ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ. ೩೧.] ಅಯೋಧ್ಯಾಕಾಂಡವು. ಈO ಡಗೂಡಿ ನೀನು ನಿಶ್ಚಿಂತನಾಗಿ ವಿಹರಿಸುತ್ತಿರಬಹುದು ! ನೀನು ಎಚ್ಚರದಿಂ ದಿದ್ದರೂ, ಮಲಗಿದ್ದರೂ, ನಿನಗೆ ಬೇಕಾದುದನ್ನೆಲ್ಲಾ ನಾನೇ ನಡೆಸುವೆನು” ಎಂದನು. ಈಮಾತನ್ನು ಕೇಳಿ ರಾಮನಿಗೆ ಬಹಳ ಸಂತೋಷವುಂಟಾಯಿತು. ಆಗ ಲಕ್ಷಣವನ್ನು ಕುರಿತು ವತ್ಸಲಕ್ಷಣಾ!ಸರಿ!ಹಾಗೆಯೇ ಆಗಲಿ!ನೀನು ಹೋಗು! ನಿನ್ನ ಮಿತ್ರರೆಲ್ಲರನ್ನೂ ನೋಡಿ ಅವರ ಅನುಮತಿಯನ್ನು ಪಡೆದು ಬಾ! ಮಹಾತ್ಮನಾದ ವರುಣನು, ಪೂತ್ವದಲ್ಲಿ ಜನಕರಾಜನಿಗೆ, ಯಜ್ಞಕಾಲ ದಲ್ಲಿ ರೌದ್ರಾಕಾರವುಳ್ಳ ಯಾವ ಹವ್ಯಧನುಸ್ಸುಗಳನ್ನು ತಾನಾಗಿ ಅನು ಗ್ರಹಿಸಿ ಕೊಟ್ಟನೋ, ಆ ಎರಡು ಧನುಸ್ಸುಗಳನ್ನೂ, ಶತ್ರುಗಳಿಂದ ಭೇದಿ ಸುವುದಕ್ಕೆ ಸಾಧ್ಯವಾದ ಎರಡು ದಿವ್ಯಕವಚಗಳನ್ನೂ , ಅಕ್ಷಯಬಾಣಗ ಲ್ಯಾವಸ್ಥೆಗಳಲ್ಲಿಯೂ, ಸರಏಧ ಕೈಂಕಯ್ಯಗಳನ್ನೂ ನಡೆಸುತ್ತಿರಬೇಕಾದುದೇ ಶೇಷ ಭೂತನಾದವನಿಗೆ ಮುಖ್ಯಧರವೆಂದು ಫಲಿತಾರವು ಸೂಚಿತವಾಗುವುದು (ಜಾಗ್ರತಃ) ಎಂಬುದರಿಂದ ಬೆಳಗ್ಗೆ ಹಾಸಿಗೆಯಿಂದೆದ್ದ ಕೂಡಲೇ ದಂತಕಾಷ್ಟಗಳನ್ನು ತಂದಿಡುವು ದು ಮೊದಲುಗೊಂಡು ಹಾಸಿಗೆಯನ್ನು ಸಿದ್ಧ ಪಡಿಸುವವರೆಗೆ ಮಾಡಬೇಕಾದ ಕೆಲಸಗಳ ನ್ನು ಮಾಡಿ, ರಾತ್ರಿಯಲ್ಲಿ ನಿದ್ರಿಸುವಾಗ ದುಷ್ಕಮೃಗಗಳೂ, ರಾಕ್ಷಸರೂ ಬಂದು ಬಾಧಿಸದಂತೆ ಬೆಳಗಾಗುವವರೆಗೂ.ಧನುರ್ಧಾರಿಯಾಗಿ ಕಾವಲಿರುವೆನೆಂದು ಭಾವವು.

  • ವರುಣನು ಬಿಲ್ಲು, ಮೊದಲಾದುವುಗಳನ್ನು ತಮ್ಮಿಬ್ಬರಿಗೂ ಒಂದೊಂದುಭಿ ಸುವಂತೆ ಕೊಟ್ಟಿರುವುದಾಗಿ ಇಲ್ಲಿ ಹೇಳಲ ಟ್ರೆದೆ. ಜನಕನ ಯಜ ದಲ್ಲಿ ಹೀಗೆ ಎರಡಾ ಯುಧಗಳು ಕೊಡಲ್ಪಟ್ಟದಾಗಿ ಹಿಂದೆ ವ್ಯಕ್ತವಾಗಿಲ್ಲ. ಇಲ್ಲಿ ಮಾತ್ರ ಅದನ್ನು ಪ್ರಸ್ತಾ ನಿಸುವುದಕ್ಕೆ ಕಾರಣವೇನೆಂದು ಶಂಕೆಯುಂಟಾಗಬಹುದು, ಆಗಾಗ ವಾಲ್ಮೀಕಿ ಮಹ ರ್ಪಯು ಒಂದುಕಡೆಯಲ್ಲಿ ಹೇಳಬೇಕಾದ ಅಂಶವನ್ನು ಮತ್ತೊಂದು ಕಡೆಯಲ್ಲಿ ಹೇ ೪ ತಿಳಿಸುವ ಪದ್ದತಿಯುಂಟು, ಇದಕ್ಕೆ ಬೇರೆ ಕೆಲವು ನಿದರ್ಶನಗಳೂ ಉಂಟು. ಏನೆಂದ ರೆ, “ಎಲಕಾಂಡದಲ್ಲಿ ಸೀತಾವಿವಾಹಘಟ್ಟದಲ್ಲಿ ಹೇಳಬೇಕಾದ ಮಣಿಬಂಧನದ ವ್ಯ ತಾಂತವನ್ನು ಅಲ್ಲಿ ಹೇಳದೆ, ಸುಂದರಕಾಂಡದಲ್ಲಿ ಹೇಳಿರುವರು. ಅದರಂತೆಯೇ ಅಯೋಧ್ಯಾಕಾಂಡದಲ್ಲಿ ತಿಳಿಸಬೇಕಾದ ಕಾಕಾಸುರವೃತ್ತಾಂತವಿಷಯಕವಾದ ಕೆಲವು ಅಂಶಗಳನ್ನು (ಸಪಿತ್ರಾಚ ಪರಿತ್ಯಕ್ತ) ಇತ್ಯಾದಿವಾಕ್ಯಗಳಿಂದ ಸುಂದರಕಾಂಡದಲ್ಲಿ ವಿವರಿಸಿರುವರು- ಹೀಗೆಯೇ, ಇನ್ನೂ ಕೆಲವು ಕಡೆಗಳಲ್ಲಿ, ಹೇಳಬೇಕಾದ ವಿಷಯಗಳ ನ್ನು ಅಲ್ಲಿ ಹೇಳದೆ, ಮತ್ತೊಂದು ಕಡೆಯಲ್ಲಿ ಯಾವುದೋ ಒಂದು ವ್ಯಾಜದಿಂದ ಅದೇ ಪ್ರಸ್ತಾವವನ್ನಾರಂಭಿಸಿ ಹೇಳಿರುವರು. *