ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fo ಶ್ರೀಮದ್ರಾಮಾಯಕ [ಸರ್ಗ' 16, ಸುಖಕರವಾಗಿರುವುವೇಹೊರತು ಕಷ್ಟವನ್ನುಂಟುಮೂಡಲಾರವು. ಎಲೆ ನಾಥಾ ! ಕಾಡಿನಲ್ಲಿ ಬಿರುಗಾಳಿಯು ಬೀಸುತ್ತಿರುವಾಗ ಹಾರಿಬಂದು ನನ್ನ ಮೇಲೆ ಬೀಳುವ ಕಲ್ಲು ಮಣ್ಣುಗಳೆಲ್ಲವೂ, ನಿನ್ನೊಡನೆ ಬರುವಾಗ ನನಗೆ ಸ ರೋತ್ತಮವಾದ ಚಂದನದಂತೆ ಸುಖಕರವಾಗಿರುವುದೇ ಹೊರತು ಕಷ್ಟ ಕರವಾಗಿ ತೋರುವುದಿಲ್ಲ. ನೀನು ಕಾಡಿನಲ್ಲಿರುವಾಗ ಅಲ್ಲಿರತಕ್ಕೆ ಎಳಗರಿಕೆ ಹುಲ್ಲುಗಳಮೇಲೆ ಮಲಗುವುದಕ್ಕಿಂತಲೂ, ಇಲ್ಲಿ ಚಿತ್ರಕಂಬಳಿಗಳಿಂದಲೂ, ದುಪ್ಪಟೆ ಮೊದಲಾದ ಮೇಲು ಹೊದ್ದಿಕೆಗಳಿಂದಲೂ ಕೂಡಿದ ಹಾಸಿಗೆಯು ಹೆಚ್ಚು ಸುಖವನ್ನುಂಟುಮೂಡುವುವೆಂದೆಣಿಸುವೆಯಾ ! ಎಂದಿಗೂ ಇಲ್ಲ ! ಕಾಡಿನಲ್ಲಿ ಅಲ್ಲಲ್ಲಿ ಸಿಕ್ಕಬಹುದಾದ ಸೊಪ್ಪಸದೆಗಳಾಗಲಿ, ಹಣ್ಣು ಹಂ ಪಲುಗಳಾಗಲಿ, ಗಡ್ಡೆಗೆಣಸುಗಳಾಗಲಿ, ಅವು ಸ್ವಲ್ಪವಾಗಿದ್ದರೂ ಅಥವಾ ಹೆಚ್ಚಾಗಿದ್ದರೂ, ನೀನು ನಿನ್ನ ಕೈಯಿಂದ ನನಗೆ ಕೊಟ್ಟರೆ, ಅದೇ ನನಗೆ ಅಮೃತರಸದಂತಿರುವುದು. ಕಾಡಿನಲ್ಲಿ ಆಯಾಋತುಧರಗಳಿಗೆ ತಕ್ಕಂತೆ ಬೆಳೆಯುವ ಹಣ್ಣುಗಳನ್ನು ತಿಂದು, ಹೂಗಳನ್ನು ಮುಡಿದು, ಸ್ಟೇಚ್ಛೆಯಾಗಿ ವಿಹರಿಸುತ್ತಿದ್ದರೆ, ನನಗೆ ಎಷ್ಟು ದಿನವಾದರೂ ತಂದೆತಾಯಿಗಳ ಸ್ಮರಣೆಯಾ ಗಲಿ, ಮನೆಯ ಸ್ಮರಣೆಯಾಗಲಿ ಉಂಟಾಗುವುದೇ ಇಲ್ಲ. ನೀನು ನನ್ನನ್ನು ಕಾಡಿಗೆ ಕರೆದುಕೊಂಡುಹೋದಮೂತ್ರದಲ್ಲಿ ನನ್ನಿಂದ ನಿನಗೆ ಯಾವವಿಧ ದಲ್ಲಿಯೂ ಕಷ್ಟವಾಗಲಿ, ದುಃಖವಾಗಲಿ ಉಂಟಾಗುವುದೆಂದೆಣಿಸಬೇಡ ನನ್ನನ್ನು ಪೋಷಿಸುವುದಕ್ಕೂ ನೀನು ಅಲ್ಲಿ ಶ್ರಮಪಡಬೇಕಾದುದಿಲ್ಲ. ನಾನು ನಿನ್ನನ್ನು ಯಾವವಿಧದಲ್ಲಿಯೂ ನಿರ್ಬಂಥಿಸಿ ಕೊರಗಿಸುವುದಿಲ್ಲ. ಎಲೆ ನಾಥನೆ ಹೆಚ್ಚಾಗಿ ಹೇಳಿದುದರಿಂದೇನು? ನಿನ್ನೊಡಗೂಡಿರುವುದೇ ನನಗೆ ಸ್ವರವು! ನಿನ್ನನ್ನಗಲಿರುವುದೇ ನನಗೆ ನರಕವು. ಇದನ್ನು ನೀನು ಚೆನ್ನಾಗಿ ತಿಳಿ. ನನಗೆ ನಿನ್ನಲ್ಲಿರತಕ್ಕ ಪ್ರೀತಿಯು ನಮ್ಮಿಬ್ಬರನ್ನೂ ಕ್ಷಣಮೂತ್ರವಾದರೂ ಅಗಲಿಸ ದಷ್ಟು ಮಿತಿಮೀರಿಹೋಗಿರುವುದು. ಆದುದರಿಂದ ನನ್ನನ್ನು ಬಿಟ್ಟು ಹೋ ಗದೆ ಸಂಗಡಲೇ ಕರೆದುಕೊಂಡುಹೋಗು. ನಿನ್ನಲ್ಲಿರುವ ಅನುರಾಗವಿಶೇಷ ಹಿಂದ ವನವಾಸದ ಕುಕ್ಕೂ ಹೆದರದೆ ಮನಸ್ಸನ್ನು ದೃಢಪಡಿಸಿಕೊಂಡಿ ರುವ ನನ್ನನ್ನು ನೀನು ಇಲ್ಲಿ ಬಿಟ್ಟು ಹೋದುದೇ ಆದರೆ, ಈಗ ನಿನ್ನಿದಿರಾಗಿಯೇ