ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


so. ಶ್ರೀಮದ್ರಾಮಾಯನಪು [ಸರ್ಗ, . ಟಾದಾಗ ಭಯಪಡಬೇಕಾದದು ಸ್ವಾಭಾವಿಕವೇ ಅಲ್ಲವೆ ? ನಿಮ್ಮ ಗುರುಜನ ವು ನಿನಗೆ ಕೊಟ್ಟಿರುವ ಆಜ್ಞೆಯು ನನಗೆ ಅನ್ವಯಿಸದಿರುವುದೆ ? ಆದುದರಿಂ ನ ಆವರ ಆಜ್ಞೆಯಂತೆ ನಾನೂ ನಿನ್ನೊಡನೆ ಹೊರಡಬೇಕಾದುದೇನ್ಯಾಯವು! ನಾನು ನಡೆಸಬೇಕಾದ ಮೊದಲನೆಯ ಕೆಲಸವೇ ಅದು. ಅದು ತಪ್ಪಿದರೆ ಇಲ್ಲಿ. ಪ್ರಾಣವನ್ನು ಬಿಡಬೇಕಾದುದು ಎರಡನೆಯ ಕೆಲಸವು? ಕಾಡಿನಲ್ಲಿ ಅನೇ ಕವಿಧವಾದ ಭಯವುಂಟೆಂದು ಹೇಳಿದೆಯಲ್ಲವೆ! ನೀನು ನನಗೆ ಬೆಂಬಲವಾ ಗಿರುವಾಗ, ದೇವದೇವನಾದ ಮಹೇಂದ್ರನೂಕೂಡ ನನ್ನನ್ನು ತಿರಸ್ಕರಿಸಿ ತನ್ನ ತೇಜಸ್ಸನ್ನು ಉಳಿಸಿಕೊಳ್ಳಲಾರನು. ಗಂಡನನ್ನಗಲಿದ ಹೆಂಗಸು ಲೋಕದಲ್ಲಿ ಎಂದಿಗೂ ಪ್ರಾಣವನ್ನು ಧರಿಸಿರಲಾರಳು. ಈ ವಿಷಯವನ್ನು ಕುರಿತು ನೀನೇ ನನಗೆ ಹಿಂದೆ ಅನೇಕ ನಿದರ್ಶನಗಳನ್ನು ತೋರಿಸಿ, ಅನೇಕವಿ ಧವಾಗಿ ಉಪದೇಶಿಸಿರುವೆಯಲ್ಲವೆ? ಅದು ಹಾಗಿರಲಿ! ಹಿಂದೆ ನಾನು ತಂದೆಯ ಮನೆಯಲ್ಲಿದ್ದಾಗಲೇ ನನಗೆ ಕೆಲವು ದಿವಸಗಳವರೆಗೆ ವನವಾಸಪ್ರಾಪ್ತಿಯುಂ ಟೆಂದು ಜ್ಯೋತಿಷ್ಯರು ಹೇಳುತಿದ್ದುದನ್ನು ಕೇಳಿದ್ದೆನು. ಇದಲ್ಲದೆ ಸಾಮ ಕಲಕ್ಷಣವನ್ನು ಬಲ್ಲ ಬ್ರಾಹ್ಮಣರೂಕೂಡ, ಇದೇ ವಿಷಯವನ್ನು ಹೇ ಳಿದ್ದರು. ಅದುಮೊದಲುಗೊಂಡು ಯಾವಾಗಲೂ ನಾನು ವನಸಂಚಾರವು ಯಾವಾಗ ಪ್ರಾಪ್ತವಾಗುವುದೋ ಎಂದು ಎಷ್ಟೋ ಉತ್ಸಾಹದಿಂದ ನಿರೀ ಕಿಸುತ್ತಿರುವೆನು. ಶಾಸ್ತ್ರಜ್ಞರ ಮಾತು ಎಂದಿಗೂ ಸುಳ್ಳಾಗಲಾರದು, ಹೇಗಿ "ರೂ ನಾನು ಕೆಲವು ದಿನಗಳವರೆಗೆ ವನವಾಸವನ್ನು ಅನುಭವಿಸಿಯೇ ತೀರ ಬೇಕು. ಈ ದೈವಸಂಕಲ್ಪವನ್ನು ನೀನೂ ತಪ್ಪಿಸಲಾರೆಯಲ್ಲವೆ ? ಹೀಗೆ ನಾ ನು ಕಾಡಿನಲ್ಲಿರಬೇಕಾದ ಕಾಲವನ್ನು ಈಗ ನಿನ್ನೊಡನೆಯೇ ಕಳೆದುಬಿಡು ವುದುತ್ತಮವಲ್ಲವೆ?ಆಬ್ರಾಹ್ಮಣರ ಹೇಳಿಕೆಯೂ ಈಗಲೇ ಕಳೆದುಹೋಗಲಿ ! ಈಗ ತಕ್ಕ ಅವಕಾಶವು ದೊರಕಿರುವುದು. ಅಬ್ರಾಹ್ಮಣರ ಮಾತು ಸತ್ಯವಾ ಗಲಿ ! ನಾನು ಅನುಭವಿಸಬೇಕಾದ ವನವಾಸವನ್ನು ಬೆರೆವಿಧದಲ್ಲಿ ಕಳೆದು ಕೊಳ್ಳುವುದಕ್ಕೆ ನನಗೆ ಅವಕಾಶವಿಲ್ಲ. ಅರಣ್ಯವಾಸದಲ್ಲಿ ಅನೇಕ ಕಷ್ಟಗಳುಂ ಟೆಂಬುದನ್ನು ನಾನೂ ಬಲ್ಲೆನು. ಇದರಲ್ಲಿ ಸಂದೇಹವಿಲ್ಲ. ಆದರೆ ಸ್ವಭಾವಭೀ ರುಗಳಾದವರಿಗಮಾತ್ರವೇ ಅವು ಸಂಭವಿಸುವುವೇಹೊರತು, ಮಹಾವೀರ ನಾದ ನಿನಗೆ ಸಂಭವಿಸಲಾರವು ! ನನಗೆ ಮದಿವೆಯಾಗುವುದಕ್ಕೆ ಮೊದಲು