ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹರ್ಗ, ೩೪.] ಅಯೋಧ್ಯಾಕಾಂ ನೆಲದಮೇಲೆ ಬಿದ್ದು ಬಿಟ್ಟನು. ಇದನ್ನು ನೋಡಿ ರಾಮಲಕ್ಷಣರಿಬ್ಬರೂ ಬೇಗನೆ ಮುಂದೆಬಂದು, ದುಃಖದಿಂದ ಪ್ರಜ್ಞೆ ತಪ್ಪಿ ಬಿದ್ದಿರುವ ತಂದೆಯನ್ನು ಎತ್ತಿ ಕುಳ್ಳಿರಿಸುವುದಕ್ಕೆ ಪ್ರಯತ್ನಿಸಿದರು. ಅಕಾಲದಲ್ಲಿ ಅಲ್ಲಿದ್ದ ಸ್ತ್ರೀಯರೆಲ್ಲ ರೂ ಗಟ್ಟಿಯಾಗಿ ಗೋಳಿಡುವುದಕ್ಕಾರಂಭಿಸಿದರು. ಹೀಗೆ ಸ್ತ್ರೀಯರೆಲ್ಲರೂ ಮುಂದುಗಾಣದೆ ಭಯಸಂಭ್ರಮಗಳಿಂದ ಓಡಾಡುತ್ತಿರುವಾಗ, ಅವರ ಕಾ ಲಂದುಗೆ ಮೊದಲಾದ ಆಭರಣಗಳ ಧ್ವನಿಗಳೊಡನೆ, ಅವರ ಹಾಹಾಕಾ ರವೂ ಅರಮನೆಯ ನಾಲ್ಕು ಕಡೆಗೂ ವ್ಯಾಪಿಸಿತು. ಒಬ್ಬೊಬ್ಬರೂ ರಾಮನ ಹೆಸರನ್ನು ಹಿಡಿದು ಹಾಹಾಕಾರದೊಡನೆ ಕೂಗಿಕೊಳ್ಳುತಿದ್ದರು. ಇಷ್ಟರಲ್ಲಿ ರಾಮಲಕ್ಷ್ಮಣರಿಬ್ಬರೂ ತಮ್ಮ ಎರಡುತೋಳುಗಳಿಂದಲೂ ಆ ದಶರಥನನ್ನು ಎತ್ತಿಕೊಂಡು ಬಂದು ಮಂಚದಮೇಲೆ ಮಲಗಿಸಿದರು. ಸೀತಾದೇವಿಯೂ ಇವರಿಗೆ ಸಹಾಯಕಳಾಗಿ ದಶರಥನಿಗೆ ಶೈತ್ಯೋಪಚಾರಗಳನ್ನು ಮಾಡುತಿ ದಳು.ಈ ಆತ್ಮಾಹಿತವನ್ನು ನೋಡಿ ಸೀತಾರಾಮಲಕ್ಷ್ಮಣರು ಮೂವರೂ ವ್ಯಸನವನ್ನು ತಡೆಯಲಾರದೆ ಆಳುತಿದ್ದರು. ಒಂದು ಮುಹೂರ್ತಕಾಲದ ಮೇಲೆ ದಶರಥರಾಜನು ಚೆತರಿಸಿ ಪ್ರಜ್ಞೆ ಹೊಂದಿದುದನ್ನು ನೋಡಿ, ದುಃಖಸಮುದ್ರದಲ್ಲಿ ಮುಳುಗಿಹೋಗಿದ್ದ ಆತನನ್ನು ಕುರಿತು ರಾಮನು ವಿನಯದಿಂದ ಕೈಮುಗಿಯುತ್ತಾ “ಎಲೈ ಮಹಾರಾಜನೆ ! ನಿನ್ನಲ್ಲಿ ನನ್ನ ದೊಂದು ಪ್ರಾರನೆಯುಂಟು. ನಮ್ಮೆಲ್ಲರಿಗೂ ನೀನೇ ಮುಖ್ಯನಿಯಾಮಕನ ಇವೆ ! ನಾನು ಈಗ ದಂಡಕಾರಣ್ಯಕ್ಕೆ ಹೊರಟಿರುವೆನು. ಪ್ರಯಾಣಿಸಿದ್ದ ನಾಗಿರುವ ನನ್ನನ್ನು ಕ್ಷೇಮದಿಂದ ನೋಡಿ ಆಶೀರ್ವದಿಸು. ಇದೋ! ತಮ್ಮ ನಾದ ಲಕ್ಷಣನೂ, ಪ್ರಯಪತ್ನಿ ಯಾದ ಸೀತೆಯೂ ನನ್ನೊಡನೆ ಬರು ವುದಾಗಿ ಸಂಕಲ್ಪಿಸಿಕೊಂಡಿರುವರು. ಅವರಿಬ್ಬರಿಗೂ ನೀನು ಅನುಮತಿಯ ನ್ನು ಕೊಟ್ಟು ಕಳುಹಿಸು. ನಾನು ಅನೇಕ ಕಾರಣಗಳನ್ನು ಹೇಳಿ ತಡೆದರೂ, ಇವರಿಬ್ಬರೂ ನನ್ನನ್ನು ಬಿಟ್ಟಿರುವುದಕ್ಕೆ ಇಷ್ಟಪಡದೆ ಹೋದರು. ನೀನು ವ್ಯಸನವನ್ನು ಬಿಟ್ಟು ನಮ್ಮೆಲ್ಲರಿಗೂ ಅನುಮತಿಯನ್ನು ಕೊಡು, ಬ್ರಹ್ಮದೇ ವನು ಪ್ರಜೆಗಳನ್ನು ಆಯಾಕಾರಗಳಿಗೆ ನಿಯಮಿಸುವಂತೆ, ನಮ್ಮೆಲ್ಲರಿಗೂ ನೀನೇ ಆಜ್ಞೆಯನ್ನು ಕೊಟ್ಟು ಕಳುಹಿಸಬೇಕಲ್ಲವೆ?” ಎಂದನು. ಹೀಗೆ ತನ್ನ ಅಜ್ಞೆಯನ್ನು ಅತ್ಯಾತುರದಿಂದ ಇದಿರುನೋಡುತ್ತಿರುವ ರಾಮನನ್ನು ನೋ