ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀಮದ್ರಾಮಾಯದವು [ಸರ್ಗ, ೨೬ ದುದರಿಂದ, ಇದಕ್ಕಾಗಿ ಹೆದರದೆ, ಥೈಲ್ಯದಿಂದಿರು!ಎಲೆ ಮಂಗಳಾಂಗಿ!ನಾನು ಮಹರ್ಷಿಗಳಿಂದ ತುಂಬಿದ ಕಾಡಿನಲ್ಲಿದ್ದು ಬರುವವರೆಗೂ, ನೀನು ವ್ರತೋ ಪವಾಸಗಳನ್ನು ಬಿಡದೆ, ನಿರ್ದುಷಳಾಗಿ ನಿಯಮದಿಂದಿರಬೇಕು. ಉಷಃ ಕಾಲದಲ್ಲಿಯೇ ಎದ್ದು, ಶಾಸೋಕ್ತವಾದ ರೀತಿಯಲ್ಲಿ ದೇವತಾಪೂಜೆಯನ್ನು ಮಾಡುತ್ತಿರು. ಈ ದೇವಪೂಜೆಯನ್ನು ಮುಗಿಸಿದೊಡನೆ, ನನ್ನ ತಂದೆಯ ಬ ಳಿಗೆಹೋಗಿ ರಾಜನಾದ ಆತನಿಗೆ ನಮಸ್ಕರಿಸು!ಹಾಗೆಯೇ ನನ್ನ ಎರಹಸಂಕ ಟದಿಂದ ಕೊರಗುತ್ತಿರುವ ವೃದ್ಧಳಾದ ನನ್ನ ತಾಯಿಗೂ ನಮಸ್ಕರಿಸಿ ಬಾ ! ಆಕೆಯು ಥರವನ್ನೇ ದೃಢವಾಗಿ ನಂಬಿರತಕ್ಕವಳು, ಅವಳನ್ನು ನೀನು ಯಾವಾಗಲೂ ಗೌರವಿಸುತ್ತಿರಬೇಕು. ನನ್ನ ಇತರಮಾತೆಯರೂಕೂಡ ನನ್ನಲ್ಲಿ ವಿಶೇಷಪ್ರೇಮವನ್ನೂ, ವಾತ್ಸಲ್ಯವನ್ನೂ ತೋರಿಸಿ ನನ್ನನ್ನು ಪೋ ಮಿಸಿದವರಾದುದರಿಂದ, ಅವರಲ್ಲಿಯೂ ನೀನು ಮಾತೃಭಕ್ತಿಯನ್ನಿಟ್ಟು ನಮ ಸ್ಕರಿಸಿ ಪೂಜಿಸು! ನನಗೆ ಪ್ರಾಣಕ್ಕಿಂತಲೂ ಪ್ರಿಯರಾದ ಭರತಶತ್ರುಘ್ನು ರನ್ನು ನೀನು ಒಡಹುಟ್ಟಿದವರಂತೆಯೂ, ಮಕ್ಕಳಂತೆಯೂ ಭಾವಿಸಿ, ವಿಶೇಷ ವಾಗಿ ಆದರಿಸುತ್ತಿರಬೇಕು. ಭರತನಿಗೆ ವಿಪ್ರಿಯವಾದ ಕಾವ್ಯಕ್ಕೆ ಮಾತ್ರ ಎಂದಿಗೂ ಪ್ರವರ್ತಿಸಬೇಡ. ಆತನೇ ಈಗ ನಮ್ಮ ದೇಶಕ್ಕೂ, ಕುಲಕ್ಕೂರಾಜ ನಾಗುವುದರಿಂದ, ಆತನ ಮನಸ್ಸಂತೋಷಪಡಿಸುವುದೇ ನಿನ್ನ ಮುಖ್ಯ ಕಾರ್ ವು. ರಾಜರನ್ನು ಸಂತೋಷಪಡಿಸುವದು ಸುಲಭವಲ್ಲ. ಅವರಲ್ಲಿ ನೀನುಬಹಳ ನಂಬಿಕೆಯಿಂದಲೂ, ವಿಧೇಯತೆಯಿಂದಲೂ ನಡೆದುಕೊಳ್ಳಬೇಕು. ಕಷ್ಟ ಪಟ್ಟು, ಅವರ ಸೇವೆಯನ್ನು ಮಾಡುತ್ತಿರಬೇಕು. ಹೀಗಿದ್ದರೆ ಅವರು ಬಹಳ ಪ್ರಸನ್ನರಾಗುವರು. ಇದಕ್ಕೆ ವ್ಯತಿರಿಕ್ತವಾಗಿ ನಡೆದರೆ ಕೋಪಿಸುವರು. ತನಗೆ ಅಹಿತವನ್ನು ಮಾಡಿದುದಾಗಿ ಕಂಡುಬಂದರೆ, ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನಾದರೂ ತೊರೆದುಬಿಡುವರು, ಕಾಠ್ಯದಕ್ಷರಾಗಿ ತನಗೆ ಅನುಕೂ ಲರಾಗಿರುವರೆಂದು ಕಂಡುಬಂದರೆ, ಅವರು ಹೊರಗಿನವರಾಗಿದ್ದರೂ ಅವರ ಶ್ರೀ ಪ್ರಸನ್ನರಾಗಿ,ಉನ್ನತಸ್ಥಿತಿಗೆ ತಂದುಬಿಡುವರು. ಆದುದರಿಂದ ಎಲೆ ಮಂಗೆ ಕಾಂಗಿ!ರಾಜನಮನೋನುವರ್ತಿನಿಯಾಗಿಯೇ ನೀನು ನಡೆದುಕೊಳ್ಳುತ್ತಿರು ! ಈಗ ಭರತನೇ ರಾಜನು. ಅವನಿಗೆ ಮನಸೋವಂತೆ ನೀನು ನಡೆದುಕೊಳ್ಳ ದಿದ್ದರೆ, ಬಹಳ ಕಷ್ಟಕ್ಕೆ ಸಿಕ್ಕಿಕೊಳ್ಳಬೇಕಾಗುವುದು. ನಿನ್ನ ಥರವನ್ನು