ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೦೮ ಶ್ರೀಮದ್ರಾಮಾಯಣವು [ಸರ್ಗ, ೩೨. ರಬೇಕು ” ಎಂದನು. ದುಃಖಿತರಾದ ಅವರನ್ನು ಸಮಾಧಾನಪಡಿಸಿ, ಆಮೇಲೆ ತನ್ನ ಅರಮನೆಯ ಧನಾಧ್ಯಕ್ಷನನ್ನು ನೋಡಿ, ತನ್ನ ಬೊಕ್ಕಸದಿಂ ದ ಧನವನ್ನು ತರುವಂತೆ ಆಜ್ಞಾಪಿಸಿದನು. ಆಗ ಅಲ್ಲಿದ್ದ ರಾಮನ ಅನುಚರ ರೆಲ್ಲರೂ, ಆ ಧನಾಧ್ಯಕ್ಷನೊಡನೆ ರಾಮನ ಭಂಡಾರಕ್ಕೆ ಹೋಗಿ, ಅಲ್ಲಿದ್ದ ಧನ ರಾಶಿಯೆಲ್ಲವನ್ನೂ ಹೊತ್ತು ತಂದು, ರಾಮನ ಮುಂದುಗಡೆಯಲ್ಲಿಟ್ಟರು. ಅಲ್ಲಿ ಅಪರಿಮಿತವಾಗಿ ರಾಶಿಹಾಕಿದ್ದ ಧನವು ನೋಡುವವರಿಗೆ ಅತ್ಯಾ ರವ ನ್ನು ಂಟುಮಾಡುತಿತ್ತು. ಪರುಷಶ್ರೇಷ್ಠನಾದ ರಾಮನು ಲಕ್ಷಣನೊಡ ಗೂಡಿ ಅವೆಲ್ಲವನ್ನೂ ಅಲ್ಲಿದ್ದ ಬ್ರಾಹ್ಮಣರಲ್ಲಿ ಆಬಾಲವೃದ್ಧರಿಗೆ ಹಂಚಿಕೊ ಟೈನು, ಆ ಬ್ರಾಹ್ಮಣರ ನಡುವೆ ಗರ್ಗಮಹಾಋಷಿಯ ವಂಶದಲ್ಲಿ ಹುಟ್ಟಿದ ತ್ರಿಜಟನೆಂಬ ಒಬ್ಬ ಬ್ರಾಹ್ಮಣನಿದ್ದನು.ದಾರಿದ್ರ,ದಶೆಯಿಂದ ಆತನ ಮಯ್ಯ ಲವೂ ರಕ್ತಬಲವಿಲ್ಲದೆ ಗೋರೋಚನದಂತೆ ಪಿಂಗಳವರ್ಣವಾಗಿತ್ತು. ಆತನು ಯಾವಾಗಲೂ ಕಾಡಿನಲ್ಲಿ ಧಾನ್ಯಗಳನ್ನು ಆಯ್ದು ತಿಂದು ಜೀವಿಸುತ್ತಿದ್ದನು. ಮತ್ತು, ಕೊಡಲಿ, ಗುದ್ದಲಿ, ನೇಗಿಲು, ಕಲ್ಲಿ, ಮೊದಲಾದ ಆಯುಧಗಳನ್ನು ಧರಿಸಿ, ಕಾಡಿನಲ್ಲಿ ತಿರುಗುತ್ತಾ,ಗಡ್ಡೆಗೆಣಸುಗಳನ್ನೂ,ಹಣ್ಣುಗಳನ್ನೂ ಸಂಗ್ರ ಹಿಸಿ ತರುತಿದ್ದನು. ಆತನು ಬಹಳವೃದ್ಧನು. ಅವನ ಹೆಂಡತಿಯಾದರೋಎಳೆ ವಯಸ್ಸಿನವಳು. ದಾರಿಡ್ಯದಿಂದ ಸಂಕಟಪಡುತಿದ್ದ ಆಕೆಯು ತನ್ನ ಎಳ ಯಮಕ್ಕಳನ್ನು ಭರಿಸಲಾರದೆ, ವೃದ್ಯನಾದ ತನ್ನ ಪತಿಯನ್ನು ನೋಡಿ (ಆರನೆ ! ನಮ್ಮ ಈ ವಾರಿದ್ರದಶೆಯು ಎಂದಿಗೆ ತೀರುವುದೋ ಕಾಣೆ ನು, ನೀನು ಈಗ ಹಿಡಿದಿರುವ ಈ ಗುದ್ದಲಿನೇಗಿಲುಗಳಿಂದಲೇ ನಮ್ಮ ಕ ಇವು ತೀರದು” ಈಗ ನಾನೊಂದುಪಾಯವನ್ನು ಹೇಳುವೆನು ಕೇಳು. ಇದ ರಿಂದ ನಮಗೆ ಕ್ಷೇಮವುಂಟು ( ಈಗ ರಾಮನು ಬ್ರಾಹ್ಮಣರಿಗೆ ಅನೇಕವಾಗಿ ವೃಕ್ಷಿಣೆಯನ್ನು ಕೊಡುತ್ತಿರುವನು. ಈ ಸಮಯದಲ್ಲಿ ನಾವೂ ಈ ಮಕ್ಕಳ ನ್ನು ಕಟ್ಟಿಕೊಂಡು ಅವನ ಬಳಿಗೆ ಹೋದರೆ, ನಮಗೂ ಏನಾದರೂ ಸಿಕ್ಕಬ ಹುದು” ಎಂದಳು. ಹೆಂಡತಿಯ ಈ ಮಾತನ್ನು ಕೇಳಿದೊಡನೆಯೇ ಆ ಬ್ರಾಹ ಪು ಅದಕ್ಕೊಪ್ಪಿ, ಅರಮನೆಗೆ ಉಟ್ಟುಕೊಂಡು ಹೋಗುವುದಕ್ಕೆ ನೋಗ್ಯವಾದ ಬಟ್ಟೆಗೂ ತನಗೆ ಗತಿಯಿಲ್ಲದುದರಿಂದ, ಮನೆಯಲ್ಲಿ