ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಕ, .] ಅಯೋಧ್ಯಾಕಾಂಡವು. ಎಷ್ಮೆ ದುರ್ಗಮವಾಗಿದ್ದರೂ ಇರಲಿ! ಮತ್ತು ಅಲ್ಲಿ ಕೋತಿಗಳು, ಕಾಡಾ ನೆಗಳು ಮೊದಲಾದ ಎಷ್ಮೆ ಕ್ರೂರಮೃಗಗಳಿದ್ದರೂ ಇರಲಿ ! ನಾನು ಹಿಂತೆಗೆಯುವವಳಲ್ಲ. ನಿನ್ನ ಸಂಗಡಲೇ ಬರುವೆನು. ನಾನು ನಿಯಮನಿಷ್ಠ ಳಾಗಿ ನಿನ್ನ ಪಾದಶುಶೂಷೆಯನ್ನು ಮಾಡುತ್ತ, ತಂದೆಯ ಮನೆಯಲ್ಲಿರು ವಂತೆಯೇ ಸುಖವಾಗಿರುವೆನು. ನಿನ್ನ ಪಾದವನ್ನಾಶ್ರಯಿಸಿದ ನನಗೆ ಯಾವ ವಿಧದಲ್ಲಿಯೂ ಭಯವಿಲ್ಲ. ನಿನ್ನನ್ನು ಬಿಟ್ಟು ನನ್ನ ಮನಸ್ಸು ಸಹಿಸಲಾರದು. ನಿನ್ನನ್ನು ಬಿಟ್ಟರೆ ನನಗೆ ಬೇರೆ ಪ್ರಿಯವಾದ ವಸ್ತುವೊಂದೂ ಈ ಪ್ರಪಂಚ ದಲ್ಲಿಲ್ಲ. ನೀನು ಮಾತ್ರ ನನ್ನನ್ನು ಆಗಲಿಹೋದರೆ, ನನಗೆ ಮರಣವೇ ಶರಣ ವಲ್ಲದೆ ಬೇರೆಯಲ್ಲ. ಇದೆಲ್ಲವನ್ನೂ : ನು ಚೆನ್ನಾಗಿ ಪದ್ಯಾಲೋಚಿಸಿ, ನನ್ನನ್ನೂ ಕಾಡಿಗೆ ಕರೆದುಕೊಂಡು ಹೋಗು ! ನನ್ನ ಪ್ರಾರನೆಯನ್ನ ಒಗೀಕರಿಸು ! ನಾನು ಸಂಗಡಬಂದ ಮಾತ್ರಕ್ಕೆ ನಿನಗೆ ಅದೊಂದು ಭಾಗವಲ್ಲ ” ಎಂದಳು. ವಾನರಶ್ರೇಷ್ಠರಾದ ಸುಗ್ರೀವಾದಿಗಳು ನಮಗುಂಟಾದ ವಿಯೋಗವನ್ನು ತಪ್ಪಿಸಿ ನಮಗೆ ಸಹಾಯಕರಾಗುವರೆಂದು ಭಾವವು. (ವನೇ; ಹಿಂದಿನಪಾದದಲ್ಲಿ ಹೇಳಲ್ಪಟ್ಟಿರುವ ('ವನಂ”ಎಂಬ ಶಬ್ದವೇ ಸಾಕಾಗಿರುವಾಗಲೂ ಪುನ: ಇಲ್ಲಿ 'ವನೇ” ಎಂದು ಹೇಳಿರುವ ದರಿಂದ, ಈ ವರಶಬ್ದಕ್ಕೆ ಅಶೋಕವನವೆಂದು ಗ್ರಹಿಸಬೇಕು. (ನಿವತ್ನಾಮಿ ಯಥಾ ಪಿತರ್ಗೃಹೇ) ತಂದೆಯ ಮನೆಯಲ್ಲಿ ನಾನು ನಿನ್ನನ್ನು ಬಿಟ್ಟಿದ್ದಂತೆ, ಅಲ್ಲಿಯೂ ಕೆಲವು ಕಾಲವರದವರೆಗೆ ಇದು ಬರವೆನೆಂದು ಭಾವವು. ಹಾಗೆ ಅಲ್ಲಿರುವಾಗಲೂ ಕೂಡ (ತವೈವ ಪಾದಾವುರಗೃಹ್ಯ ಸಂಯತಾ) ನಿನ್ನ ಪಾದಧ್ಯಾನವನ್ನೇ ಮಾಡುತ್ತ ನಿಯಮದಿಂದಿರುವೆ ನೆ೦ದರವು. ಅನನ್ಯಭಾವಾಂ! ಅಲ್ಲಿ ನಿನ್ನ ಧ್ಯಾನವಲ್ಲದೆ ನನಗೆ ಬೇರಿಲ್ಲವು (ಅನುರಕ್ಕೆ ಚೇತಸಂ) ನಿನ್ನಲ್ಲಿ ಪತಿಯೆಂಬ ಗೌರವದಿಂದಮಾತ್ರವೇ ನಾನು ಹಾಗಿರುವವಳಲ್ಲ. ನನಗೆ ನಿನ್ನಲ್ಲಿರುವ ಮನಃಪೂರಕವಾದ ಅನುರಾಗವೇ ನನ್ನನ್ನು ಹಾಗೆಮಾಡುವದೆಂದು ಭಾ ವವು. (ಯಾವಿಯುಕ್ಕಾಂ ಮರಣಾಯ ನಿಶ್ಚಿತಾಂ ಮಾಂ ನಯಸ್ಸ) ಬಹುಕಾಲದವರೆಗೆ ನಿನ್ನಗಲಿಕೆಯನ್ನು ಸಹಿಲಾರದುದಕ್ಕಾಗಿ ಯಾವಾಗ ನಾನು ಪ್ರಾಣತ್ಯಾಗವನ್ನು ಮಾಡಿ ಕೊಳ್ಳಬೇಕೆಂದು ನಿಶ್ಚಯಿಸಿಕೊಳ್ಳುವೆನೋ, ಆಗ ನೀನು ಆಂಜನೇಯನೇ ಮೊದಲಾದ ಕಪಿಗಳ ಸಹಾಯದಿಂದ ನಿನ್ನ ಬಳಿಗೆ ಕರೆಸಿಕೊಳ್ಳುವಳಾಗು ” ಎಂದು ಭಾವವು. (ಯಾಚನಾಂ ಕುರುಷ್ಟ) ದೇವತೆಗಳು ಬಂದು ಕೇಳಿಕೊಂಡ ರಾವಣವಧವನ್ನು ನೀನು ನಡೆಸು, (ಆತ:) ಇದರಿಂದ, (ಮಯಾ) ನನ್ನಿಂದ (ತೆ) ನಿನಗೆ, (ಗುರುತಾ) ಭಾರವು ವಿರಹಾಯಾಸವು, (ನಭವಿಷ್ಯತಿ) ಇರಲಾರದು ಎಂದು ರಹಸ್ಕಾರವು.