ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೭s ಶ್ರೀಮದ್ರಾಮಾಯಣವು [ಸರ್ಗ, ೨: ತಹ ಮಾತನ್ನು ನಿನ್ನ ಬಾಯಿಂದ ನೀನೇ ಹೇಳುವುದಾದರೆ ಇದಕ್ಕಿಂತಲೂ ಲೋಕದಲ್ಲಿ ಆಶ್ಚದ್ಯವೇನಿರುವುದು ? ಎಲೈ ಅಯ್ಯಪುತ್ರನೇ! ಲೋಕದಲ್ಲಿ ತಂದೆ ಯಾಗಲಿ, ತಾಯಿಯಾಗಲಿ, ಒಡಹುಟ್ಟಿದವರಾಗಲಿ, ಮಕ್ಕಳಾಗಲಿ, ಸೊಸೆ ಯಾಗಲಿ, ತಮ್ಮ ತಮ್ಮ ಪುಣ್ಯಪಾಪಕರೆಗಳಿಗೆ ತಕ್ಕ ಫಲಗಳನ್ನು ಅನುಭವಿಸು ವರು. ಆಯಾಫಲಪ್ರಾಪ್ತಿಗೆ ಕಾರಣಗಳಾದ ಶುಭಾಶುಭಕರಗಳನ್ನು ನಡೆ ಸುವುದಕ್ಕೂ ಸ್ವತಂತ್ರರಾಗಿರುವರು. ಗಂಡನಿಗೆ ಅರ್ಥಶರೀರದಂತಿರುವ ಹೆಂ ಡತಿಯಾದರೆ, ತನ್ನ ಪತಿಯ ಕರಾನುಸಾರವಾದ ಫಲವನ್ನೇ ಅನುಭವಿಸ ತಕ್ಕವಳು. ಎಲೈ ಪ್ರಿಯನೆ ! ನಿನಗೆ ನಾನು ಅರ್ಧದೇಹವಲ್ಲವೆ ? ದಶರಥನು ನಿನಗೆ ವಸವಾಸವನ್ನು ನಿಯಮಿಸಿದಮೇಲೆ, ನನಗೂ ಅದನ್ನು ನಿಯಮಿಸಿದಂ ತಾಗಲಿಲ್ಲವೆ? ಸ್ತ್ರೀಯರಿಗೆ ತಂದೆಯಾಗಲಿ, ಮಗನಾಗಲಿ, ತಾಯಿಯಾಗಲಿ, ಸಖಿಯರಾಗಲಿ, ದಿಕ್ಕಾಗಿರಲಾರರು. ತಮಗೆ ತಾವೇ ಸ್ವತಂತ್ರರಾಗಿರುವು ದಕ್ಕೂ ಅವರಿಗೆ ಅಧಿಕಾರವಿಲ್ಲ.ಅವರಿಗೆ! ಈ ಲೋಕದಲ್ಲಿಯಾಗಲಿ,ಪರಲೋಕ ದಲ್ಲಿಯಾಗಲಿ ಪತಿಯೊಬ್ಬನೇ ಗತಿಯು, ಈಗ ನೀನು ಕಾಡಿಗೆ ಹೊರಡುವುದು ನಿಜವಾಗಿದ್ದರೆ, ನಾನು ನಿನಗೆ ಮುಂದಾಗಿಯೇ ಹೊರಟು, ದಾರಿಯಲ್ಲಿ ದರ್ಭೆ ಯ ಮುಳ್ಳುಗಳನ್ನು ಕಿತ್ತು ನಿನಗೆ ದಾರಿಯನ್ನು ಸರಿಮಾಡುತ್ತಾ ಹೋಗುವೆ ನು. ಒಂದುವೇಳೆ ನಿನ್ನ ಮನಸ್ಸಿನಲ್ಲಿ ನಾನು ನಿನ್ನನ್ನನುಸರಿಸಿ ಬಂದು ನಿನ್ನ ಪಾ ದ ಶುಶೂಷೆಯನ್ನು ಮಾಡುವುದರಿಂದ ಕೃತಾರಳಾಗಿಬಿಡುವೆನೆಂಬ ಅಸಹ ನವಿದ್ದರೂ, ಅಥವಾ ನಿನ್ನ ಮಾತನ್ನು ಮೀರಿ ನಾನು ಕಾಡಿಗೆ ಹೊರಡುವೆ ನೆಂದುದಕ್ಕಾಗಿ ನನ್ನಲ್ಲಿ ಕೋಪವಿದ್ದರೂ, ಇತರರು ಕುಡಿದು ಮಿಗಿಸಿದ ನಿಷಿ ವ್ಯವಾದ ನೀರನ್ನು ಚೆಲ್ಲಿಬಿಡುವಂತೆ ಅವೆರಡನ್ನೂ ಬಿಟ್ಟುಬಿಡು! ಅಥವಾ ನೀನು ಒಂದುವೇಳೆ ಮಾತ್ರಳಾದ ನನ್ನನ್ನ ಕಟ್ಟಿಕೊಂಡು ಕಾಡಿನಲ್ಲಿ ಅಲೆಯು ವುದು ಹೇಗೆಂದು ಭಯಪಡಬಹುದು ? ನೀನು ಮಹಾವೀರನೆನಿಸಿಕೊಂಡಿರು ವೆಯಲ್ಲವೆ? ನನ್ನನ್ನು ಕಾಪಾಡುವುದು ನಿನಗೊಂದು ಕಷ್ಟವೆ? ಇದಕ್ಕಾಗಿ ನಿ ಇಂತವನು ಭಯಪಡಬಾರದು. ನಿನ್ನನ್ನಗಲಿ ಜೀವಿಸತಕ್ಕ ಮಹಾಪಾಪಕಾರ ದಿಂದ ನನ್ನನ್ನು ತಪ್ಪಿಸು! ರಾಜಗೃಹದಲ್ಲಿರತಕ್ಕ ಸೌಖ್ಯಗಳೆಲ್ಲವನ್ನೂ ಬಿಟ್ಟು, ಕಾಡಿನಲ್ಲಿ ಕಷ್ಟಪಡುವುದೇಕೆಂದು ನೀವು ಕೇಳಬಹುದು. ಉಪ್ಪಂಗಗಳಲ್ಲಿ ವಾಸಮಾಡುವುದಕ್ಕಿಂತಲೂ, ವಿಮಾನಗಳಲ್ಲಿ ಸಂಚರಿಸುವುದಕ್ಕಿಂತಲೂ