ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೫ ಸರ್ಗ. ೧.] ಅಯೋಧ್ಯಾಕಾಂಡವು. ಪಟ್ಟಣವನ್ನು ಸೇರಿದೊಡನೆ, ಅವನಿಂದ ಅನೇಕ ವಿಧದಲ್ಲಿ ಸತ್ಕರಿಸಲ್ಪಟ್ಟುದಲ್ಲ ದೆ, ತನ್ನ ತಮ್ಮ ನಾದ, ಶತ್ರುಪ್ಪುನ ಸಹವಾಸಸೌಖ್ಯದಿಂದ ಇನ್ನೂ ವಿಶೇಷ ಸಂತೋಷವುಳ್ಳವನಾಗಿ ಸುಖದಿಂದಿರುತ್ತಿದ್ದನು. ಅಶ್ವಪತಿಯಾದ ಶತ್ರುವನಿಗೆ ರಾಮನಲ್ಲಿರುವುದಕ್ಕಿಂತಲೂ ಭರತನಲ್ಲಿಯೇ ಭಕ್ತಿಯು ಹೆಚ್ಚೆಂಬುದೂ, ಆ ರಾಮಭಕ್ತಿ ವಿಷಯದಲ್ಲಿಯೂ ಶತ್ರುಘ್ನನು ಭರತನ್ನೇ ಮುಂದಿಟ್ಟುಕೊಂಡು, ಅವ ನನ್ನೇ ಹಿಂಬಾಲಿಸಿ ರಾಮಸೇವೆಯನ್ನು ಮಾಡುತ್ತಿದ್ದನೆಂಬುದೂ ಸೂಚಿತವಾಗುವುದು. ಇದೇ ಅರ್ಥಗಳು 'ನಾಹಂ ಸ್ವವಿಮಿ ಜಾಗರ್ಮಿ ತಮೇವಾರಂ ವಿಚಿಂತರ್ಯ” ಎಂದೂ, ಜಗ್ರಾಹ ಭರತೋ ರರ್ಶ್ಮೀ ಶತ್ರುಘ್ನಶೈತ್ರಮಾದದೇ” ಎಂದೂ, ಮುಂದೆ ಹೇಳಲ್ಪಡುವ ವಿಷಯಗಳಿಂದ ಸ್ಪಷ್ಟವಾಗುವುದು. ಇದರಂತೆಯೇ (ನಿತ್ಯಶತ್ರುಘ್ನ...) ನಿತ್ಯಶತ್ರುಗಳನ್ನು ನಿಗ್ರಹಿಸಿದವನು, ಎಂದರೆ, ಇಂದ್ರಿಯಗಳನ್ನು ನಿಗ್ರಹಿಸಿದವನೆಂ ದರವು. ಈತನು ಇಂದ್ರಿಯಗಳನ್ನು ನಿಗ್ರಹಿಸಿದುದೂ, ರಾಮಭಕ್ತಿ ವಿಷಯದಲ್ಲಿಯೇ ಎಂದು ಗ್ರಹಿಸಬೇಕು, ಹೇಗೆಂದರೆ.'ಪುಂಸಾಂ ದೃಷ್ಟಿಚಿತ್ತಾಪಹಾರಿಣಂ” ಎಂಬುದಾಗಿ, ರಾಮನು ಗಂಡಸರಿಗೂ ಮೋಹಕನಾಗಿರುವುದರಿಂದ, ಆತನಲ್ಲಿ ತನ್ನ ಇಂದ್ರಿಯಗಳು ಲಯಿಸದಿರುವಂತೆ ಅವುಗಳನ್ನು ಈ ಶತ್ರುಘ್ನನು ನಿಗ್ರಹಿಸಿರುವನೆಂದು ಭಾವವು. ಶತ್ರುಘ್ನನು, ಸಾಕ್ಷಾತ್ತಾಗಿ ರಾಮನಲ್ಲಿಯೇ ಭಕ್ತಿ ಮಾಡುವುದಕ್ಕೆ ತನಗೆ ಅಧಿಕಾರವಿಲ್ಲ ವೆಂಬುದನ್ನು ತಿಳಿದು, ಆತನಕಡೆಗೆ ಆಕರ್ಷಿಸಲ್ಪಡಬಹುದಾದ ತನ್ನ ಇಂದ್ರಿಯಗಳನ್ನೂ ನಿಗ್ರಹಿಸಿ, ಭರತನಿಗೆ ಪರತಂತ್ರನಾಗಿದ್ದನೆಂಬ ಭಾಗವತಪಾರತಂತ್ರವು ತಿಳಿಸಲ್ಪಡು ವುದು. (ಪ್ರೀತಿಪರ ಸ್ಮತಸಿ ಶತ್ರುಘ್ನನು ಭರತನನ್ನು ಹಿಂಬಾಲಿಸಿ ಹೋದು ದಕ್ಕೂ, ಆತನ ಪ್ರೀತಿಯೇ ಮುಖ್ಯ ಕಾರಣವೇಹೊರತು, ತನ್ನ ಅಣ್ಣನ ನಿರ್ಬಂಧಕ್ಕೆ, ಕಟ್ಟುಬಿದ್ದು ಹೋದವನಲ್ಲವೆಂದಭಿಪ್ರಾಯವು, ಅಚೇತನಗಳಾದ ಆಯುಧದಿಗಳ ತೆಯೇ ಚೇತನನಾದವನಿಗೂಕೂಡ, ತನ್ನ ಸ್ವಾಮಿಯಲ್ಲಿ ಪಾರತಂತ್ರವಿರಬೇಕಾ ದುದು ಧರ್ಮವಾಗಿದ್ದರೂ, ಅಚೇತನಗಳಿಗೆ ಪ್ರೀತಿಯೆಂಬ ಗುಣವಿಲ್ಲವ, ಚೇತನರಲ್ಲಿ ಆ ಪ್ರೀತಿಯೆಂಬುದೊಂದು ವಿಶೇಷಗುಣವುಂಟಲವೆ ? ಈ ಶತಮ ನಲಿರುವ ಪಿ ತಿಯು ಪಾರತಂತ್ರವನ್ನು ಇನ್ನೂ ಹೆಚ್ಚಾಗಿ ವಿಶ್ಲೇಷಿಸಿತೆಂದು ಭಾವವು. (ನೀತ ) ಉಯ್ಯಲ್ಪಟ್ಟನು, ಇಲ್ಲಿ 'ಹೋದನು' ಎಂದು ಹೇಳದೆ, ಉಯ್ಯಲ್ಪಟ್ಟನು ಎಂದು ಹೇಳಲ್ಪ ಟಿರುವುದರಿಂದ, ಆಯುಧಾದಿಗಳಂತೆ ಈ ಶತ್ರುಘ್ನನ ಸಾಗಿಸಲ್ಪಟ್ಟನೇಹೊರತು, ತಾನೇ ಸ್ವತಂತ್ರಿಸಿ ಹೋಗುತ್ತಿದ್ದವನಲ್ಲ. ಇದರಿಂದ ಅಚೇತನಗಳಲ್ಲಿರುವಷ್ಟು ಪಾರ ತಂತ್ರವು ಸೂಚಿತವಾಗುವುದು. ಈ ಮೇಲಿನ ಅರಗಳಿಂದ ಚೇತನನಾದವನಿಗೆ ಶತ್ರು ನಲ್ಲಿರುವಂತೆಯೇ ಭಾಗವತಪಾರತಂತ್ರವಿರಬೇಕೆಂದು ವ್ಯಕ್ತವಾಗುವುದು,