ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫no ಶ್ರೀಮದ್ರಾಮಾಯಣವು (ಸರ್ಗ, 19, ಬಿದ್ದ ಸ್ಥಳದವರೆಗಿದ್ದ ಗೋವುಗಳೆಲ್ಲವನ್ನೂ ಕೂಡಿಸಿ,ಗೊಲ್ಲರಮೂಲಕವಾಗಿ ಆತನ ಆಶ್ರಮಕ್ಕೆ ಕಳುಹಿಸಿಕೊಡುವಂತೆ ನಿಯಮಿಸಿದನು. ಆಮೇಲೆ ಅಗಾ ರ್ಗೃನನ್ನು ಸಮಾಧಾನಪಡಿಸುತ್ತಾ - ಎಲೈ ಬ್ರಾಹ್ಮಣೋತ್ತಮನೆ! ನೀನು ಕೋಪಿಸಬೇಡ! ನಾನು ಪರಿಹಾಸಾರವಾಗಿ ಹೀಗೆ ಹೇಳಿದೆನೇಹೊರತು ಬೇರೆಯಲ್ಲ. ನಿನ್ನಲ್ಲಿರುವ ಅತಿಶಯವಾದ ಈ ಬ್ರಹ್ಮತೇಜಸ್ಸನ್ನು ಪ್ರಕಾಶ ಪಡಿಸಬೇಕೆಂಬುದಕ್ಕಾಗಿಯೇ ಹೀಗೆ ನಿನಗೆ ಈ ಕಾವ್ಯವನ್ನು ಹೇಳಿದನು. ಇನ್ನು ನಿನಗೆ ಬೇಕಾದ ಬೇರೆ ಯಾವ ಕೋರಿಕೆಗಳಿದ್ದರೂ ಕೇಳು! ಅವೆಲ್ಲವ ನ್ಯೂ ಕೊಡುವೆನು. ಆಗಲೂ ನಾನು ಪರಿಹಾಸಮಾಡುತ್ತಿರುವೆನೆಂದು ತಿಳಿ ಯಬೇಡ! ಸತ್ಯವಾಗಿಯೇ ಹೇಳುತ್ತಿರುವೆನು. ನಿನಗೆ ಯಾವವಿಧದಲ್ಲಿಯೂ ತಡೆಯಿಲ್ಲ. ನನ್ನಲ್ಲಿರತಕ್ಕೆ ಧನವೆಲ್ಲವೂ ಬ್ರಾಹ್ಮಣರ ಉಪಯೋಗಾ‌ವಾ ಗಿಯೇಹೊರತು ಬೇರೆಯಲ್ಲ! ಅದರಲ್ಲಿಯೂ ನಿಮ್ಮಂತಹ ಸತ್ತಾತ್ರಗಳಲ್ಲಿ ವಿನಿಯೋಗಿಸಲ್ಪಡುವುದಾದರೆ, ನನ್ನ ಧನವು ಸಾರಕ್ಯವನ್ನು ಹೊಂದಿ ನನಗೆ ಸಂತೋಷವನ್ನೂ ಕೀರ್ತಿಯನ್ನೂ ಉಂಟುಮಾಡದೆ?” ಎಂದನು. ಆಮೇಲೆ ಮಹರ್ಷಿಯಾದ ಆ ತ್ರಿಜಟನು ಪತ್ನಿ ಯೊಡಗೂಡಿ ಆ ಗೋಸಮೂಹಗಳೆಲ್ಲ ವನ್ನೂ ತೆಗೆಸಿಕೊಂಡು, ಮತ್ತಾವುದನ್ನೂ ಅಪೇಕ್ಷಿಸದೆ, ಅಷ್ಟರಲ್ಲಿಯೇ ತೃಪ್ತಿಪಟ್ಟು, ಮಹಾತ್ಮನಾದ ರಾಮನಿಗೆ ಯಶಸ್ವ, ವೀರವೂ, ಸಂತೋ ಪಪೂ, ಶೌಚವೂ ಹೆಚ್ಚುತ್ತಿರಬೇಕೆಂದು ಮಂಗಳಾಶೀರಾದಗಳನ್ನು ಮಾ ಡಿದನು. ರಾಮನೂಕೂಡ ಧರಾತಿಕ್ರಮವಿಲ್ಲದೆ ತನ್ನ ವೀಲ್ಯದಿಂದಲೇ ಸಂ ಪಾದಿಸಲ್ಪಟ್ಟ ಆ ಧನವೆಲ್ಲವೂ ಸತ್ಪಾತ್ರವಿನಿಯೋಗದಿಂದ ಸಾರಕವಾ ಯಿತೆಂದು ಸಂತೋಷಪಟ್ಟು, ಆಮೇಲೆ ತನ್ನ ಸುಕೃಜ್ಞನರಿಗೂ, ಅವರ ವರಿಗೆ ತಕ್ಕ ಸಮ್ಮಾನವಾಕ್ಯಗಳೊಡನೆ ತನ್ನಲ್ಲಿ ಉಳಿದ ಧನವನ್ನೂ ಹಂಚಿ ಕೊಡಿಸಿದನು. ಅಲ್ಲಿದ್ದ ಬ್ರಾಹ್ಮಣರಲ್ಲಿಯಾಗಲಿ, ಆತನ ಮಿತ್ರರಲ್ಲಿಯಾಗಲಿ ನೃತ್ಯಜನರಲ್ಲಿಯಾಗಲಿ, ದರಿದ್ರರಲ್ಲಿಯಾಗಲಿ, ಕೊನೆಗೆ ಬೀದಿಬೀದಿಯಲ್ಲಿ ಭಿಕ್ಷೆಯೆತ್ತಿ ಜೀವಿಸುವವರಲ್ಲಿಯಾಗಲಿ, ರಾಮನಿಂದ ಯಥೋಚಿತಸನ್ಮಾನ ಗಳನ್ನೂ, ಗೋಟಾನಾದಿಗಳನ್ನೂ ಪಡೆದು ತೃಪ್ತರಾಗದವರು. ಒಬ್ಬರ ದರೂ ಇರಲಿಲ್ಲ. ರಾಮನು ಎಷ್ಟೋ ಆತುರದಿಂದ ಮಾಡಿದುದಾದರೂ