ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೯೮ ಶ್ರೀಮದ್ರಾಮಾಯಕರು : [ಸರ್ಗ, 40 ನನಗೆ ಅನುಜ್ಞೆಯನ್ನು ಕೊಟ್ಟಿರುವೆಯಲ್ಲವೆ ? ಈಗ ನನ್ನನ್ನು ತಡೆಯುವ ದಕ್ಕೆ ಕಾರಣವೇನು ? ಹೀಗೆ ನನ್ನನ್ನು ತಡೆಯಬೇಕಾದರೆ, ನಾನು ನಿನ್ನಲ್ಲಿ ಯಾವ ಅಪರಾಧವನ್ನು ಮಾಡಿರುವೆನೋ ಎಂದು ನನಗೆ ಸಂದೇಹವುಂಟಾ ಗಿರುವದು.” ಎಂದನು. ಇದನ್ನು ಕೇಳಿ ಮಹಾತೇಜಸ್ವಿಯಾದ ರಾಮನು, ತನಗಿಂತಲೂ ಮುಂದಾಗಿಯೇ ವನಪ್ರಯಾಣಕ್ಕೆ ಸಿದ್ಧನಾಗಿ ಬಹುದೈನ್ಯ ದಿಂದ ಕಯ್ಯನ್ನು ಜೋಡಿಸಿ ಬಾರಿಬಾರಿಗೂ ಯಾಚಿಸುತ್ತ ಮುಂದೆ ನಿಂತಿ ರುವ ಲಕ್ಷಣವನ್ನು ನೋಡಿ, 14 ವತ್ಸ ಲಕ್ಷಣ! ನಿನಗೇನೋ ನನ್ನಲ್ಲಿ ಸಂ ಪೂರವಾದ ಪ್ರೀತಿಯಿರುವುದು! ಧರದಲ್ಲಿಯೇ ಸ್ಥಿರಬುದ್ಧಿಯುಳ್ಳವನಾಗಿ ರುವೆ! ಮಹಾವೀರನೆನಿಸಿಕೊಂಡಿರುವೆ ! ಸನ್ನಾರವನ್ನು ಬಿಟ್ಟು ಎಂದಿಗೂ ಚಲಿಸತಕ್ಕವನಲ್ಲ. ನನಗೆ ಪ್ರಾಣಸಮಾನನಾಗಿಯೇ ಇರುವೆ. ನನ್ನ ಆಜ್ಞೆ ಯನ್ನು ಎಂದಿಗೂ ಮೀರತಕ್ಕವನಲ್ಲ. ಒಡಹುಟ್ಟಿದವನಲ್ಲದೆ ಮಿತ್ರನಂ ತೆಯೂ ಇರುವೆ ! ನಾನು ನಿನಗೆ ಹೇಳಬೇಕಾದುದೇನೂ ಇಲ್ಲ. ಆದ ರೂ ಈಗ ಒಂದೆರಡುವಿಷಯಗಳನ್ನು ತಿಳಿಸುವೆನು. ಒಂದುವೇಳೆ ನೀನು ನನ್ನೊಡನೆ ಕಾಡಿಗೆ ಬಂದು ಬಿಟ್ಟರೆ, ನಮ್ಮ ಮಾತೆಯರಾದ ಕೌಸಲ್ಯಾಸುವಿತ್ರಿಯರನ್ನು ಇಲ್ಲಿ ಘೋಷಿಸತಕ್ಕವರಾರು ? ಇದಕ್ಕಾಗಿಯೇ ನಾನು ನಿನ್ನನ್ನು ಇಲ್ಲಿರಬೇಕೆಂದು ಹೇಳಬೇಕಾಯಿತು. ಹಿಂದೆ ನಾನು ನಿನಗೆ ಅನುಮತಿಯನ್ನು ಕೊಟ್ಟಿದ್ದರೂ, ಅದು ತಾತ್ಕಾಲಿಕವಾದ ಸಮಾಧಾನ ಳು ಯಾವುವುಂಟೋ ಅವೆಲ್ಲವನ್ನೂ ತೆಗೆದುಬಿಟ್ಟು, ಹಾನಿಬಾರದ ಕಾರಕ್ಕೆ ಪ್ರಯ ಕು” ಎಂದು ಹೇಳಿರುವುದರಿಂದ, ಅನುಮತಿಯು ಸೂಚಿತವಾಗುವುದು. ಹಾಗೆ ಯೇ ಮತuಂದು ಕಡೆಯಲ್ಲಿ, ತಸ್ಮಾದಪರಿತಾರ್ಪ ತಮನುವಿಧಾಯ ಮಾol ಪ್ರತಿಸಂಹಾರಯ ಪ್ರಮಾಭಿಷೇಚನಿಕೀ:ಕ್ರಿಯಾen.” “ನೀನು ವ್ಯಸನವನ್ನು ಬಿಟ್ಟು ನನ್ನನ್ನೇ ಅನುವರ್ತಿಸು” ಎಂದು ಹೇಳಿರುವರು, ಇನ್ನೊಂದು ಕಡೆಯಲ್ಲಿ ರಾಮನು ಸೀತಗೆ ಬುದ್ದಿವಾದಗಳನ್ನು ಹೇಳುವಾಗ, ಭ್ರಾತೃಪತ್ರಸಮ್ ಚಾಪಿ ದ್ರಹ್ಮಚ ವಿಶೇಷತ: | ತ್ವಯಾ ಭರತಶಶುಕಿ ಪ್ರಾಸ್ಯೆ:ಪ್ರಿಯತರಾ ಮಮ?” ಭರತ ತುಕ್ಕರನ್ನೇ ಅನುವರ್ತಿಸುತ್ತಿರು” ಎಂದು ಹೇಳಿರುವನೇ ಹೊರತು ಲಕ್ಷಕನನ್ನು ಅನುಸರಿಸುವಂತೆ ಹೇಳಲಿಲ್ಲ. ಆದುದರಿಂದ ಲಕ್ಷವನು ಇಲ್ಲಿ ನಿಲ್ಲಲಾರನೆಂದು ಇದು ಆನ ಆಗಮನಕ್ಕೆ ತನ್ನ ಅನುಮತಿಯನ್ನು ಸೂಚಿಸಿರುವನೆಂದೇ ತಿಳಿಯಬೇಕು. ಈ