ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


"ಆ, ಶ್ರೀಮದ್ರಾಮಾಯಣವು [ಸರ್ಗ,೩೦, ಸ್ವರ ಸುಖವಾದರೂ ರುಚಿಸಲಾರದು. ಈ ಪ್ರಪಂಚದ ಸೃಷ್ಟಿಸಿತಿಸಂ ಹಾರಗಳಿಗೆಲ್ಲಕ್ಕೂ ಕಾರಣಭೂತನಾದ ಸಾಕ್ಷಾನ್ಮಹಾವಿಷ್ಣುವಿಗೆ ಹೇಗೋ ಹಾಗೆ ನನಗೆ ಭಯವೆಂಬುದೆಲ್ಲಿಯದು? ನಾನು ಯಾವಕಾಲಕ್ಕೂ ಎಲ್ಲಿಯೂ ಭಯಪಡತಕ್ಕವನಲ್ಲ. ಹೀಗೆ ನಿನ್ನನ್ನು ನಾನೂ ಅಗಲಿರಲಾರೆನಾದರೂ, ನಿರ್ಭಯನಾಗಿದ್ದರೂ, ಎಲ್ಲಿದ್ದರೂ ನಾನು ನಿನ್ನನ್ನು ಪೋಷಿಸಬಲ್ಲವನಾ ಗಿದ್ದರೂ, ಇದುವರೆಗೆ ಈ ನಿನ್ನ ಅಭಿಪ್ರಾಯಗಳೆಲ್ಲವೂ ನನಗೆ ಚೆನ್ನಾಗಿ ತಿಳಿಯದಿದ್ದುದರಿಂದ, ನಿನ್ನನ್ನು ಕಾಡಿಗೆ ಕರೆದುಕೊಂಡು ಹೋಗುವುದಕ್ಕೆ ನಾನು ಇಷ್ಟಪಡಲಿಲ್ಲ, ಎಲೆ ಮೈಥಿಲಿ! ಈಗ ನಿನಗೆ ನಿಜವಾದ ತತ್ವವನ್ನು ಹೇಳುವೆನು ಕೇಳು. ನೀನು ಈ ಲೋಕದಲ್ಲಿ ಸೃಷ್ಟಿಸಲ್ಪಟ್ಟಿರುವುದೇ ನ ನೊಡನೆ ವನವಾಸವನ್ನನುಭವಿಸುವುದಕ್ಕಾಗಿಯೇ ಹೊರತು ಬೇರೆಯಲ್ಲ, ಇದನ್ನು ನಾನೂ ಚೆನ್ನಾಗಿ ಬಲ್ಲೆನು.ಧೀರನಾದ ಪುರುಷನು ಎಷ್ಟೇ ಕಷ್ಟದಶಿ ಯಲ್ಲಿಯೂ,ತನ್ನ ಕೀರ್ತಿಯನ್ನು ಬಿಡದಿರುವಂತೆ, ನಿನ್ನನ್ನು ನಾನು ಎಂದಿಗೂ ಬಿಟ್ಟಿರಲಾರೆನು. ಸುವರ್ಚಲೆಯು ಸತ್ಯವನ್ನು ಹಿಂಬಾಲಿಸಿಯೇ ಇರುವ ಇಲ್ಲವೆ? ನಮ್ಮ ವಂಶಕ್ಕೆ ಮೂಲಪುರುಷನಾದ ಆ ಸೂರೈನ ಧವನ್ನೇ ಆಶ್ರ ಯಿಸಿ, ನಿನ್ನನ್ನು ಕರೆದುಕೊಂಡು ಹೋಗಬೇಕಾದುದೇ ನನಗೆಧರವು.ಹೇಗಾ ದರೂ ನಾನು ಕಾಡಿಗೆ ಹೋಗದೆ ನಿಲ್ಲುವುದಕ್ಕಿಲ್ಲ. ಈ ವಿಷಯದಲ್ಲಿ ತಂದೆ ಯಾಜ್ಞೆಯು ಮಾತ್ರವೇ ಅಲ್ಲ. ನಾನೂ ಅದನ್ನು ನಡೆಸುವುದಾಗಿನನ್ನ ಬಾಯಿಂ ದಲೇ ಸತ್ಯ ಮಾಡಿಕೊಟ್ಟಿರುವೆನು, ತಂದೆಯಾಜ್ಞೆ, ನನ್ನ ಪ್ರತಿಜ್ಞೆ, ಇವೆರಡೇ ನನ್ನನ್ನು ಕಾಡಿಗೆ ಎಳೆದುಕೊಂಡು ಹೋಗುತ್ತಿರುವುವು. ಆದುದರಿಂದ ಹೋ ಗದಿರುವುದಕ್ಕಿಲ್ಲ. ತಾಯಿತಂದೆಗಳ ವಿಷಯದಲ್ಲಿ ವಿಧೇಯನಾಗಿರಬೇಕೆಂಬುದೇ ಮನುಷ್ಯನ ಅನುಸರಿಸಬೇಕಾದಮೊದಲನೆಯದುವು.ಇದಕ್ಕಿಂತಲೂ ಮೇ ಲಾದ ಧರವಿಲ್ಲ. ಪಿತೃವಾಕ್ಯ ಪರಿಪಾಲನವೆಂಬ ವ್ರತಕ್ಕಾಗಿ ಬದರೀಕ್ಷನಾಗಿ ನಿಂತಿರುವ ನಾನೇ, ಆ ಧವನ್ನ ತಿಕ್ರಮಿಸಿಬಿಟ್ಟಮೇಲೆ, ಬದುಕಿರುವುದು ಹೇಗೆ? ಸಮಸ್ಯಪುರುಷಾರಗಳಿಗೂ ಸಾಧನವಾದ ದೇವತಾರಾಧನೆಗಿಂತಲೂ ತಂದೆತಾಯಿಗಳನ್ನು ಪೂಜಿಸುವುದರಲ್ಲಿ ವಿಶೇಷವೇನೆಂದು ನೀವು ಕೇಳಬಹು ದು.ತಂದೆ,ತಾಯಿ,ಗುರು, ಈ ಮೂವರೂ ಪ್ರತ್ಯಕ್ಷದೇವತೆಗಳೇಹೊರತು