ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀಮದ್ರಾಮಾಯಗಳು [ಸರ್ಗ. 4 ಬೇಕಾದ ರಕ್ಷಾವಿಧಿಗಳೆಲ್ಲವನ್ನೂ ಮಾಡಿದಮೇಲೆ, ಮಹಾಯಶಸ್ವಿಯಾದ ರಾಮನ ತಾಯಿಯ ಎರಡು ಕಾಲುಗಳನ್ನೂ ಹಿಡಿದು, ಬಾರಿಬಾರಿಗೂ ಭಕ್ತಿ, ಯಿಂದ ನಮಸ್ಕರಿಸಿದನು. ಇವೆಲ್ಲವೂ ವಿಶೇಷವಾದ ವ್ಯಸನವನ್ನು ಹೆಚ್ಚಿಸತ ಕವುಗಳಾಗಿದ್ದರೂ, ರಾಮನು ಆ ವ್ಯಸನವನ್ನು ಕಾಣಿಸಿಕೊಳ್ಳದೆ ಉಲ್ಲಾಸ ವಿಶಿಷ್ಯನಾಗಿಯೇ ಇದ್ದು, ಅಲ್ಲಿಂದ ಹೊರಟು ಸೀತೆಯ ಅಂತಃಪುರಕ್ಕೆ ಬಂದನು, ಇಲ್ಲಿಗೆ ಇಪ್ಪತ್ತೈದನೆಯ ಸರ್ಗವು. (ರಾಮನು ಸೀತೆಯ ಅನುಮತಿಯನ್ನು ಪಡೆಯು ) . "ವುದಕ್ಕಾಗಿ ಅವಳ ಅಂತ:ಪುರಕ್ಕೆ ಹೋದುದು. ಹೀಗೆ ರಾಮನು ಕೌಸಲ್ಯಗೆ ನಮಸ್ಕರಿಸಿ, ಅವಳಿಂದ ಮಂಗಳಾಶೀ ರೈಾದಗಳನ್ನು ಪಡೆದು, ಧರ ಮಾರ್ಗದಲ್ಲಿಯೇ ದೃಢವಾದ ಸಂಕಲ್ಪವುಳ್ಳ ವನಾಗಿ, ವನಪ್ರಯಾಣಕ್ಕೆ ಸಿದ್ಧನಾಗಿ ಹೊರಟನು. ಈತನು ಕೌಸಲ್ಯಯ ಅಂತಃಪುರದಿಂದ ಹೊರಟು ಬೀದಿಯಲ್ಲಿ ಬರುವಾಗ,ವಿಶೇಷಜನಭರಿತವಾಗಿದ್ದ ಆ ರಾಜಮಾರ್ಗಗಳನ್ನೆಲ್ಲಾ ತನ್ನ ಕಾಂತಿಯಿಂದ ಬೆಳಗುತ್ತ, ತನ್ನ ಗುಣಗ ಳಿಂದ ಸಮಸ್ತ ಜನರ ಮನಸ್ಸನ್ನೂ ಆಕರ್ಷಿಸುತ್ತ, ಬೀದಿಗಳನ್ನು ದಾಟಿ ಸೀತೆ ಯ ಅಂತಃಪುರವನ್ನು ಪ್ರವೇಶಿಸಿದನು. ಸೀತೆಗೆ ಪರೋಕದಲ್ಲಿ ನಡೆದ ಈ ವಿಷ ರೀತವೃತ್ತಾಂತಗಳೊಂದೂ ತಿಳಿಯದುದರಿಂದ, ಆಕೆಯು ತನ್ನ ಪತಿಯಾದ ರಾಮನಿಗೆ ಅಭಿಷೇಕವು ನಡೆಯುವುದೆಂಬ ಉತ್ಸಾಹವನ್ನೇ ಮನಸ್ಸಿನಲ್ಲಿಟ್ಟು ಕೊಂಡು, ಆತನ ಶ್ರೇಯೋಭಿವೃದ್ಧಿಗಾಗಿ ಮಾಡಬೇಕಾದ ದೇವತಾಪೂಜೆ ಮೊದಲಾದ ನಿಯಮಗಳೆಲ್ಲವನ್ನೂ ತನ್ನ ಕೈಯಿಂದಲೇ ಮಾಡಿ ಮುಗಿಸಿ ದಳು. ಮೊದಲು ಪಟ್ಟಾಭಿಷಿಕ್ತನಾಗಿ ಬರುವ ಪತಿಗೆ ಪಟ್ಟಮಹಿಷಿಯರು ಮಾಡಬೇಕಾದ ಪಾದಾರ್ಚನಾದಿಪೂಾಚಾರಗಳನ್ನೆಲ್ಲಾ ಆಕೆಯು ಚೆ ನ್ನಾಗಿ ಬಲ್ಲವಳು. ಮತ್ತು ರಾಜಧರೆಗಳೆಲ್ಲವನ್ನೂ ತಿಳಿದವಳು! ಆದುದರಿಂದ ಸಂಪ್ರದಾಯಕ್ಕೆ ತಕ್ಕ ಸಮಸ್ತಸನ್ನಾಹಗಳನ್ನೂ ಸಿದ್ಧಮಾಡಿಕೊಂಡು, ರಾಮನು ಪಟ್ಟಾಭಿಷಿಕ್ತನಾಗಿ ಬರುವುದನ್ನೇ ನಿರೀಕ್ಷಿಸುತಿದ್ದಳು. ಆ ಅಂತ ಶರವೆಲ್ಲವೂ ರಾಮೋತ್ಸವಕ್ಕಾಗಿ ಅಲಂಕರಿಸಲ್ಪಟ್ಟು, ಅಲ್ಲಲ್ಲಿ ಅತ್ಯುತ್ಸಾಹ