ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೩೦] ಅಯೋಧ್ಯಾಕಾಂಡವು. ಬೇರೆಯಲ್ಲ. ಪ್ರತ್ಯಕ್ಷವಾಗಿ ನಮಗಾಜ್ಞೆಯನ್ನು ಕೊಟ್ಟು, ನಮ್ಮ ಆರಾಧನೆ ಗಳಿಗೆ ವಶ್ಯರಾಗಿರುವ ಇವರನ್ನು ಬಿಟ್ಟು, ನಮಗೆ ವಶ್ಯರಲ್ಲದ ಇತರ ದೇವತೆಗ ಇನ್ನು ಎಷ್ಟು ವಿಧದಲ್ಲಿ ಪೂಜಿಸಿದರೇನು ? ಇವರಿಗೆ ಶುಶೂಷೆಯನ್ನು ಮಾಡು ತಿದ್ದರೆ, ಮೂರುಲೋಕದಲ್ಲಿರುವ ದೇವತೆಗಳೆಲ್ಲರನ್ನೂ ಆರಾಧಿಸಿದಷ್ಟು ಫಲ ಮುಂಟು. ಇವರಂತೆ ಪವಿತ್ರವಾದ ದೈವವು ಬೇರೊಂದಿಲ್ಲ. ಎಲೆ ಸೀತೆ! ಪಿತೃ ಶುಕ್ರೂಷೆಯೆಂಬುದು ಎಷ್ಟು ಮಟ್ಟಿಗೆ ಪರಲೋಕಸಾಧನವಾಗಿರುವುದೋ, ಅಷ್ಟು ಮಟ್ಟಿಗೆ ಸತ್ಯವಾಗಲಿ, ದಾನಮಾನಗಳಾಗಲಿ, ಉಚಿತದಕ್ಷಿಣೆಯುಳ್ಳ ಯಾಗಗಳಾಗಲಿ ಪರಲೋಕಸಾಧಕಗಳಾಗಿರುವುದಿಲ್ಲ. ಸ್ವರ್ಗಗಳಾಗಲಿ, ಧನಧಾನ್ಯ ಸಮೃದ್ಧಿಯಾಗಲಿ,ವಿದ್ಯೆಗಳಾಗಲಿ, ಪುತ್ರಸಂತಾನವಾಗಲಿ, ಸೌಖ್ಯ ಗಳಾಗಲಿ, ಬೇರೆಯಾವ ವಿಧವಾದ ಕಾರೈಸಿದ್ಧಿಯಾಗಲಿ, ಕ್ರಮವಾಗಿ ನಡೆ ಸಿದ ಗುರುಶುಶೂಷೆಯೊಂದರಿಂದಲೇ ಲಭಿಸುವುವು. ಅದರಿಂದ ಸಾಧ್ಯ ವಾಗದುದೊಂದೂ ಇಲ್ಲವು; ತಾಯಿತಂದೆಗಳನ್ನು ಎಡೆಬಿಡದೆ ಭಕ್ತಿಯಿಂದ ಉಪಚರಿಸುತ್ತಿರುವ ಮಹಾತ್ಮರು, ದೇವಲೋಕವನ್ನೂ, ಗಂಧತ್ವಲೋಕನ ನ್ಯೂ,ಗೋಲೋಕವನ್ನೂ, ಇತರ ಪುಣ್ಯಲೋಕಗಳನ್ನೂ ಕ್ರಮವಾಗಿ ಹೊಂ ಹ, ಕೊನೆಗೆ ಬ್ರಹ್ಮಲೋಕವನ್ನೂ ಸೇರುವರು. ಇನ್ನು ಸ್ವತಂತ್ರನಾದ ತಂದೆಯು, ಸತ್ಯಧಗಳಿಗೆ ದೃಢವಾಗಿ ಕಟ್ಟುಬಿದ್ದು, ನನಗೆ ಆಜ್ಞೆಯನ್ನು ಮಾಡಿದಮೇಲೆ ಅದನ್ನು ನಾನು ನಡೆಸದಿರಬಹುದೆ ? ಪಿತೃವಾಕ್ಯ ಪರಿಪಾಲ ನವೆಂಬುದೇ ಸನಾತನಧಮ್ಮವು. ಎಲೆ ಸೀತೆ ! ಇದುವರೆಗೆ ನಿನ್ನ ದೃಢವಾ ದ ಅಭಿಪ್ರಾಯವು ನನಗೆ ತಿಳಿಯದುದರಿಂದ, ನಿನ್ನನ್ನು ನಾನು ದಂಡಕಾರ ಣ್ಯಕ್ಕೆ ಕರೆದುಕೊಂಡು ಹೋಗಬೇಕೆಂದು ನಿಶ್ಚಯಿಸಿರಲಿಲ್ಲ. ಈಗ ನಿನ್ನ ದೃಢಸಂಕಲ್ಪವು ನನಗೆ ಚೆನ್ನಾಗಿ ತಿಳಿಯಿತು. ಇನ್ನು ನಿನ್ನನ್ನು ನಾನು ಬಿಟ್ಟು ಹೋಗುವುದಿಲ್ಲ. ಸಂಗಡ ಕರದುಕೊಂಡೇ ಹೋಗುವೆನು. ನೀನು ಕಂದು ಕುಂದುಗಳೊಂದೂ ಇಲ್ಲದ ಬಹುಕೋಮಲವಾದ ದೇಹವುಳ್ಳವಳು. ಲೋಕಮೋಹಕವಾದ ಕಣ್ಣುಗಳುಳ್ಳವಳು. ಸ್ವಭಾವದಿಂದಲೇ ಭಯಶೀಲೆ ಯಾದವಳು. ಹೀಗಿದ್ದರೂ ಕಾಡಿನಲ್ಲುಂಟಾಗಬಹುದಾದ ದೇಹಶ್ರಮವ ನ್ಯೂ ಲಕ್ಷ್ಯಮಾಡದೆ, ಅಲ್ಲಿ ಸಂಭವಿಸಬಹುದಾದ ಮಹಾಭಯಗಳನ್ನೂ