ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೩೩.] ಅಯೋಧ್ಯಾಕಾಂಡವು. ಆ ದಾನವು ಯಾವ ಭಾಗದಲ್ಲಿಯೂ ನ್ಯೂನತೆಯಿಲ್ಲದೆ ಎಲ್ಲರಿಗೂ ತೃಪ್ತಿಕರ ವಾಗಿಯೇ ನಡೆಸಲ್ಪಟ್ಟಿತು. ಇಲ್ಲಿಗೆ ಮೂವತ್ತೆರಡನೆಯ ಸರ್ಗವು. ( ರಾಮನು ಸೀತಾಲಕ್ಷಕರನ್ನು ತನ್ನೊಡನೆ ಕಾಡಿಗಕರೆ ). -wwತಿ ದುಕೊಂಡು ಹೋಗುವ ವಿಷಯದಲ್ಲಿ ಅನುಮತಿಯ tw (ನ್ನು ಕೇಳುವುದಕ್ಕಾಗಿ ದಶರಥನ ಬಳಿಗೆ ಹೋದುದು ) ರಾಮಲಕ್ಷಣರಿಬ್ಬರೂ ಸೀತೆಯೊಡನೆ ಸೇರಿ, ಬ್ರಾಹ್ಮಣರಿಗೆ ಅನೇಕ ಧನಲಾನ್ಯಾದಿಗಳನ್ನು ಮಾಡಿ,ದಶರಥನನ್ನು ನೋಡಿಬರುವುದಕ್ಕಾಗಿ ಹೊರಟ ರು. ಆಗ ಅವರಿಬ್ಬರೂ ಗಂಧಪುಷ್ಠಾಹಿಗಳಿಂದ ಅಲಂಕರಿಸಲ್ಪಟ್ಟ, ಖಡ್ತಾ ದ್ಯಾ ಯುಧಗಳನ್ನು ಧರಿಸಿ ಸಿದ್ಧರಾಗಿ ನಿಂತಿರಲು, ಆ ಆಯುಧಗಳು ನೋಡುವವರ ಕಣ್ಣುಗಳನ್ನು ಕೋರೈಸುವಂತೆ ತೇಜೋ ವಿಶೇಷದಿಂದ ಜ್ವಲಿಸುತ್ತ, ಪಕ್ಕದ ಲ್ಲಿ ಸೀತಾದೇವಿಯೂ ಇದ್ದುದರಿಂದ, ಮತ್ತಷ್ಟು ಶೋಭಾವಿಶೇಷವನ್ನು ಹೊಂ ದಿತ್ತು. ಇವರು ಹೋಗತಕ್ಕ ದಾರಿಯಲ್ಲಿ ಬಹುಜನರು ಗುಂಪುಗೂಡಿ ಕಿಕ್ಕಿ ರಿಸಿ ತುಂಬಿದ್ದುದರಿಂದ, ಸುಲಭಸಂಚಾರಕ್ಕೆ ಅವಕಾಶವಿರಲಿಲ್ಲ. ಅನೇಕಜನ ರು ತಮ್ಮ ತಮ್ಮ ಉಪ್ಪರಿಗೆಗಳನ್ನೂ ,ವಿಮಾನಗಳನ್ನೂ ಏರಿನಿಂತುಬಹುವ್ಯಸ ನದಿಂದ ರಾಮನನ್ನೇ ನೋಡುತಿದ್ದರು. ಆಗ ರಾಜಚಿಹ್ನವಾದ ಛತ್ರವೂ ಇಲ್ಲ. ದೆ, ರಾಮನು ಕಾಲುನಡೆ ಯಿಂದಲೇ ಬರುತ್ತಿರುವುದನ್ನು ನೋಡಿ, ಪುರವಾಸಿಗ ಬೆಲ್ಲರೂ ವ್ಯಸನದಿಂದ ಮುಂದುಗಾಣದವರಾಗಿ, ಒಬ್ಬರಿಗೊಬ್ಬರು ವಿಧವಿಧ ವಾಗಿ ಮಾಡಿಕೊಳ್ಳುತಿದ್ದರು. ಆಗ ಅವರಲ್ಲಿ ಕೆಲವರು (1-ಆಹಾ! ಈರಾಮ ನು ಹೊರಟಾಗ ದೊಡ್ಡಚತುರಂಗಸೈನ್ಯವು ಈತನನ್ನು ಹಿಂಬಾಲಿಸಿ ಹೋ ಗುತಿತ್ತು.ಇಂತಹ ರಾಮನನ್ನು ಈಗ ಸೀತಾಲಕ್ಷ್ಮಣರಿಬ್ಬರು ಮಾತ್ರವೇ ಆ ನುಸರಿಸಿ ಹೋಗುತ್ತಿರುವರು. ಆಹಾ! ಇದೇನು ವಿಪರೀತವು! ರಾಮನು ಪ್ರ ಭುತ್ವದ ಸುಖವನ್ನು ಚೆನ್ನಾಗಿ ಅನುಭವಿಸಿದವನು.ಕೊಂದವರ ಕೋರಿಕಗ ಬೆಲ್ಲವನ್ನೂ ಆಗಾಗಲೇ ಈಡೇರಿಸಿಕೊಡತಕ್ಕವನು. ಪಿತೃಶುಷಾದಿ ಧರಗಳಲ್ಲಿ ವಿಶೇಷಗೌರವವುಳ್ಳವನು. ಈಗ ಇವನು ತನ್ನ ತಂದೆಯ ಪ್ರಜ್ಞೆ ಯನ್ನು ತಪ್ಪಿಸಲಾರದೆ, ಕಾಡಿಗೆ ಹೊರಟಿರುವುದು ಹಾಗಿರಲಿ! ಪೂರದಲ್ಲಿ ಯಾವಳನ್ನು ಆಕಾಶದಲ್ಲಿ ಸಂಚರಿಸುತ್ತಿರುವ ಭೂತಗಳೂ ನೋಡಲಾ