ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೪ ಶ್ರೀಮದ್ರಾಮಾಯಣವು [ಸರ್ಗ. ೧. ವಿಶ್ವಾಸವುಳ್ಳವನಾದುದರಿಂದ, ಅವನನ್ನು ಹಿಂಬಾಲಿಸಿ ಹೋಗುವ ವಿಷಯ ದಲ್ಲಿ ಅತ್ಯುತ್ಸಾಹವುಳ್ಳವನಾಗಿಯೆ ಹೊರಟನು. ಭರತನು ತನ್ನ ಮಾವನ ಡನೆಯೇ ಹೋಗುತ್ತಿದ್ದನೆಂದು ತದೇಕ ಪಾರತಂತ್ರವ ಸೂಚಿಸಲ್ಪಡುವುದು. (ಮಾತುಲ ಕುಲಂ) ದ್ವಿತೀಯಾಂತವಾದ ಈ ಪದದಿಂದ, ಭರತನಿಗೆ ಉದ್ದೇಶ್ಯವಾದ ಸ್ಥಾನವೇ ಶತ್ರು ಈನಿಗೂ ಉದ್ದೇಶವಾಯಿತೆಂದು ಸೂಚಿಸಲ್ಪಡುವುದು. ಇದರಿಂದ ಶೇಷಿಯಾದವನಿಗೆ (ತನ್ನ ಸ್ವಾಮಿಯಾದವನಿಗೆ) ಯಾವುದುಶ್ಯವೋ, ಶೇಷಭೂತನಾದವನಿಗೂ (ಆ ಸ್ನಾ ಮಿಗೆ ಅಧೀನವಾದ ವಸ್ತುವಿನಂತೆ ಅವನಲ್ಲಿ ವಿಧೇಯನಾಗಿರುವವನಿಗೂ) ಅದೇ ಉದ್ದೇ ಶ್ಯವಾಗಿರುವುದೆಂಬ ಪಾರತಂತ್ರ ಸ್ವರೂಪದ ಸೂಕ್ಷಂಶವು ಸೂಚಿತವಾಗುವುದು, (ಭರತೇನೆ) ಈ ಶಬ್ದದಿಂದ ಭಗವಂತನಿಗೆ ಪರತಂತ್ರನಾಗಿರುವನೆಂಬ ಭಾಗವತತ್ವವು ಸೂಚಿತವಾಗುವುದು, ಹೇಗೆಂದರೆ:- ಶ್ರೀರಾಮನು ವನವಾಸಕ್ಕಾಗಿ ಹೊರಟಾಗ, ಲಕ್ಷ ಣನೂ ಅವನನ್ನು ಹಿಂಬಾಲಿಸಿ ಹೊರಡಲು, ಇತ್ತಲಾಗಿ ದಶರಥನು ರಾಮವಿರಹದಿಂದ ಮೃತಿಹೊಂದಲು, ರಾಜ್ಯವು ಅನಾಯಕವಾಗಿ ಹೋಗುತ್ತಿದ್ದ ಸ್ಥಿತಿಯಲ್ಲಿ, ತನು ರಾಜ್ಯ ವನ್ನು ವಹಿಸಿಕೊಂಡು ಆಳಿದುದರಿಂದ, ಈತನಿಗೆ ಭರತನೆಂದು ಹೆಸರು. ಕೇವಲ ರಾಮಾ ಜ್ಞೆಯನ್ನೇ ಶಿರಸಾವಹಿಸಿ, ಆತನ ಪಾದುಕೆಗಳನ್ನು ಮುಂದಿಟ್ಟುಕೊಂಡು ರಾಜ್ಯವನ್ನು ವಹಿಸಿದವನೆಂಬ ಭಗವತ್ಪರತಂತ್ರ ಸ್ವರೂಪವಾದ ಭಾಗವತನ ಇಲ್ಲಿ ಸೂಚಿತವಾಗಿದೆ. (ತದಾ) ಎಂದರೆ 'ಆಗಲೇ, ಎಂದರು. ಶತ್ರುಘ್ನನು ತನಗೆ ಅನುಕೂಲಗಳಾದ ಚಂದ್ರ ತಾರಾ ಬಲಗಳೊಂದನ್ನೂ ನಿರೀಕ್ಷಿಸಿದೆ, ಛಂದು ಹೊರಟಾಗಲೇ ಹೊರಟನೆಂಬ ಪಾರ ತಂತ್ರ್ಯ ವಿಶೇಷವು ಹೇಳಲ್ಪಟ್ಟಿರುವುದು. (ಅನಘ.:) ಪಾಪರಹಿತನು ಈಸಂದರ್ಭದಲ್ಲಿ ಅಘಶಬ್ದಕ್ಕೆ ಕೇವಲರಾಮಭಕ್ತಿಯೆಂದೇ ಗ್ರಹಿಸಬೇಕು, ತನಗೆ ಶೇಷಿ - (ಸಾಮಿ) ಯಾದ ಭರತನಿಗೆ,ರಾಮಭಕ್ತಿಯೇ ಮುಖ್ಯೋದ್ದೇಶ್ಯವಾಗಿರುವುದರಿಂದ, ಶರ್ತನಿಗೂ ಅದೇ ಉದ್ದೇಶವಾಗಿರುವುದೇhರತು, ಭರತನಿಗೆ ಆ ರಾಮಭಕ್ತಿಯು ಉದ್ದೇಶ್ಯವಲ್ಲ ಬಿದರೆ ಶತ್ರುಘ್ನನಿಗೂ ಉದ್ದೇಶ್ಯವಾಗದು, ಮತ್ತು ಅನಿಷ್ಟಾವಹವೂ ಆಗುವುದು ಅನಿಷ್ಟಾವಹವಾ ದುದೇ ಪಾಪವೆನಿಸುವುದು, ನ ಸುಕೃತಂ ನ ದುಷ್ಕೃತಂ ಸಿ ಬಾ ಪ್ಯಾನೋSತೋ ನಿವರನೇ”ಇತ್ಯಾದಿಶ್ರತಿಗಳಲ್ಲಿ ಹೇಳಲ್ಪಟ್ಟಿರುವಂತೆ, ಮೋಕ್ಷ ಸೇಕ್ಷೆ ಯವನಿಗೆ ಸುಕೃತವಾದರೂ ಅನಿಷ್ಟಾವಹವೇ ಆಗುವುದೆಂದು ಹೇಳಲ್ಪಟ್ಟಿರುವುದ ಅಂದ, ರಾಮಭಕ್ತಿಯು ಸುಕೃತವೇ ಆಗಿದ್ದರೂ, ಭರತನಿಗೆ ಅದು ಉದ್ದೇಶವಲ್ಲ ಬದ ರೆ, ಅವನಿಗೆ ಶೇಷಭೂತನಾದ ಶತ್ರುಘ್ನನಿಗೂ ಅದು ಅನಿಷ್ಟಾ ವಹವಾಗಿ, ಪಾಪ ಆಗಿಯೇ ಅಗುವುದು. ಅಂತಹ ಪಾಪವಿಲ್ಲದವನೇ ಶತಕನೆಂದು ಭಾವವು. ಇದರಿಂದ