ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೬ ಶ್ರೀಮದ್ರಾಮಾಯಣವು [ಸರ್ಗ. ೧. ಯುಧಾಜಿತ್ತೂ ಕೂಡ, ತನ್ನ ಸೋದರಳಿಯನಾದ ಭರತನನ್ನೂ, ಶತ್ರುಘ್ನು ನನ್ನೂ ಸಮದೃಷ್ಟಿಯಿಂದ ನೋಡುತ್ತ, ಅವರನ್ನು ತನ್ನ ಹೊಟ್ಟೆಯಲ್ಲಿ ಹು ಟ್ಟಿದ ಮಕ್ಕಳಂತೆಯೇ ಭಾವಿಸಿ, ಆವರವರ ಇಷ್ಟಾನುಸಾರವಾದ ಆಹಾರವ ಸ್ನಾಭರಣಗಳನ್ನು ಕೊಟ್ಟು, ಬಹುಪ್ರೇಮದಿಂದ ಲಾಲಿಸುತಿದನು. ಬಹು ರಮಣೀಯವಾದ ಆ ಪಟ್ಟಣದಲ್ಲಿ ಈ ರಾಜಕುಮಾರರಿಬ್ಬರೂ ತಮಗೆ ಬೇಕು ಬೇಕಾದ ಸೌಖ್ಯಸಮೃದ್ಧಿಗಳನ್ನನುಭವಿಸುತ್ತ ಸುಖದಿಂದುರುತ್ತಿದ್ದರು. ಅಶ್ವ ಪತಿಯು ಇಷ್ಟವಾದ ವಸ್ತುಗಳೆಲ್ಲವನ್ನೂ ಕೊಟ್ಟು ಅವರನ್ನು ಬಹುಪ್ರೀತಿ ಯಿಂದ ಪೋಷಿಸುತ್ತಿದ್ದರೂ ಅವರು ಇತ್ತಲಾಗಿ ತಮ್ಮ ತಂದೆಯಾದ ದಶರ ಥನನ್ನೇ ಆಗಾಗ ಸ್ಮರಿಸಿಕೊಳ್ಳುತ್ತ, (ಆಹಾ ! ನಮ್ಮ ತಂದೆಯು ಬಹಳವೃದ್ಧಿ ನಾದನು!ಇನ್ನು ರಾಜ್ಯವನ್ನು ನಿಗ್ಟಹಿಸಲಾರನು! ಈಗಲಾದರೂ ರಾಮನನ್ನು ಯುವರಾಜನನ್ನಾಗಿ ಮಾಡಿರಬಹುದೆ? ಈಗ ನಾವು ವೃದ್ಧನಾದ ತಂದೆಯ ಶುಶೂಷೆಯನ್ನು ಮಾಡದೆ ಇಲ್ಲಿರುವೆವಲ್ಲ!” ಎಂದು ಆಗಾಗ ಚಿಂತಿಸುತ್ತಿರು ವರು. ಅತ್ತಲಾಗಿ ಮಹಾತೇಜಸ್ವಿಯಾದ ದಶರಥನೂಕೂಡ, ಸಾಕ್ಷಾತ್ಕಹೇಂ ಇವರುಣರಂತೆ ಮಹಿಮೆಯುಳ್ಳವರಾಗಿಯೂ, ಪರಸ್ಪರಪ್ರೇಮದಿಂದ ಎಡೆ ಬಿಡದವರಾಗಿಯೂ ಇರುವ ತನ್ನ ಮುದ್ದು ಮಕ್ಕಳಾದ ಭರತಶತ್ರುಸ್ಸು ರಿಬ್ಬ ರೂ ಹೀಗೆ ದೇಶಾಂತರಗತರಾಗಿರಲು, ಆಗಾಗ ಅವರನ್ನು ಜ್ಞಾಪಿಸಿಕೊಳ್ಳು ತ್ಯ, ಆಹಾ! ಎಷ್ಟು ಭಾಗ್ಯಸಮೃದ್ಧಿಯಿದ್ದರೇನು? ಆ ಮಕ್ಕಳಿಬ್ಬರೂ ಸಮಿ ಪದಲ್ಲಿಲ್ಲದುದೇ ಒಂದು ದೊಡ್ಡ ಚಿಂತೆಯಾಗಿದೆ.” ಎಂದು ಬಾರಿಬಾರಿಗೂ ಚಿಂತಿಸಿಕೊರಗುತ್ತಿರುವನು. ದಶರಥರಾಜಸಿಗೆ ಪುರುಷಸಿಂಹರೆನಿಸಿಕೊಂಡ ಆ ನಾಲ್ವರು ಕುಮಾರರೂ, ದೇಹದಲ್ಲಿ ಹುಟ್ಟಿದ ನಾಲ್ಕು ತೋಳುಗಳಂತೆ ಸಮಾನವಾದ ಪ್ರೀತಿಗೆ ಪಾತ್ರರಾಗಿದ್ದರು. ಅದರಲ್ಲಿಯೂ ಮುಖ್ಯವಾಗಿ ರಾಮನು, ಸಮಸ್ತಭೂತಗಳಲ್ಲಿಯೂ ಬ್ರಹ್ಮನು ಹೇಗೋ ಹಾಗೆ, ಆ ನಾಲ್ವ ರಲ್ಲಿ ವಿಶೇಷವಾದ ಗುಣಗಳಿಂದಲ, ತೇಜಸ್ಸಿನಿಂದಲೂ ಶೋಭಿಸುತ್ತ, ತಂ ದೆಯ ಅಸಾಧಾರಣಪ್ರೀತಿಗೆ ಪಾತ್ರನಾಗಿದ್ದನು. ಆ ರಾಮನಾದರೂ ಸಾ ಮಾನ್ಯನೆ?*ಗತ್ವದಿಂದ ಕೊಬ್ಬಿ ತ್ರೈಲೋಕ್ಯವನ್ನೂ ಗೋಳಾಡಿಸುತ್ತಿರುವ

  • ಸಹಿ ದೇವೈರುಧೀರಸ್ಯ ರಾವಣಸ್ಯ ವಥಾರಿಭಿಸಿ 1 ಅರಿತೋ ಮಾನುಷೇ ಲೋ ಈ ಜಜೈ ವಿಷ್ಣು ಸ್ಸನಾತನಃ!ಎಂಬುದೇ ಇದಕ್ಕೆ ಮೂಲವು. (ಸಹಿ) ಅಂತವನೆಂದರೆ,