ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ ಸರ್ಗ, ೩೦.] ಅಯೋಧ್ಯಾಕಾಂಡವು. ಕೆಂದು ಹೇಳಿದೆಯೋ, ಯಾರ ಶುಶೂಷೆಗೋಸ್ಕರ ನನ್ನನ್ನು ಇಲ್ಲಿಯೇ ನಿಲ್ಲಿ ಸುವೆಯೋ, ಆ ಮಾತೆಯರಿಗೆ ನೀನೇ ಅನವರತವೂ ಶುಶೂಷೆಯನ್ನು ಮಾ ಡುತ್ತಾ, ಅವರು ಹೇಳಿದ ಕೆಲಸಗಳನ್ನು ಮಾಡಿಕೊಂಡು ಏಕಿರಬಾರದು? (ಯಾವಳಿಗೆ ಇದುವರೆಗೂ ನೀನು ಅನೇಕಹಿತವಾದಗಳನ್ನು ಹೇಳುತಿದ್ದೆಯೋ, ಯಾವಳಿಗಾಗಿ ನೀನು ಇಷ್ಟು ಕಷ್ಟಪಡುತ್ತಿರುವೆಯೋ, ಅಂತಹ ನನಗೆ ನೀನು ಇದೊಂದಾವರ್ತಿಯಾದರೂ ವಶ್ಯನಾಗಿದ್ದು, ನಾನು ಹೇಳಿದ ಮಾತನ್ನು ನಡೆಸಿ ಕೊಡಬಾರದೆ ? ಯಾವನಿಗೆ ಹಿತವನ್ನೆ ಕೋರುತ್ತಾ ಅನುಕೂಲ ಳಾಗಿರಬೇಕೆಂದು ನನಗೆ ಬುದ್ದಿವಾದವನ್ನು ಹೇಳಿದೆಯೋ, ಯಾವನ ಅಭಿಷೇಕಪ್ರಯತ್ತ ಕ್ಕಾಗಿ ನೀನು ಇಷ್ಟು ಶ್ರಮಪಟ್ಟು ತಂದೆಯಿಂದ ನಿ ಗ್ರಹಿಸಲ್ಪಟ್ಟಿರುವೆಯೋ, ಅಂತಹ ಭರತನ ಆಜ್ಞಾನುಸಾರವಾಗಿ ನೀನೇ ಇಲ್ಲಿದ್ದು ಅವನ ಶುಶೂಷೆಯನ್ನು ನಡೆಸುತ್ತಿರಬಾರದೆ?) ಆಗ ನಿನ್ನನ್ನೇ ಅನುಸರಿಸಿ ನಾನೂ ಕೆಲಸಗಳನ್ನು ಮಾಡುತ್ತಿರುವೆನು. ನೀನು ಕಾಡಿಗೆ ಹೊ ರಟರೆ ನಾನೂ ಹೊರಟುಬರುವೆನು. ಪತಿಯನ್ನನುಸರಿಸಿ ನಡೆಯಬೇಕಾ ದುದೇ ಪತ್ನಿ ಯರ ಧರವು. ನನಗೆಮಾತ್ರ ನೀನು ಆ ಶುಕ್ರೂಷೆಯನ್ನು ಮಾಡುತ್ತಿರೆಂದು ಹೇಳುವುದುಚಿತವಲ್ಲ. ಎಲೈ ರಾಮನೇ ! ನಿನಗೆ ತಿಳಿಯ ದುದೊಂದೂ ಇಲ್ಲ. ತಪೋವನದಲ್ಲಿಯಾಗಲಿ, ಘೋರಾರಣ್ಯದಲ್ಲಿಯಾ ಗಲಿ, ಸ್ವರ್ಗಲೋಕದಲ್ಲಿಯಾಗಲಿ, ನಾನು ನಿನ್ನೊಡನೆಯೇ ಇದ್ದು ಕೊಂ ಡು, ಆಯಾಸುಖಗಳನ್ನು ಅನುಭವಿಸಬೇಕೇಹೊರತು, ಆಗಲಿರುವುದು ಚಿತವಲ್ಲ. ನೀನಿಲ್ಲದೆ ನನಗೆ ಯಾವುದೂ ಬೇಡ. ನಿನ್ನೊಡನೆ ನಾನು ಬರುತಿ ದರೆ, ನನಗೆ ಯಾವುದೊಂದು ಮಾರ್ಗಶ್ರಮವೂ ತೋರಲಾರದು. ನಾನು ನಿನ್ನ ಸಂಗಡ ಸೇರಿರುವವರೆಗೂ, ಅತ್ಯುತ್ತಮಗಳಾದ ಉದ್ಯಾನದಲ್ಲಿ ವಿಹರಿಸು ತಿರುವಂತೆಯೂ, ಪುಷ್ಟದ ಹಾಸಿಗೆಗಳಲ್ಲಿ ಮಲಗಿರುವಂತೆಯೂ, ಯಾವಾ ಗಲೂ ಸುಖಕರವಾಗಿಯೇ ಇರುವುದೇಹೊರತು, ಸ್ವಲ್ಪವೂ ಕಷ್ಟವು ತೋ ರಲಾರದು. ನಿನ್ನೊಡನೆ ನಾನು ಬರುತಿದ್ದರೆ, ದಾರಿಯಲ್ಲಿ ದರ್ಭೆ, ನೊ ದೆ, ಮತ್ತು ಇತರಮುಳ್ಳುಗಿಡಗಳು ಎಷ್ಟೇ ತುಂಬಿದ್ದರೂ ಅವೆಲ್ಲವೂ ನನಗೆ ಹತ್ತಿಯಂತೆಯೂ, ಮೃದುವಾದ ಜಿಂಕೆಯ ಚರದಂತೆಯೂ,