ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


e ಶ್ರೀಮದ್ರಾಮಯನವ (ಸರ್ಗ. ೩೪ ಡಿ ದಶರಥನು ವತ್ಸ ರಾಮಾ ! ನಾನು ವರಪ್ರದಾನವೆಂಬ ವ್ಯಾಜ್ಯದಿಂದ ಕೈಕೇಯಿಯ ಮಾತಿಗೆ ಮರುಳಾಗಿ ಧಮ್ಮ ಪಾಶಕ್ಕೆ ಕಟ್ಟುಬಿದ್ದಿರುವನು. ಹೀಗೆ ಮೋಸಹೋಗಿರುವ ನನ್ನನ್ನು ನಿಗ್ರಹಿಸುವುದಕ್ಕೂ ಈಗ ನಿನಗೆ ಪೂರವಾದ ಅಧಿಕಾರವುಂಟು!ಆದುದರಿಂದ ಈಗ ನನ್ನನ್ನೇ ನೀನು ನಿಗ್ರಹಿಸಿಈಅಯೋಧ್ಯೆ ಗ ರಾಜನಾಗಬಹುದು.ಇದರಲ್ಲಿ ಯಾವುದೊಂದು ಥರ ಹಾನಿಯೂ ಇರಲಾರ ದು.” ಎಂದನು. ಧರಜ್ಞರಲ್ಲಿ ಮೇಲೆನಿಸಿಕೊಂಡ ರಾಮನು ಇದನ್ನು ಕೇಳಿ ಕೈಮುಗಿದು ನಿಂತು, ತಂದೆಯನ್ನು ನೋಡಿ (ಎಲೈ ರಾಜನೆ! ನೀನು ಈಗ ಸಾ ವಿರಾರು ವರ್ಷಗಳಿಂದ ಈ ಭೂಮಿಗೆ ಒಡೆಯನಾಗಿ ಧರದಿಂದಪಾಲಿಸುತ್ತಿ ರುವೆ. ಅಂತಹ ನಿನು ಈಗ ನನ್ನನ್ನು ಅಸತ್ಯವಂತನನ್ನಾಗಿ ಮಾಡಬಾರದು. ನಿನ್ನ ಸತ್ಯಕ್ಕೆ ಭಂಗವನ್ನು ತರುವುದು ನನಗೂ ಶ್ರೇಯಸ್ಕರವಲ್ಲ. ಆದುದರಿಂ ದ ನಾನು ಕಾಡಿನಲ್ಲಿದ್ದೆ ಬರುವೆನು. ಈ ಹದಿನಾಲ್ಕು ವರ್ಷಗಳನ್ನು ಕಾಡಿನಲ್ಲಿ ಕಳೆಯುವುದು ನನಗೊಂದು ಕಷ್ಟವಲ್ಲ. ಸುಖವಾಗಿಯೇ ಕಳೆದು ಬಿಡಬಹು ದು, ಆ ಪ್ರತಿಜ್ಞೆಯನ್ನು ಮುಗಿಸಿ, ಹಿಂತಿರುಗಿಬಂದ ಮೇಲೆ ನಿನ್ನ ಪಾದ ಶುಕ್ರೂಷೆಯನ್ನು ಮಾಡುತ್ತಿರುವನು” ಎಂದನು. ಇದನ್ನು ಕೇಳಿ ದಶರಥನು ವ್ಯಸನವನ್ನು ತಡೆಯಲಾರದೆ,ಗಟ್ಟಿಯಾಗಿ ಗೋಳಿಡುತ್ತಾ, ತಾನು ಸತ್ಯಪಾ ಶಕ್ಕೆ ಕಟ್ಟುಬಿದ್ದಿರುವುದಲ್ಲದೆ ಸಮೀಪದಲ್ಲಿದ್ದ ಕೈಕೇಯಿಯೂ ರಹಸ್ಯವಾಗಿ ತನ್ನನ್ನು ನಿರ್ಬಂಧಿಸುತ್ತಿರಲು, ಏನೊಂದೂ ತೋರದೆ, ಕೊನೆಗೆ ರಾಮನನ್ನು ನೋಡಿ ವತ್ರನೆ ! ಇನ್ನು ನಾನೇನು ಹೇಳಲಿ ? ಪಾರಲೌಕಿಕಫಲಕ್ಕಾಗಿ ಯೂ, ಇಹಲೋಕದ ಅಭ್ಯುದಯಕ್ಕಾಗಿಯೂ ನೀನು ನಡೆಸಬೇಕೆಂದಿರುವ ಈ ವನವಾಸವನ್ನು ಮುಗಿಸಿಕೊಂಡು ಬಾ! ನೀನು ಹೋಗತಕ್ಕ ಮಾರ್ಗಗಳೆ ಲವೂ ಮಂಗಳಕರವಾಗಿರಲಿ! ನಿನಗೆ ದಾರಿಯಲ್ಲಿ ಯಾವುದೊಂದು ಭಯವೂ ಇಲ್ಲದಿರಲಿ! ನೀನು ಸುಖವಾಗಿ ಹಿಂತಿರುಗಿ ಬಂದು ಅಯೋಧ್ಯೆಯನ್ನು ಸೇರು ವವರೆಗೂ ನಿನಗೆ ಕ್ಷೇಮವುಂಟಾಗಲಿ!ನೀನು ಸತ್ಯಸ್ವರೂಪನೆನಿಸಿಕೊಂಡು ಥ ಲ್ಯದಲ್ಲಿಯೇ ದೃಢಸಂಕಲ್ಪವುಳ್ಳವನಾಗಿರುವುದರಿಂದ, ಈ ನಿನ್ನ ನಿಶಯವನ್ನು ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಲ್ಲ. ಆದರೆ ನೀನು ಈ ರಾತ್ರಿಯಲ್ಲಿ ಮಾತ್ರ ಇಲ್ಲಿಯೇ ಇದ್ದು ಹೋಗಬೇಕೇ ಹೊರತು,ಸತ್ವಧಾ ಈಗ ಹೊರಗೆ ಕೂಡದು.ಈ ಒಂದು ದಿವಸವಾದರೂ ನಿನ್ನನ್ನು ಮನಸ್ತ್ರಪ್ತಿಯಾಗು