ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


39Y ಶ್ರೀಮದ್ರಾಮಾಯಣವು (ಸರ್ಗ, ೩೧ ಳುಳ್ಳ ಎರಡು ಬತ್ತಳಿಕೆಗಳನ್ನೂ, ಚಿನ್ನದ ಹಿಡಿಗಳಿಂದ ಕೂಡಿ ಸೂರ ನಂತೆ ಜ್ವಲಿಸುತ್ತಿರುವ ಎರಡುಕತ್ತಿಗಳನ್ನೂ ತೆಗೆದುಕೊಂಡು ಬಾ ! ಇ ವೆಲ್ಲವನ್ನೂ ನಾನು ಗಂಧಪಟ್ಟಾದಿಗಳಿಂದ ಪೂಜಿಸಿ, ನಮ್ಮ ಕುಲಗುರುವಾ ದ ವಸಿಷನ ಮನೆಯಲ್ಲಿರಿಸಿರುವೆನು. ನೀನು ಮೊದಲು ನಿನ್ನ ಮಿತ್ರವರ್ಗ ವನ್ನು ನೋಡಿ ಬಂದು, ಆಮೇಲೆ ಆ ಆಯುಧಗಳನ್ನು ಬೇಗನೆ ತೆಗೆದುಕೊಂ ಡುಬಾ!” ಎಂದನು, ಇದನ್ನು ಕೇಳಿ ಲಕ್ಷಣನು ಬಹಳ ಸಂತೋಷವುಳ್ಳ ವನಾಗಿ, ವನಪ್ರಯಾಣಕ್ಕೆ ನಿಶ್ಚಯಿಸಿಕೊಂಡು, ತನ್ನ ಮಿತ್ರರೆಲ್ಲರಿಗೂ ಈ ವಿಷಯವನ್ನು ತಿಳಿಸಿ, ಅವರ ಅನುಮತಿಯನ್ನೂ ಪಡೆದು, ಅಲ್ಲಿಂದ ಕಾಲ ಗುರುವಾದ ವಸಿಷ್ಠನ ಮನೆಗೆ ಹೋಗಿ, ಅಲ್ಲಿದ್ದ ದಿವ್ಯಾಯುಧಗಳೆಲ್ಲವನ್ನೂ ತಂದನು. ರಾಜಶ್ರೇಷ್ಠನಾದ ರಾಮನಿಂದ ಪೂಜಿಸಲ್ಪಟ್ಟು, ಗಂಧಪುಷ್ಟಾಗಿ ಗಳಿಂದಲಂಕೃತವಾದ ಆ ದಿವ್ಯಾಯುಧಗಳೆಲ್ಲವನ್ನೂ ರಾಮನ ಮುಂದೆತಂ ಹಿಟ್ಟನು. ಇವುಗಳನ್ನು ನೋಡಿ ರಾಮನು ಬಹಳ ಸಂತೋಷಗೊಂಡವನಾಗಿ, «« ಎಲೆವನೆ ! ನಾನು ಬೇರೊಂದು ಕಾವ್ಯಕ್ಕಾಗಿ ನಿನ್ನನ್ನೇ ಇಡಿರುನೋಡು ತಿದ್ದನು. ಸೀನು ಸಕಾಲಕ್ಕೆ ಬಂದು ಸೇರಿದೆ ! ಇನ್ನು ಮೇಲೆ ವನಪ್ರಯಾಣ ಮೊದಲು ನಾವಿಬ್ಬರೂ ಸೇರಿ ನಡೆಸಬೇಕಾದ ಮುಖ್ಯಕಾವೊಂ ದುಂಟು! ನಮ್ಮಲ್ಲಿರತಕ್ಕ ವಸ್ತ್ರಾಭರಣಗಳೇ ಮೊದಲಾದ ಧನವೆಲ್ಲವನ್ನೂ ತಪಸ್ವಿಗಳಾದ ಬ್ರಾಹ್ಮಣರಿಗೆ ದಾನಮಾಡಿಡಬೇಕಾಗಿರುವುದು. ಇಲ್ಲಿ ವಿಶೇಷವಾದ ಗುರುಭಕ್ತಿಯುಳ್ಳ ಆನೆಕಬ್ರಾಹ್ಮಣೋತ್ತಮರಿರುವರು. ನಮ್ಮನ್ನೇ ನಂಬಿಕೊಂಡು ಬದುಕುತ್ತಿರುವವರೂ ಅನೇಕರಿರುವರು. ಅವರೆ ಆರಿಗೆ ಮನಸ್ಯಪ್ತಿಯಾಗುವಂತೆ ವಿಶೇಷವಾಗಿ ವಾನಮಾಡುವುದಕ್ಕೆ ಇ ದೇ ತಕ್ಕ ಸಮಯವು.ಆದುದರಿಂದ ನೀನು ಈಗಲೇ ಹೋಗಿ,ವಸಿಷ್ಠಪುತ್ರನಾ ಗಿ,ಬ್ರಾಹ್ಮಣಶ್ರೇಷ್ಠನೆನಿಸಿಕೊಂಡಿರುವ ಪೂಜ್ಯನಾದ ಸುಯಜ್ಞವನ್ನು ಬೇಗ ಧೆ ಇಲ್ಲಿಗೆ ಕರೆದುಕೊಂಡುಬಾ! ಆತನನ್ನೂ ಮತ್ತು ಶಿಷ್ಯರಾದ ಇತರಬ್ರಾಹ್ಮ ಹೋತ್ತಮರೆಲ್ಲರನ್ನೂ ಚೆನ್ನಾಗಿ ಪೂಜಿಸಿ, ಆಮೇಲೆ ನಾವು ಕಾಡಿಗೆ ಹೊರ ಡುವೆವು” ಎಂದನು, ಇಲ್ಲಿಗೆ ಮೂವತ್ತೊಂದನೆಯ ಸರ್ಗವು,