ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೩.] ಅಯೋಧ್ಯಾಕಾಂಡವು. ಬk ಬಿಡಬೇಡ! ಸತ್ಯವನ್ನೇ ನಂಬಿ ನಡೆಯುತ್ತಿರು! ನಿನ್ನ ಪ್ರತಾದಿನಿಯಮಗಳ ನ್ಯೂ ಲೋಪವಿಲ್ಲದೆ ನಡೆಸಿಕೊಂಡು ಬಾ! ಇನ್ನು ನಾನು ಕಾಡಿಗೆ ಹೋಗಿ ಬರುವೆನು. ಅದುವರೆಗೂ ನೀನು ಇಲ್ಲಿಯೇ ಇರಬೇಕಾಗಿರುವುದರಿಂದ, ಇಲ್ಲಿರ ತಕ್ಕವರೆಲ್ಲರ ಮನಸ್ಸಿಗೂ ಅನುಕೂಲೆಯಾಗಿ ನಡೆದುಕೊಳ್ಳಬೇಕು. ಇ ದೇ ಈಗ ನಾನು ನಿನಗೆ ಹೇಳಬೇಕಾದ ಬುದ್ಧಿವಾದವು” ಎಂದನು. ಇಲ್ಲಿಗೆ ಇಪ್ಪತ್ತಾರನೆಯ ಸಗೆ ೯ವು. w+K$ ರಾಮನು ತನೊಡನೆ ಬರಕೂಡದೆಂದುದಕ್ಕಾಗಿ ). ( ಸೀತೆಯು ಕೋಪಿಸಿದುದು. * ಸೀತೆಯು ರಾಮನ ಬಾಯಿಂದ ಯಾವಾಗಲೂ ಪ್ರಿಯವಾದ ಮಾತ ನ್ನೇ ಕೇಳುತಿದ್ದವಳೇಹೊರತು, ಒಂದು ದಿನವಾದರೂ ಇಂತಹ ಅಪ್ರಿಯವನ್ನು ಕೇಳಿದವಳಲ್ಲ. ಈಕೆಯೂ ರಾಮನೊಡನೆ ಎಂದಿಗೂ ಅಪ್ರಿಯವನ್ನು ನುಡಿದ ವಳಲ್ಲ. ಹೀಗೆ ಎಡೆಬಿಡದ ಪ್ರೇಮವುಳ್ಳವರಾಗಿದ್ದರೂ, ರಾಮನು ಹೇಳಿದ ವ್ಯಸನವಾರೆಯನ್ನು ಕೇಳಿ, ಸೀತೆಗೆ ಥಟ್ಟನೆ ಕೋಪವುಂಟಾಯಿತು. ಆದರೆ ಆ ಕೋಪವೂ ಪ್ರಣಯಸಂಬಂಧವಾಗಿತ್ತೇ ಹೊರತು ವೈರಬುದ್ದಿಯಿಂದುಂ ಟಾದುದಲ್ಲ. ಹೀಗೆ ಪ್ರಣಯಕುಪಿತೆಯಾದ ಸೀತೆಯು, ಪತಿಯಾದ ರಾಮ ನನ್ನು ಕುರಿತು “ನಾಥಾ! ಇದೀಗ ಬಹಳ ಚೆನ್ನಾ ಯಿತು ! ನೀನು ಇಂತಹ ಮಾತುಗಳನ್ನಾಡಬಹುದೆ? ಕೇವಲ ಅಲ್ಪಬುದ್ಧಿಯುಳ್ಳವರು ಈ ಮಾತುಗಳ ನಾಡುವರೇ ಹೊರತು,ಉದಾರಬುದ್ಧಿಯುಳ್ಳ ನಿನ್ನಂತವರು ಕೆಲಸಕ್ಕೆಬಾರ ದ ಇಂತಹ ಮಾತುಗಳನ್ನಾಡಲಾರರು! ನೀನು ಹೇಳಿದಮಾತುಗಳು ಕೇ ವಲ ನಿಸ್ಸಾರಗಳೆಂದು ನಿನಗೂ ನಿಶ್ಚಯವಾಗಿ ತಿಳಿದೇ ಇರಬಹುದು. ಸೀಮಾ ತ್ರಳಾದ ನನಗೇ !ಇವು ಪರಿಹಾಸಾಸ್ಪದಗಳಾಗಿರುವುವು. ರಾಜಕುಮಾರ ನಾದ ನೀನು ಈ ಮಾತನ್ನಾಡಿದರೆ ಇನ್ನು ಹೇಳುತಕ್ಕುದೇನು? ಇದುವರೆಗೆ ಹಿಂದೆ ಯಾವಾಗಲೂ ನಾನು ಈವಿಧವಾದ ಮಾತನ್ನು ನಿನ್ನ ಬಾಯಿಂದ ಕೇಳಲಿಲ್ಲ. ಶಸ್ತ್ರಾಸ್ತ್ರಗಳನ್ನು ಬಲ್ಲವರಾಗಿ, ವೀರರೆನಿಸಿಕೊಂಡ ರಾಜಕುಮಾ ರರು, ಅಪಕೀರ್ತಿಹೇತುವಾದ ಕಿವಿಯಿಂದಲೂ ಕೇಳಬಾರದು. ಅಂ