ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಯಯವು - [ಸಗ. ೩೧ ಎಣಿಸದೆ ನನ್ನೊಡನೆ ಬರುವೆನೆಂದು ಕೇಳುವೆಯಲ್ಲವೆ ? ನಿನ್ನ ಈಪಾತಿ ವ್ಯತ್ಯಸಂಕಲ್ಪವು ಯಾರಿಗೆ ತಾನೇ ಅಕ್ಷರವನ್ನುಂಟುಮಾಡದು ? ನೀನು ನನಗೆ ಸಹಧಮ್ಮ ಚಾರಿಣಿಯಾಗಿದ್ದುಕೊಂಡಿರುವುದಕ್ಕೆ ತಡೆಯೇನಿರುವುದು? ಎಲೆಸೀತೆ! ನಿನಗೆ ಈ ದೃಢಸಂಕಲ್ಪವುಂಟಾಗಿರುವುದು ನಮ್ಮಿಬ್ಬರ ವಂಶಕ್ಕೂ ಅನುಗುಣವಾಗಿಯೇ ಇರುವುದು. ಈ ನಿನ್ನ ವ್ಯವಸಾಯವು ಬಹಳ ಶ್ರೇಯ ಸ್ವರವೆಂಬುದರಲ್ಲಿ ಸಂದೇಹವಿಲ್ಲ. ಇನ್ನು ನೀನು ವನಪ್ರಯಾಣಕ್ಕೆ ಬೇಕಾದ ಸನ್ನಾಹಗಳನ್ನು ಸಿದ್ಧಪಡಿಸಿಕೊಳ್ಳುವಳಾಗು. ನೀನಿಲ್ಲದೆ ನನಗೆ ಸ್ವರ ಲೋಕವಾದರೂ ರುಚಿಸದು. ಪ್ರಯಾಣಕಾಲದಲ್ಲಿ ಬ್ರಾಹ್ಮಣರಿಗೆ ರತ್ನ ಗಳನ್ನು ದಾನ ಮಾಡಿ, ಭಿಕ್ಷುಕರಿಗೆ ಭೋಜನವನ್ನು ಮಾಡಿಸು ; ಯಾರು ಯಾರು ಬೇರೆ ಯಾವಯಾವ ವಸ್ತುಗಳನ್ನು ಕೇಳುವರೋ, ಅವುಗಳೆಲ್ಲವನ್ನೂ ಕೊಡು! ಸಾವಕಾಶ ಮಾಡಬೇಡ : ತ್ವರೆಮಾಡು ! ಬ್ರಾಹ್ಮಣರಿಗೆ ದಾನಮಾ ಡಿದಮೇಲೆ ಅಮೂಲ್ಯಗಳಾದ ಆಭರಣಗಳಾಗಲಿ, ವಸ್ತಗಳಾಗಲಿ, ಕ್ರೀಡಾರ್ಥ ವಾದ ಇತರ ಸಾಮಗ್ರಿಗಳಾಗಲಿ, ಹಾಸಿಗೆಗಳಾಗಲಿ, ವಾಹನಗಳಾಗಲಿ ನಾ ವಿಬ್ಬರೂ ಉಪಯೋಗಿಸಿಕೊಳ್ಳುತಿದ್ದ ಯಾವಯಾವ ವಸ್ತುಗಳುಂಟೋ ಅವೆಲ್ಲವನ್ನೂ ನಮ್ಮಲ್ಲಿ ಕೆಲಸಮಾಡುತಿದ್ದ ನೃತ್ಯವರ್ಗಕ್ಕೆ ಹಂಚಿಬಿಡು” ಎಂದನು. ರಾಮನು ತನಗೆ ವನವಾಸಪ್ರಯಾಣವನ್ನು ಅನುಮತಿಸಿದೊಡ ನೆಯೇ, ಸೀತೆಯು ಪಿತಿಮೀರಿದ ಸಂತೋಷವನ್ನು ಹೊಂದಿ, ಆಗಲೇ ಧಾನ ಕಾರಗಳನ್ನೂ ಆರಂಭಿಸಿದಳು. ಮಹಾಯಶಸ್ವಿನಿಯಾದ ಆ ಸೀತಾದೇವಿಯು, ತನ್ನ ಪತಿಯ ಮಾತನ್ನು ಕೇಳಿ ಸಂತೋಷಗೊಂಡು, ನಿಶ್ಚಿಂತಳಾಗಿ, ಧನ್ಮಜ್ಞ ರಾದ ಅನೇಕ ಬ್ರಾಹ್ಮಣರನ್ನು ಕರೆಸಿ, ಧನಧಾನ್ಯಸುವರ್ಣಾದಿಗಳೆಲ್ಲವನ್ನೂ ಕ್ರಮವಾಗಿ ದಾನಮಾಡತೊಡಗಿದಳು. ಇಲ್ಲಿಗೆ ಮೂವತ್ತನೆಯ ಸರ್ಗವು. ಈ ಹೇಳಿದುದು. ಒ ರಾಮನು ಲಕ್ಷ್ಮಣನನ್ನು ಕಾಡಿಗೆ ಬರಬೇಡವೆಂದು } ಲಕ್ಷಣನು ಕೌಸಲ್ಯಯ ಆರಮನೆಯಿಂದ ರಾಮನೊಡನೆಯೇ ಹೊ ಕದುಬಂದು, ಸೀತೆಗೂ ರಾಮನಿಗೂ ನಡೆದ ಸಂವಾದಗಳೆಲ್ಲವನ್ನೂ ಕೇಳು