ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, 40.) ಅಯೋಧ್ಯಾಕಾಂಡವು, ನಾನು ವಿಷವನ್ನು ಕುಡಿದುಬಿಡುವೆನೇಹೊರತು, ನಿಮಿಷಮಾತ್ರವಾದರೂ ಶತ್ರುಗಳ ವಶದಲ್ಲಿರಲಾರೆನು. ಎಲೈ ಪ್ರಿಯನೆ!ಒಂದುವೇಳೆ ನಾನು ಈಗ ಸಾಯದಿದ್ದರೂ, ನೀನು ಹೊರಟುಹೋದಮೇಲೆಯಾದರೂ ಆ ಪ್ರಾಣವು ನನ್ನಲ್ಲಿ ನಿಂತಿರಲಾರದು. ಆದುದರಿಂದ ಆಮೇಲೆ ಸಂಕಟಪಟ್ಟು ಕೊರಗಿ, ಸಾಯುವುದಕ್ಕಿಂತಲೂ ನಿನ್ನಿದಿರಿಗೆ ಪ್ರಾಣಬಿಡುವುದೇ ಸುಖವಲ್ಲವೆ ? ಎಲೆ ರಾಮನೆ! ನಿನ್ನ ವಿರಹದುಃಖವನ್ನು ನಿಮಿಷಮಾತ್ರವಾದರೂ ಸಹಿಸಿಕೊo ಡಿರುವುದು ನನ್ನಿಂದ ಸಾಧ್ಯವಲ್ಲ. ಹೀಗಿರುವಾಗ, ಮೊದಲು ಹತ್ತು ವರ್ಷ ಗಳು! ಅದರಮೇಲೆ ಇನ್ನೂ ಮೂರುವರ್ಷಗಳು ! ! ಅಷ್ಟೂ ಸಾಲದೆ ಮ ತೊಂದುವರ್ಷಕಾಲವು! ! ! ಅಬ್ಬಾ ! ಈ ಹದಿನಾಲ್ಕು ವರ್ಷಗಳನ್ನೂ ದುಃ ಖದಿಂದಲೇ ಕಳೆಯಬೇಕೆಂದರೆ ನನ್ನಿಂದ ಹೇಗೆತಾನೇ ಸಾಧ್ಯವು?” ಎಂದ ಳು. ಹೀಗೆ ಸೀತೆಯು ಮಿತಿಮೀರಿದ ದುಃಖದಿಂದ ಬೆಂದು, ನಾನಾವಿಧ ದಲ್ಲಿ ಪ್ರಲಾಪಿಸಿ, ಬಹುದೀನಳಾಗಿ ಮುಂದೆಬಂದು, ಪತಿಯಾದ ರಾಮನನ್ನು ಬಿಗಿಯಾಗಿ ಎರಡುತೋಳುಗಳಿಂದಲೂ ಅಪ್ಪಿಕೊಂಡು, ಗಟ್ಟಿಯಾಗಿ ಅಳುವು ದಕ್ರಾರಂಭಿಸಿದಳು. ವಿಷದಿಗ್ಗವಾದ ಬಾಣದಿಂದ ಹೊಡೆಯಲ್ಪಟ್ಟ ಹೆಣ್ಣಾ ನೆಯಂತೆ, ಆಸೀತೆಯು ರಾಮನ ಮಾತುಗಳಿಂದ ಬಹಳವಾಗಿ ನೊಂದು, ಅರಣಿಶಿಲೆಗಳನ್ನು ಉಜ್ಜಿದಾಗ ಅವುಗಳೊಳಗೆ ಅಡಗಿರತಕ್ಕ ಬೆಂಕಿಯು ಹೊ ರಕ್ಕೆ ಹೊರಟುಬರುವಂತೆ ಬಹುಕಾಲದಿಂದ ಅವಳು ತಡೆದಿಟ್ಟುಕೊಂಡಿದ್ದ ಬಿಸಿಬಿಸಿಯಾದ ಕಣ್ಣೀರು, ಧಾರೆಧಾರೆಯಾಗಿ ಸುರಿಯಲಾರಂಭಿಸಿತು. ಹೀಗೆ ವ್ಯಸನದಿಂದ ಎಡೆಬಿಡದೆ ಸುರಿಯುತ್ತಿರುವ ಕಣ್ಣೀರಿನ ಧಾರೆಯ, ಸ್ಪಟಿಕ ದಂತೆ ಸ್ವಚ್ಛವಾಗಿ ಕಾಣುತ್ತ, ಕಮಲದಿಂದ ಸುರಿಯುತ್ತಿರುವ ಮಕರಂದ ಧಾರೆಯಂತೆ ಶೋಭಿಸುತಿತ್ತು. ಮತ್ತು ವಿಸ್ತಾರವಾದ ಕಣ್ಣುಗಳಿಂದ ಕೂಡಿ, ಕಳಂಕವಿಲ್ಲದ ಚಂದ್ರನಂತೆ ಕಾಣುತಿದ್ದ ಆಕೆಯ ಮುಖವು,ವ್ಯಸನ ಸಂತಾಪದಿಂದ ವಿಶೇಷವಾಗಿ ಕಂಡಿ, ನೀರಿನಿಂದ ಕಿತ್ತುಹಾಕಿದ ತಾವರೆಹೂವಿ ನಂತೆ ಕಾಣುತಿತ್ತು. ಆಗ ರಾಮನು ವ್ಯಸನದಿಂದ ಪ್ರಜ್ಞೆ ತಪ್ಪಿದವಳಂತಿರು ವ ಆ ಸೀತೆಯನ್ನು ಎರಡುತೋಳುಗಳಿಂದಲೂ ಅಪ್ಪಿಕೊಂಡು, ಆಕೆಯನ್ನು ಸಮಾಧಾನಪಡಿಸುತ್ತಾ, ಎಲೆ ಡೇವಿ ! ನನ್ನನ್ನು ವ್ಯಸನದಲ್ಲಿರಿಸಿ ನನಗೆ