ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಡನೆ ಮೇಲೆಬಿಂಗಗಳೆಲ್ಲವೂ ಅಲ್ಲಿ ಪಶದಲ್ಲಿ ನಿರ್ಭಯವು ಸರ್ಗ, ೨೮.) ಅಯೋಧ್ಯಾಕಾಂಡವು. ೪ee ದಕ್ಕಸಾಧ್ಯವಾದ ಮಹಾರಣ್ಯವೇ ವನವೆನಿಸುವುದು, ನಾನು ನಿನ್ನ ಹಿತಕ್ಕಾಗಿ ಹೇಳುವೆನೇಹೊರತು, ನಿನ್ನನ್ನು ಕಾಪಾಡಲಾರದುದಕ್ಕಾಗಿ ಹೀಗೆ ಹೇಳುವೆನೆಂ ದು ತಿಳಿಯಬೇಡ ! ಕಾಡಿನಲ್ಲಿ ನಿಮಿಷಮಾತ್ರವೂ ಸುಖವೆಂಬುದೇ ಇಲ್ಲದೆ. ಯಾವಾಗಲೂ ದುಃಖಪ್ರಚುರವಾಗಿರುವುದು. ಅಲ್ಲಲ್ಲಿ, ಪಕ್ವತಗುಹೆಗಳಲ್ಲಿ ವಾಸಮಾಡುತ್ತಿರುವ ಸಿಕ್ಕದ ಗರ್ಜನೆಗಳೂ, ಅಲ್ಲಲ್ಲಿ ಪತಶಿಖರಗಳಿಂದ ಕೆಳಕ್ಕೆ ಬಿಳುವ ಗಿರಿನದಿಗಳ ಜಲಪಾತಧ್ವನಿಗಳೂ ಆಗಾಗ ಕಿವಿಗೆ ಬಿಳು ತಿರುವುವು. ಈ ಭಯಂಕರವಾದ ಧ್ವನಿಗಳನ್ನು ಕಿವಿಯಿಂದ ಕೇಳುವುದೂ ಕೂಡ ಬಹಳಕಷ್ಟವಾಗುವುದು. ಆದುದರಿಂದ ವನವಾಸವೆಂಬುದರಲ್ಲಿ ಬಹ ಕಷ್ಟವುಂಟು, ಜನಶೂನ್ಯವಾದ ಪ್ರದೇಶದಲ್ಲಿ ನಿರ್ಭಯವಾಗಿ ಕ್ರೀಡಿ ಸುತ್ತಲಿರುವ ಮೃಗಗಳೆಲ್ಲವೂ ಅಲ್ಲಲ್ಲಿ ನಿಂತಿರುವುವು. ಅವು ನಮ್ಮನ್ನು ಕಂಡೊ ಡನೆ ಮೇಲೆಬಿದ್ದು ಕೊಲ್ಲುವುದಕ್ಕೆ ಬರುವುವು.ಇದರಿಂದಲೇ ನಾನು ವನವಾಸ ವನ್ನು ಕಷ್ಟವೆಂದು ಹೇಳಿದೆನು. ಕಾಡಿನಲ್ಲಿರತಕ್ಕ ಕೊಳಗಳೆಲ್ಲವೂ ಯಾವಾಗ ಮೊಸಳೆಗಳಿಂದಲೂ, ಕಾಡಾನೆಗಳಿಂದಲೂ ತುಂಬಿರುವುವು.ಇದರಿಂದಲೇ ವನವಾಸವು ಬಹಳ ಅಪಾಯಹೇತುವಾಗಿರುವುದು. ಕಾಡುಗಳಲ್ಲಿ ಮುಳ್ಳು, ಪೊದರು, ಮುಂತಾದುವುಗಳು ವಿಶೇಷವಾಗಿ ತುಂಬಿರುವುದರಿಂದ, ಅಂತಹ ಕಾಡುದಾರಿಗಳಲ್ಲಿ ಸಂಚಾರಮಾಡುವುದೇ ಬಹಳಕಷ್ಟವು. ಅಲ್ಲಲ್ಲಿ ಕಾಡು ಕೋಳಿಗಳು ಭಯಂಕರವಾದ ಧ್ವನಿಗಳಿಂದ ಕೂಗುತ್ತಿರುವುವು. ಎಷ್ಟು ದೂ ರಕ್ಕೆ ಹೋದರೂ ಸ್ವಲ್ಪವಾದರೂ ನೀರು ಸಿಕ್ಕುವುದಿಲ್ಲ. ಇದಕ್ಕಿಂತಲೂ ಬೇ ರೆ ಕಷ್ಟವೇನುಂಟು?ಹಗಲೆಲ್ಲಾ ಕಾಡುದಾರಿಗಳಲ್ಲಿ ಸುತ್ತಿ ಶ್ರಮಪಟ್ಟು, ರಾತ್ರಿಯಲ್ಲಿ ಶ್ರಮಪರಿಹಾರಾರ್ಥವಾಗಿ ಮಲಗಬೇಕಾದರೂ, ಅಲ್ಲಲ್ಲಿ ಉದಿ ರಿರುವ ಎಲೆಗಳ ಹಾಸಿಗೆಯ ಮೇಲೆ ಮಲಗಬೇಕೇ ಹೊರತು, ಒಂದು ದಿನ ಸವಾದರೂ ಸುಖಶಯ್ಕೆಗೆ ಅವಕಾಶವೇ ಇಲ್ಲ. ಇದರಿಂದಲೇ ಕಾಡಿನಲ್ಲಿರುವು ದುಬಹಳಷ್ಟವು. ಅಲ್ಲಿ ಹಸಿದುಬಂದವರಿಗೆ ತಕ್ಕ ಆಹಾರವೂ ದುರಭವು. ಹಗಲುರಾತ್ರಿಯೂ ಅಲ್ಲಲ್ಲಿ ಮರಗಳಿಂದ ಉದಿರಿಬಿದ್ದಿರುವ ಹಣ್ಣುಗಳನ್ನು ತಿಂದು ಅಷ್ಟರಲ್ಲಿಯೇ ತೃಪ್ತಿಯನ್ನು ಹೊಂದಬೇಕು. ಇದರಿಂದಲೇ ವನವಾ ಸವು ಬಹಳ ಕಷ್ಟವು. ಅವರವರ ಶಕ್ಕನುಸಾರವಾಗಿ ಉಪವಾಸವಿರ ಬೇಕು. ಜಡೆಯನ್ನು ಧರಿಸಬೇಕು. ನಾರುಮಡಿಯನ್ನುಡಬೇಕು.ಆಯಾಕಾಲ