂ, ದಶದಿಕ್ಕುಗಳೂ, ಕಾಡಿನಲ್ಲಿರುವ ನಿನಗೆ ಅನವರತವೂ ಕ್ಷೇಮ ವನ್ನುಂಟುಮಾಡಲಿ !” ಎಂದು ಹೇಳಿ, ಕೌಸಿಯು ಆತನ ತಲೆಯಮೇಲೆ ಮಂತ್ರಾಕ್ಷತೆಗಳನ್ನು ಹಾಕಿ ಆಡಿಸಿದಳು. ಆತನ ಮೈಗೆಲ್ಲಾ ಸುಗಂಧ ವನ್ನು ಲೇಪಿಸಿದಳು. ಅಮೋಘವಾದ ಫಲವನ್ನು ಕೊಡತಕ್ಕ ವಿಶಲ್ಯಕರಣಿ ಯೆಂಬ ಮೂಲಿಕೆಯನ್ನು ರಕ್ಷಾರ್ಥವಾಗಿ ಆತನ ಮೈಗೆ ಕಟ್ಟಿ, ಅದನ್ನು ಮಂತ್ರಗಳಿಂದ ಅಭಿಮಂತ್ರಿಸಿದಳು. ಮಹಾಯಶಸ್ವಿನಿಯಾದ ಆ ಕೌಶಲ್ಯ ಯು, ತಾನು ವ್ಯಸನಪರವಶಳಾಗಿದ್ದರೂ, ರಾಮನು ಪ್ರಯಾಣಮಾಡುವಾ ಗ, ಅಮಂಗಳವನ್ನು ತೋರಿಸುವುದನುಚಿತವೆಂದೆಣಿಸಿ, ಬಹುಪ್ರಯಾಸದಿಂದ ಸಂಕಟವನು ಮನಸಿನಲ್ಲಿಯೇ ಅಡಗಿಸಿಕೊಂಡು, ಮೇಲೆಮಾತ್ರ ಸಂತೋಷ