ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಶ್ರೀಮದ್ರಾಮಾಯಣವು [ಸರ್ಗ Ca ರಡಿದು ವೋ,ಅಂತಹ ಸೀತೆಯು ಈಗ ರಾಜಮಾರ್ಗದಲ್ಲಿ ಕಾಲುನಡೆಯಿಂದ ಲೇ ಬರುತ್ತಿರುವುದರಿಂದ, ಬೀದಿಯ ಜನರೆಲ್ಲರೂ ನೋಡುವ ಹಾಗಾಯಿತ ಲವೆ? ಅಯ್ಯೋ! ಈಸೀತೆಯ ದೇಹವು ಎಷ್ಟೊಸುಕುಮಾರವಾದುದು. ಈಕೆ ಯ ದೇಹಕ್ಕೆ ಸರೊತ್ತಮವಾದ ಸುಗಂಧಾನುಲೇಪನವೊಂದೇಉಚಿತವಾ ದುದು! ಈಕೆಯು ಯಾವಾಗಲೂ ರಕ್ತಚಂದನದಿಂದಲೇ ತನ್ನ ದೇಹವನ್ನು ಅಲಂಕರಿಸಿಕೊಳ್ಳುತಿದ್ದವಳು. ಇಂತಹ ಸೀತೆಯ ದೇಹವು ಇನ್ನು ಮೇಲೆ ಬಿ ನಿಲುಮಳೆಗಾಳಿಗೆ ಸಿಕ್ಕಿ,ಕಂಡಿಹೋಗಬೇಕಾದ ಕಾಲವು ಬಂದೊದಗಿರುವು ದಲ್ಲಾ! ಛೇ! ಈಗ ದಶರಥನಿಗೆ ಯಾವುದೋ ಒಂದು ಕೆಟ್ಟ ಪಿಶಾಚಿಯು ಬಂದು ಮೆಟ್ಟಿರುವಂತಿದೆ! ಇದರಲ್ಲಿ ಸಂದೇಹವೇ ಇಲ್ಲ! ಹಾಗಿಲ್ಲದಿದ್ದರೆ ಇದು ವರೆಗೂ ಎಷ್ಟೋ ಗುಣಾಡ್ಯನೆನಿಸಿಕೊಂಡಿದ್ದ ಆರಾಜನು,ತನ್ನ ಮುದ್ದು ಮಗ ನಾದ ರಾಮನನ್ನು ಕಾಡಿಗೆ ಕಳುಹಿಸುತ್ತಿದ್ದನೆ ! ಹೊಟ್ಟೆಯಲ್ಲಿ ಹು ಟಿದಮಕ್ಕಳು ಎಷ್ಟೇ ಗುಣಹೀನರಾಗಿದ್ದರೂ, ತಂದೆತಾಯಿಗಳು ಮಕ್ಕಳನ್ನು ಕಾಡಿಗೆ ಕಳುಹಿಸಲಾರರು. ತನ್ನ ಸೌಜನ್ಯದಿಂದ ಲೋಕವೆಲ್ಲವನ್ನೂ ವಶಪಡಿಸಿ ಕೊಂಡಿರುವ ಇಂತಹ ರಾಮನೆಂಬ ಪುತ್ರರತ್ನವನ್ನೇ ಹೀಗೆ ತೊರೆದು ಬಿಡ ಬೇಕಾದರೆ ಇನ್ನು ಹೇಳುತಕ್ಕದೇನು? ಅಹಿಂಸೆ, ದಯೆ,ಇಂದ್ರಿಯನಿಗ್ರಹ, ವಿದ್ಯೆ,ಶೀಲ, ಅಂತರಿಂದ್ರಿಯನಿಗ್ರಹ, ಬಹಿರಿಂದ್ರಿಯನಿಗ್ರಹಗಳೆಂಬ ಈ ಆರು ಗುಣಗಳೂ ರಾಮನಿಗೆ ಸರೊತ್ತಮವಾದ ಶೋಭಾತಿಶಯವನ್ನುಂಟುಮಾ ಡುತ್ತಿರುವುವು. ಈ ರಾಮನಿಗೆ ಸ್ವಲ್ಪ ಹಿಂಸೆಯುಂಟಾದರೂ ಬೇಸಗೆಯಲ್ಲಿ ನೀರೋಣಗಿದ ಕೊಳಗಳಲ್ಲಿ ಸಿಕ್ಕಿ ಸಂಕಟಪಡುತ್ತಿರುವ ಜಲಜಂತುಗಳಂತೆ ಜೆಗಳು ಪರಿತಪಿಸುವರು. ಈ ರಾಮನೇ ಜಗತ್ತಿಗೆಲ್ಲ ಅಥಿನಾದನು. ಅಂತಹ ರಾಮನಿಗೆ ವನವಾಸಪೀಯುಂಟಾದರೆ,ಬುಡುಕಟ್ಟುಹೋದಮೇಲೆಪಷ. ಫಲಭರಿತವಾದ ಮರವೂನಾಶಹೊಂದುವಂತೆ, ಆತನ ಆಧಾರದಿಂದಿರುವ ಈ ಲೋಕವೆಲ್ಲವೂ ನಾಶಹೊಂದುವುದರಲ್ಲಿ ಸಂದೇಹವಿಲ್ಲ. ದರವೆಂಬುದೇ ಈ ತನಿಗೆ ಮುಖ್ಯವಾದ ಸಾರವು, ಈತನಲ್ಲಿ ಅದ್ಭುತವಾದ ಒಂದು ದಿವ್ಯತೇಜ ಸ್ಪಿರುವುದು.ಮನುಷ್ಯಾದಿಪ್ರಾಣಿರೂಪಗಳಾದ ವೃಕ್ಷಕ್ಕೆ ಈತನೇ ಮೂಲ ಪ್ರಾಯನಾಗಿರುವನು. ಈ ಪ್ರಪಂಚದಲ್ಲಿರುವ ಇತರಜನರೆಲ್ಲರೂಆ ವ್ಯಕ