ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೬೨] ಅಯೋಧ್ಯಾಕಾಂಡವು. of ಶತಚ್ಛಿದ್ರವಾಗಿ ಬಿದ್ದಿದ್ದ ಒಂದು ಹರಕುಬಟ್ಟೆಯನ್ನೇ ಸುತ್ತಿಕೊಂಡು ರಾಮನ ಅರಮನೆಯನ್ನು ಕುರಿತು ಹೊರಟನು. ಆತನು ಎಷ್ಟು ದರಿದ್ರನಾ ದರೇನು! ಆತನ ಮುಖದಲ್ಲಿ ಬ್ರಹ್ಮ ವರ್ಚಸ್ಸಾದರೋ ಅಗ್ನಿ ಯಂತೆ ಜ್ವಲಿ. ಸುತ್ತಿತ್ತು! ಆ ಜನಸಮೂಹದಲ್ಲಿ ಅವನು ನಿಂತಿದ್ದಾಗ ಬೃಗುಮಹರ್ಷಿಯಂ ತೆಯೂ, ಅಂಗಿರಸ್ಸಿನಂತೆಯೂ ಕಾಣುತಿದ್ದನು. ಆತನ ತೇಜಸ್ಸನ್ನು ನೋಡಿ ಹೆದರಿ, ದ್ವಾರಪಾಲಕರೊಬ್ಬರಾದರೂ ಅವನನ್ನು ತಡೆಯಲಿಲ್ಲ. ಹಾಗೆಯೇ ಅವನು ತಡೆಯಿಲ್ಲದೆ ಆ ಅರಮನೆಯ ಐದುತೊಟ್ಟಿಗಳನ್ನೂ ದಾಟಿ,ರಾಮನಿದ್ದ ಸ್ಥಳಕ್ಕೆ ಬಂದು, ಆತನನ್ನು ನೋಡಿ ಎಲೆ ರಾಜಕುಮಾರನೆ! ನೀನು ಮಹಾ ಯಶಸ್ವಿಯು. ನಾನಾದರೋ ಬಹಳ ದರಿದ್ರನು. ನಾನೊಂದು ದೊಡ್ಡ ಕುಟುಂಬವನ್ನು ರಕ್ಷಿಸಬೇಕಾಗಿರುವುದು ! ನನಗೆ ಬಹುಮಂದಿ ಮಕ್ಕಳಿರು ವರು. ಕಾಡಿನಲ್ಲಿ ಧಾನ್ಯದ ಕಾಳುಗಳನ್ನು ಆಯ್ದು ತಂದು ಜೀವಿಸುತ್ತಿರವೆನು. ನೀನು ನನ್ನನ್ನು ಕಟಾಕ್ಷೆಸಬೇಕು” ಎಂದನು. ಇದನ್ನು ಕೇಳಿ ರಾಮನು. ಆತನನ್ನು ನೋಡಿ ನಗುತ್ತಾ, ವಿನೋದಕ್ಕಾಗಿ ಎಲೈ ಬ್ರಾಹ್ಮಣೋತ್ರ ಮನೆ! ಇದೋ! ನನ್ನಲ್ಲಿ ಅನೇಕಸಹಸ್ರಗೋವುಗಳಿರುವುವು. ನಿನಗೆ ಇದ. ರಲ್ಲಿ ಒಂದೆರೆಡುಸಾವಿರ ಗೋವುಗಳನ್ನು ಕೊಟ್ಟರೂ ಸಾಲದೆಂದು ನನಗೆ ತೋರಿರುವುದು. ಅದಕ್ಕಾಗಿ ಈಗ ನೀನೊಂದುಕೆಲಸವನ್ನು ಮಾಡು! ಇದೋ! ಈ ದಂಡವನ್ನು ಕೈಗೆ ತೆಗೆದುಕೊಂಡು ನಿನ್ನ ಶಕ್ತಿಯಿರುವವರೆಗೂ ದೂರ ಕೈ ಬಿಸುಡುನನ್ನಲ್ಲಿರುವ ಈ ಗೋವುಗಳೆಲ್ಲವನ್ನೂ ಸಾಲಾಗಿ ನಿಲ್ಲಿಸಿಡುವೆನು. ನೀನು ಬಿಸುಡುವ ಆದಂಡವು ಎಷ್ಟು ದೂರಕ್ಕೆ ಹೋಗಿ ಬೀಳುವುದೋ,ಅಮ್ಮ ಗಲದಲ್ಲಿರುವ ಗೋವುಗಳೆಲ್ಲವನ್ನೂ ನೀನೇ ತೆಗೆದುಕೊಳ್ಳಬಹುದು”ಎಂದನು. ಆ ಬ್ರಾಹ್ಮಣನು ಬಹುಸಂಭ್ರಮದಿಂದ ದಟ್ಟಿಯನ್ನು ಕಟ್ಟಿ, ಆ ದಂಡವನ್ನು ತೆಗೆದುಕೊಂಡು ಗಿರನೆ ತಿರುಗಿಸಿ, ತನ್ನ ಶಕ್ತಿಯನ್ನು ಮೀರಿ ಎಸೆದನು. ಆತನ ಬ್ರಹ್ಮಬಲದ ಅತಿಶಯವನ್ನೇನೆಂದು ಹೇಳಲಿ! ಅವನು ಬೀಸಿದ ದಂಡವು ಸರ ಯೂನದಿಯನ್ನೂ ದಾಟಿ, ಅನೇಕಆಹಸ್ರಗೋವುಗಳಿಂದಾಚೆಗೆ, ಎತ್ತುಗಳನ್ನು ನಿಲ್ಲಿಸಿದ್ದ ಪ್ರದೇಶದಲ್ಲಿ ಬಿತ್ತು. ಧಾತ್ಮನಾದ ರಾಮನು ಬಹಳಸಂತೋಷಿ ಸಿ,ಆ ತ್ರಿಜಟನನ್ನು ಅಪ್ಪಿಕೊಂಡು, ಸರಯೂನದೀತೀರದಲ್ಲಿ ಆತನ ದಂಡವು