ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪ ಶ್ರೀಮದ್ರಾಮಾಯಣವು [ಸರ್ಗ' ೩೩. ಹೋಗುವುವು. 'ಬೆಟ್ಟದ ತಪ್ಪಲುಗಳಲ್ಲಿರುವ ಮೃಗಪಕ್ಷಿಗಳೆಲ್ಲವೂ ಆ ಸ್ಥಳ ವನ್ನು ಬಿಟ್ಟೋಡುವುವು. ಕಾಡಾನೆಗಳೂ, ಸಿಂಹಗಳೂ ಕಾಡುಗಳನ್ನು ಬಿಟ್ಟು ಓಡಿಹೋಗುವುವು. ಕೊನೆಗೆ ಆ ಕೂರಜಂತುಗಳೆಲ್ಲವೂ ನಿರಾಶ್ರಯ ವಾಗಿ ಈ ಪಟ್ಟಣದಲ್ಲಿಯೇ ಬಂದು ಸೇರಲಿ ! ನಾವು ಅಲ್ಲಿಗೆ ಹೋದಮೇಲೆ ಹುಲ್ಲು ಕಡ್ಡಿಗಳನ್ನೂ, ಮಾಂಸಗಳನ್ನೂ, ಹಣ್ಣುಗಳನ್ನೂ ತಿಂದು ಜೀವಿಸ ತಕ್ಕ ವನಜೀವಿಗಳೆಲ್ಲವೂ ಈ ಪಟ್ಟಣಕ್ಕೆ ಬಂದು ಸೇರಿ, ಇಲ್ಲಿ ಸ್ಥಿರವಾಗಿ ನೆಲೆ ಗೊಂಡಿರಲಿ ! ಕೂರಜಂತುಗಳಿಂದ ತುಂಬಿರುವ ಈ ದೇಶವನ್ನು ಕೈಕೇಯಿ ಯೂ, ಅವಳ ಮಗನೂ, ಅವರ ಬಂಧುಗಳೂ ಸಂತೋಷದಿಂದನುಭವಿ ಸಲಿ ! ನಾವು ರಾಮನೊಡನೆ ಸೇರಿ ಸುಖದಿಂದಿರುವೆವು ” ಎಂದರು. ಹೀಗೆ ಅನೇಕಜನರು ವಿಧವಿಧವಾದ ಮಾತುಗಳನ್ನಾಡುತ್ತಿರಲು, ರಾಮನು ಅವೆಲ್ಲ ವನ್ನೂ ಕೇಳುತ್ತಲೇ ಹೋಗುತಿದ್ದನು. ಆತನು ಬಹಳಗಂಭೀರಸ್ವಭಾವವುಳ್ಳ ವನಾದುದರಿಂದ, ಅವುಗಳನ್ನು ಕೇಳಿಯೂ ಯಾವವಿಧವಾದ ಸಂತೋಷವಿ ಕಾರವನ್ನೂ ಹೊಂದಲಿಲ್ಲ. ಧಾತ್ಮನಾದ ಆ ರಾಮನು, ಕೈಲಾಸಶಿಖರದಂ ತೆ ಮಹೋನ್ನತವಾಗಿ ಪ್ರಕಾಶಿಸುತ್ತಿರುವ ತಂದೆಯ ಅರಮನೆಯನ್ನು ದೂರ ದಿಂದಲೇ ನೋಡುತ್ತಾ,ಮದದಾನೆಯಂತೆಗಂಭೀರವಾದ ನಡೆಯಿಂದ ಮುಂದೆ ಬಂದನು. ಅಲ್ಲಿ ಅನೇಕವೀರಪುರುಷರು ವಿನೀತರಾಗಿ ಬಾಗಿಲನ್ನು ಕಾಯುತ್ತಿದ್ದ ರು. ರಾಮನು ಆ ಅರಮನೆಯನ್ನು ಪ್ರವೇಶಿಸಿದೊಡನೆ ಅಲ್ಲಿಗೆ ಸ್ವಲ್ಪ ದೂರದ ಲ್ಲಿ ದೈನ್ಯದಿಂದ ನಿಂತಿರುವ ಸುಮಂತ್ರನನ್ನು ನೋಡಿದನು. ಹೀಗೆ ರಾಮನು ಪಿ ತೃಪರಿಪಾಲನವೆಂಬ ವ್ರತವನ್ನಂಗೀಕರಿಸಿ, ತಂದೆಯನ್ನು ! ನೋಡುವುದಕ್ಕಾಗಿ ದಾರಿಯಲ್ಲಿ ಬರುತಿದ್ದಾಗ, ಆತನನ್ನು ನೋಡಿದ ಪುರವಾಸಿಗಳೆಲ್ಲರೂ ಅನೇಕವಿ ಧದಲ್ಲಿ ಸ್ತೋತ್ರ ಮಾಡುತ್ತ, ಆತನ ಕಷ್ಟಕ್ಕಾಗಿ ದುಃಖಿಸುತ್ತಿದ್ದರೂ, ಅವನು ಮಾತ್ರ ಸ್ವಲ್ಪವೂ ವ್ಯಸನವನ್ನು ತೋರಿಸಿಕೊಳ್ಳದೆ, ನಗುಮುಖವುಳ್ಳವನಾ ಗಿಯೇ ಇದ್ದನು. ಮಹಾತ್ಮನಾಗಿಯೂ, ಧೀರನಾಗಿಯೂ ಇರುವ ಆ ದಶರಥ ಪುತ್ರನು ಹೀಗೆ ವನಪ್ರಯಾಣಕ್ಕೆ ನಿಶ್ಚಯಿಸಿಕೊಂಡು, ಅಲ್ಲಿ ತನಗೆ ತಂದೆ ಯು ವನವಾಸವನ್ನಾ ಜ್ಞಾಪಿಸಿದುದುಮೊದಲು ವ್ಯಸನದಿಂದ ಕರಗು ತಿದ್ದ ಸುಮಂತ್ರನನ್ನು ನೋಡಿ, ತಾನು ಬಂದಿರುವ ವಿಷಯವನ್ನು ತಂದೆಗೆ