ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯಣವು (ಸರ್ಗ, 10 ಭಾಗಿನಿಯಾಗಿಯೂ ಇರುವ ನನ್ನನ್ನು ಹೀಗೆ ದುಃಖದಲ್ಲಿರಿಸಿ ಬಿಟ್ಟುಹೋಗು ವುದು ನಿನಗೆ ಉಚಿತವಲ್ಲ.ಆದುದರಿಂದ ನೀನು ನನ್ನನ್ನು ನಿನ್ನ ಸಂಗಡ ಕರೆದು ಕೊಂಡು ಹೋಗಬೇಕಾದುದೇ ನ್ಯಾಯವು. ನಾನು ಹೀಗೆ ದುಃಖಿಸುತ್ತಿದ್ದ ರೂ ನೀನು ನನ್ನನ್ನು ಬಿಟ್ಟು ಹೋಗುವುದಾದರೆ, ವಿಷದಿಂದಲಾಗಲಿ, ಆ | ಯಿಂದಲಾಗಲಿ, ನೀರಿನಿಂದಲಾಗಲಿ ನನ್ನ ಪ್ರಾಣವನ್ನು ಕಳೆದುಕೊಳ್ಳು ವೆನೇ ಹೊರತು ಕ್ಷಣಮಾತ್ರವೂ ಬದುಕಿರಲಾರೆನು” ಎಂದಳು. ಸೀತೆಯು ಹೀಗೆ ಅನೇಕ ವಿಧದಲ್ಲಿ ಪ್ರಾಸಿ ಕೇಳಿಕೊಳ್ಳುತಿದ್ದರೂ, ರಾಮನು ನಿರ್ಜನ ವಾದ ವನಕ್ಕೆ ಆಕೆಯನ್ನು ಕರೆದುಕೊಂಡು ಹೋಗುವುದಕ್ಕೆ ಸಮ್ಮತಿಸದೆ, ಆಕೆಯನ್ನು ಅನೇಕ ವಿಧದಲ್ಲಿ ನಿಷೇಧಿಸುತ್ತಲೇ ಇದ್ದನು. ಹೀಗೆ ರಾಮನು ತ ನ್ನ ಇಷ್ಟಕ್ಕೆ ವಿರೋಧವಾಗಿ ಹೇಳುತ್ತಿರುವುದನ್ನು ಕೇಳಿ, ಸೀತೆಯು ಬಹಳ ಚಿಂತೆಯನ್ನು ಹೊಂದಿ, ಸಂಕಟವನ್ನು ತಡೆಯಲಾರದೆ,ಬಿಸಿಬಿಸಿಯಾಗಿಕಣ್ಣೀ ರನ್ನು ಸುರಿಸುತ್ತಾ, ಆ ಕಣ್ಣೀರಿನಿಂದಲೇ ಭೂಪ್ರದೇಶವೆಲ್ಲವೂ ನೆನೆಯುವ ಹಾಗೆ ಮಾಡುತಿದ್ದಳು. ಹೀಗೆ ದುಃಖಿಸುತ್ತಿರುವ ಆಸೀತೆಯನ್ನು ನೋಡಿ ರಾ ಮನು, ಆಕೆಯ ಪ್ರಯತ್ನವನ್ನು ತಪ್ಪಿಸುವುದಕ್ಕಾಗಿ ಬಾರಿಬಾರಿಗೂ ಅನೇಕವಿ ಥದಲ್ಲಿ ಸಮಾಧಾನಪಡಿಸುತಿದ್ದರು. ಇಲ್ಲಿಗೆ ಇಪ್ಪತ್ತೊಂಬತ್ತನೆಯ ಸರ್ಗವು. (ಸೀತೆಯು ತನ್ನನ್ನು ಕಾಡಿಗೆ ಕರೆದುಕೊಂಡು ಹೋಗದ) * ಕೋಪಕ್ಕಾಗಿ ರಾಮನನ್ನು ತಿರಸ್ಕರಿಸಿದುದು. ' ಜನಕರಾಜಪುತ್ರಿಯಾದ ಆಸೀತೆಯು, ರಾಮನು ತನಗೆ ಹೇಳುತ್ತಿದ್ದ ಸಮಾಧಾನವಾಕ್ಯಗಳೆಲ್ಲವನ್ನೂ ಕೇಳಿದರೂ, ತನ್ನ ದೃಢವಾದ ಉದ್ದೇಶ ವನ್ನು ಬಿಡದೆ, ಹೇಗಾದರೂ ಅವನೊಡನೆ ಪ್ರಯಾಣಮಾಡಬೇಕೆಂದು ನಿಶ್ಚ ಯಿಸಿಕೊಂಡು,ತನ್ನ ಪತಿಯಾದ ರಾಮನನ್ನು ನೋಡಿ ಪುನಃ ನಿರ್ಬಂಧಿಸತೊ ಡಗಿದಳು. ಆಗ ಆಕೆಯ ಮನಸ್ಸಿನಲ್ಲಿ ಉಂಟಾದ ಕೂಪಕ್ಕೂ, ದುಃಖಕ್ಕೂ ಸಾರವಿರಲಿಲ್ಲ. ಹೀಗೆ ಮಿತಿಮೀರಿದ ದುಃಖಕೋಪಗಳಿಂದಲೂ, ಪತಿಯಾ ದ ರಾಮನಲ್ಲಿ ತನಗಿರತಕ್ಕ ಸಲಿಗೆಯಿಂದಲೂ, ವಿಶೇಷವಾದ ಸ್ವಾತಂತ್ರ್ಯ, ವನ್ನು ತೆಗೆದುಕೊಂಡು, ಪ್ರಣಯಪೂಕವಾಗಿ ಆತನನ್ನು ತಿರಸ್ಕರಿಸುತ್ತಾ