ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨.] ಅಯೋಧ್ಯಾಕಾಂಡವು. ಅಣಿಮಾದ್ಯಷ್ಟೇಶ್ವರಸಿದ್ಧಿಗಳನ್ನು ಪಡೆದು ಆಕಾಶದಲ್ಲಿ ಸಂಚರಿಸುವುದ ಕ್ಕಿಂತಲೂ, ಸರಾವಸ್ಥೆಗಳಲ್ಲಿಯೂ ಪತಿಯ ಪಾದಛಾಯೆಯನ್ನನುಸರಿಸಿ ನಡೆಯುವುದೇ ಸಿಯರಿಗೆ ಸರೋತ್ತಮಧರವು, ಯಾವಯಾವ ವರ್ಣಾ ಶ್ರಮದವರು ಯಾವಯಾವರೀತಿಯಲ್ಲಿ ನಡೆದುಕೊಳ್ಳಬೇಕೆಂಬುದನ್ನು ನನ್ನ ತಂದೆ ತಾಯಿಗಳೇ ನನಗೆ ಅನೇಕವಿಧವಾಗಿ ತಿಳಿಸಿರುವರು. ಆದುದ ರಿಂದ ಈ ಭಾಗದಲ್ಲಿ ನನಗೆ ಬೇರೆ ಯಾರೂ ಉಪದೇಶಿಸಬೇಕಾದುದಿಲ್ಲ. ಆ ಅರಣ್ಯವು ಎಷ್ಟೆ ದುರ್ಗಮವಾಗಿ ಜನರಹಿತವಾಗಿದ್ದರೂ, ಹುಲಿ, ತೋಳ, ಮೊದಲಾದ ಅನೇಕಕ್ರೂರಮೃಗಗಳಿಗೆ ನಿವಾಸವಾಗಿದ್ದರೂ, ನಾನು ನಿನ್ನೊ ಡನೆ ಬಾರದಿರಲಾರೆನು. ತಂದೆಯ ಮನೆಯಲ್ಲಿರುವಂತೆಯೇ ಅಲ್ಲಿಯೂ ನಾನು ಸುಖದಿಂದಿರಬಹುದು. ನಿನ್ನ ಶುಶೂಷೆಯನ್ನು ಬಿಟ್ಟು, ಈ ತೈಲೋಕ್ಯಾಥಿ ಪತ್ಯವೇ ಸಿಕ್ಕುವುದಾದರೂ ನಾನು ಅಕ್ಷಮಾಡುವವಳಲ್ಲ! ಪಾತಿವ್ರತ್ಯವೆಂ ಬ ನಿಯಮವೊಂದನ್ನೇ ಅನುಸರಿಸಿ, ಇಂದ್ರಿಯಗಳನ್ನು ನಿಗ್ರಹಿಸಿ, ನಿನ್ನ ಸೇವೆ ಯನ್ನು ಮಾಡುತ್ತಿರುವೆನು. ಇಲ್ಲಿ ಎಷ್ಟು ವಿಧದ ರಾಜೋಪಭೋಗಗಳಿದ್ದ ರೇನು ? ನಾನಾವಿಧ ಪಕ್ಷಗಳ ಮಕರಂದದಿಂದ ಸುವಾಸಿತವಾದ ವನಪ್ಪ ದೇಶದಲ್ಲಿ ನಿನ್ನೊಡಗೂಡಿ ವಿಹರಿಸುವುದಕ್ಕಿಂತಲೂನನಗೆ ಮೇಲಾದ ಭೋಗ ವು ಬೇರೊಂದುಂಟೆ ? ಕಾಡಿನಲ್ಲಿ ನನ್ನನ್ನು ಕಾಪಾಡುವುದು ಹೇಗೆಂದು ನೀನು ಚಿಂತಿಸಬಹುದು. ನಿನ್ನಲ್ಲಿ ಬಂದು ಮರೆಹೊಕ್ಕ ಯಾರನ್ನಾದರೂ ನೀನು ಕಾಪಾಡಬಲ್ಲೆಯಲ್ಲವೆ ? ಹೀಗಿರುವಾಗ ಕೈಹಿಡಿದ ಹೆಂಡತಿಯಾದ ನ ನ್ನನ್ನು ಕಾಪಾಡಲಾರೆಯಾ? ನನ್ನ ದೇಹವನ್ನು ಮಾತ್ರವೇಅಲ್ಲದೆ, ನನ್ನ ಮಾನ ವನ್ನು ಕಾಪಾಡುವವನೂ ನೀನೇ ಅಲ್ಲವೆ? ನಿನ್ನೊಡನೆ ನಾನೂ ಕಾಡಿಗೆ ಬಂ ದೇಬರುವೆನು. ಇದರಲ್ಲಿ ಸ್ವಲ್ಪವೂ ಸಂದೇಹವಿಲ್ಲ. ಎಲೈ ಮಹಾಭಾಗನೆ ! ನೀನು ಎಷ್ಟು ಹೇಳಿದರೇನು ? ನಾನು ನಿನ್ನನ್ನು ಬಿಟ್ಟು ಇಲ್ಲಿರಲಾರೆನು! ನಿ ನೊಡನೆ ಬರುವುದಾಗಿಯೇ ಮನಸ್ಸನ್ನು ದೃಢಪಡಿಸಿಕೊಂಡಿರುವೆನು. ನನ್ನ ಪೋಷಣೆಗಾಗಿ ನೀನು ಸ್ವಲ್ಪವೂ ಕಷ್ಟಪಡಬೇಕಾದುದಿಲ್ಲ. ಅಲ್ಲಲ್ಲಿ ಸಿಕ್ಕಿದ ಹಣ್ಣು ಹಂಪಲುಗಳನ್ನೂ, ಗಡ್ಡೆಗೆಣಸುಗಳನ್ನೂ ತಿಂದು ಜೀವಿಸಿ ಕೊಳ್ಳುವೆನು, ಇದರಲ್ಲಿ ಸಂದೇಹವಿಲ್ಲ. ನಿನ್ನನ್ನು ನಾನು ಯಾವ ವಿಧದ ಲ್ಲಿಯೂ ಕಷ್ಟಪಡಿಸುವುದಿಲ್ಲ. ನಿನ್ನ ಸಹವಾಸಸೌಖ್ಯವೊಂದಿದ್ದರೆ ಸಾಕು!