ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೫೧f.. ಸರ್ಗ, ೩೪.] ಅಯೋಧ್ಯಾಕಾಂಡವು. ವವರೆಗೆ ನೋಡಿ ಆನಂದಿಸುವೆನು. ಇನ್ನೇನು! ಇದೋ! ರಾತ್ರಿಯು ಸಮೀಪಿ ಸಿರುವುದು! ಇದೊಂದುದಿವಸವಾದರೂ ನೀನು ನನ್ನನ್ನೂ ,ನಿನ್ನ ತಾಯಿಯ ನ್ಯೂ ನೋಡುತಿದ್ದು, ನಮ್ಮಿಬ್ಬರನ್ನೂ ಸಂತೋಷಪಡಿಸು! ನಾಳೆಬೆಳಗಾದ ಕೂಡಲೆ ನಿನ್ನ ಕೋರಿಕೆಗಳೆಲ್ಲವನ್ನೂ ಕೈಗೂಡಿಸಿ, ನಿನ್ನನ್ನು ಕಳುಹಿಸಿಕೊಡು ವೆವು!ಎಲೆ ವತ್ರನೆ! ಈಗ ನೀನು ಪ್ರಾರಂಭಿಸಿರುವ ಕಾರವು ಅತಿಮುಷ್ಕರವಾ ದುದು! ನನ್ನೊಬ್ಬನ ಹಿತಕ್ಕಾಗಿ ಇಷ್ಯರಾದ ಇತರಬಂಧುಮಿತ್ರರೆಲ್ಲರನ್ನೂ ತೊರೆದು,ನಿರ್ಜನವಾದ ಕಾಡಿಗೆ ಹೊರಡಬೇಕೆಂದಿರುವೆಯಲ್ಲವೆ?ನೀನು ಇಷ್ಟು ಸಾಹಸಕಾರಕ್ಕೆ ಪ್ರಯತ್ನಿ ಸಿದುದು ನನಗೆ ಸತ್ವಧಾ ಸಮ್ಮತವಿಲ್ಲ!ಇದರಿಂದ ನಾನು ಎಂದಿಗೂ ಸಂತೋಷಿಸುವೆನೆಂದು ತಿಳಿಯಬೇಡ ! ನನ್ನ ಸತ್ಯದ ಮೇಲೆ ಆಣೆಯಿಟ್ಟು ಹೇಳುವೆನು. ಆದರೆ ಕೇವಲಸೀಮಾತ್ರಳಾದವಳೊಬ್ಬ ಛು ಬೂದಿಮುಚ್ಚಿದ ಕೆಂಡದಂತೆ ತನ್ನೊಳಗಿನ ಕರಸ್ವಭಾವವನ್ನು ಹೊರ ಕ್ಕೆ ಕಾಣಿಸದೆ ಮರೆಸಿಕೊಂಡಿದ್ದು, ನನ್ನನ್ನು ಮರುಳುಮಾಡಿ, ನನ್ನ ಮನಸ್ಸ ನ್ನು ಕದಲಿಸಿ, ಮೋಸದಿಂದ ಮಾತಿಗೆ ಸಿಕ್ಕಿಸಿಕೊಂಡುಬಿಟ್ಟಿರುವಳು. ಕುಲ ಗೇಡಿಯಾದ ಆಕೈಕೇಯಿಯು ನನ್ನನ್ನು ವಂಚಿಸಿ ಕೇಳಿಕೊಂಡವರಗಳನ್ನೂ ಕೂಡ, ನೀನು ಅಲಕ್ಷ ಮಾಡದೆ ಕೈಗೂಡಿಸಬೇಕೆಂದು ಪ್ರಯತ್ನಿಸಿರುವೆ ಯಲ್ಲವ ? ನಿನ್ನ ಗುಣವನ್ನು ನಾನೇನೆಂದು ಹೇಳಲಿ!ಆದರೆ ಹಿರಿಯಮಗನಾದ ಸೀನು, ತಂದೆಯಾದ ನನ್ನನ್ನು ಅಸತ್ಯದಲ್ಲಿ ಬಿಳದಂತೆ ಮಾಡಿ ಉದ್ಧರಿ ಸುವುದೇನೂ ಅಷ್ಟು ಆಶ್ಚಯ್ಯಕರವಾದ ವಿಷಯವಲ್ಲ” ಎಂದನು. ಹೀಗೆ ಬಹುವ್ಯಸನದಿಂದ ದಶರಥನು ಹೇಳಿದ ಮಾತನ್ನು ಕೇಳಿ, ರಾಮಲಕ್ಷ್ಮಣರಿ ಬ್ಬರೂ ವ್ಯಸನಾಕ್ರಾಂತರಾಗಿದ್ದರು. ಆಗ ರಾಮನು ತಂದೆಯನ್ನು ನೋಡಿ ('ಎಲೈ!ತಂದೆಯೆ! ನಾಳೆ ನನ್ನ ಸಮಸ್ತವಿಧವಾದ ಕೋರಿಕೆಗಳನ್ನೂ ಈಡೇ ಬಿಸಿ, ಆಮೇಲೆ ನನ್ನನ್ನು ಕಳುಹಿಸಿಕೊಡುವುದಾಗಿ ನೀನು ಹೇಳಿದೆಯಲ್ಲವೆ ! ಗುಣವಿಶಿಷ್ಟವಾದ ಯಾವ ವಸ್ತುಗಳನ್ನು ಪಡೆಯಬೇಕಾದರೂ ನಾನು ನಿ ಮ್ಮಿಂದಲ್ಲದೆ ಮತ್ತಾರಿಂದ ಪಡೆಯಲಿ? ತಂದೆತಾಯಿಗಳಾದ ನೀವಲ್ಲದೆ ನನ್ನ ಕೋರಿಕೆಗಳನ್ನು ಬೇರೆ ಯಾರು ತಾನೇ ಈಡೇರಿಸಿಕೊಡುವರು? ಆದರೆ ನನಗೆ ನಿಮ್ಮಿಂದ ಪಡೆಯಬೇಕಾದ ಸಮಸ್ಯೆ ಇಷ್ಟಾರ್ಥಗಳಲ್ಲಿಯೂ ಮು. ಖ್ಯವಾದುದೊಂದುಂಟು, ಅದನ್ನು ಮಾತ್ರ ಈಗ ನಡೆಸಿ ಕೊಟ್ಟರೆ ಸಾಕು !