ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧ ಸರ್ಗ. ೩೩.] ಅಯೋಧ್ಯಾಕಾಂಡವು. ದಲ್ಲಿ ಬೆಳೆದಿರುವ ಪುಷ್ಪಗಳಂತೆಯೂ, ಫಲಗಳಂತೆಯೂ, ಶಾಖೆಗಳಂತೆಯೂ, ಇರುವರು. ಆದುದರಿಂದ ಆತನನ್ನಾಶ್ರಯಿಸಿ ಜೀವಿಸುತ್ತಿರುವ ನಾವೆಲ್ಲರೂ ಪುತ್ರ ಮಿತ್ರ ಕಳತ್ರಬಂಧುಗಳೊಡಗೂಡಿ, ಆ ಲಕ್ಷಣವಂತೆ, ರಾಮನನ್ನೇ ಹಿಂಬಾಲಿಸಿ ಹೋಗುವುದುಚಿತವು-ನಾವೆಲ್ಲರೂ ನಮ್ಮ ಮನೆಮಾರುಗಳನ್ನೂ, ಹೊಲಗದ್ದೆಗಳನ್ನೂ, ಇನ್ನೂ ಉಳಿದ ಸಮಸ್ತಸ್ವತ್ತುಗಳನ್ನೂ ಬಿಟ್ಟು, ಧಾ ರಿಕನಾದ ರಾಮನನ್ನೇ ಹಿಂಬಾಲಿಸಿ, ಆತನ ಸುಖದುಃಖಗಳಿಗೆ ಸಮಭಾಗಿಗ ಳಾಗಿ ಹೋಗುವೆವು. ಹೇಗಿದ್ದರೂ ನಾವು ನಮ್ಮ ಮನೆಯನ್ನು ಬಿಟ್ಟು ಹೋ ದಮೇಲೆ, ನಾವು ಸಂಗ್ರಹಿಸಿಟ್ಟಿರುವ ನಿಧಿನಿಕ್ಷೇಪಗಳೆಲ್ಲವೂ ಪರರ ಪಾಲಾಗು ವುವು. ನಮ್ಮ ಮನೆಮಠಗಳೆಲ್ಲವೂ ಹಾಳು ಬೀಳುವುವು. ನಾವು ಸೇರಿಸಿಟ್ಟಿರುವ ಧನಧಾನ್ಯಗಳೆಲ್ಲವೂ ಸೂರೆಹೋಗುವುವು. ನಮ್ಮಲ್ಲಿರತಕ್ಕ ಶಯನಾಸನಾದಿ. ಸಮಸ್ತಪದಾರ್ಥಗಳೂ ಕಳ್ಳರ ಪಾಲಾಗುವುವು. ಅವೆಲ್ಲವೂ ಹಾಗಿರಲಿ! ಮು ಖ್ಯವಾಗಿ ಇನ್ನು ಸ್ವಲ್ಪ ಕಾಲದಲ್ಲಿಯೇ ನಮ್ಮ ಮನೆಯ ಅಂಗಳವೆಲ್ಲವೂ ಧೂಳಿ ನಿಂದ ತುಂಬಿ, ಗೃಹದೇವತೆಗಳೂ ಬಿಟ್ಟು ಹೋಗುವರು. ಅಲ್ಲಲ್ಲಿ ಇಲಿಹೆಗ್ಗಣಗ ಳು ಹೆಚ್ಚಿ ಬಿಲಗಳನ್ನು ಕೊರೆದು ನಿರಾತಂಕವಾಗಿ ಓಡಾಡುವುವು.ಇನ್ನು ಮೇ ಲೆ ನಮ್ಮ ಮನೆಯು ಜಲಸೇಚನವೆಂಬುದನ್ನೇ ಕಾಣದು. ಇದನ್ನು ಗುಡಿಸುವ ವರೂ ಇಲ್ಲದೇ ಹೋಗುವರು. ಇದುವರೆಗೂ ನಾವು ಸುವಾಸನೆಗಾಗಿ ಆಗಾ ಗ ಉಪಯೋಗಿಸುತಿದ್ದ ಧೂಪದೀಪಾರಿಗಳಿಗೂ ಇನ್ನು ಮೇಲೆ ಅವಕಾಶವಿಲ್ಲ. ಬಲಿಕರಗಳಾಗಲಿ, ಯಜ್ಞಕಾರಗಳಾಗಲಿ, ಅಗ್ನಿ ಹೋತ್ರಗಳಾಗಲಿ, ಜಪ ಗಳಾಗಲಿ, ಯಾವುದೊಂದೂ ಇನ್ನು ಮೇಲೆ ನಮ್ಮ ಮನೆಯಲ್ಲಿ ನಡೆಯಲಾರ ವು. ಕೊನೆಗೆ ಹೊಗೆಯಾಡುವುದಕ್ಕೆ ಅವಕಾಶವಿಲ್ಲ. ಬರಗಾಲದಲ್ಲಿ ಬಿಟ್ಟು ಹೋಗುವುದರಿಂದ ಹಾಳುಬಿದ್ದ ಮನೆಗಳಂತೆ, ಒಡೆದುಹೋದ ಕುಡಿಕೆ ಮಡಕೆಗಳಿಂದ ತುಂಬಿದ ನಮ್ಮ ಮನೆಗಳೆಲ್ಲವನ್ನೂ, ದುರಾಶೆಯುಳ್ಳ' ಆ ಕೈ ಕೇಯಿಯೇ ಇಟ್ಟುಕೊಂಡು ಸ್ಟೇಚ್ಛೆಯಾಗಿ ಅನುಭವಿಸಲಿ ! ಈ ಆಯೋ ಧೈಯೇ ಕಾಡಾಗಿರಲಿ ! ರಾಮನು ಹೋಗತಕ್ಕ ಕಾಡುಗಳೇ ಪಟ್ಟಣಗಳಾ ಗಲಿ ನಾವು ರಾಮನೊಡನೆ ಹೋದರೆ, ನಮಗೆ ಕಾಡಿನಲ್ಲಿ ಯಾವುದೊಂದು ಭಯವೂ ಇರದು. ಬಿಲಗಳಲ್ಲಿರುವ ಹಾವುಗಳೂಕೂಡ ನಮಗೆ ಹೆದರಿ ಬಿಟ್ಟು 88