ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೭೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Sso ಶ್ರೀಮದ್ರಾಮಾಯಣದ [ಸರ್ಗ, ೩೪. ನನ್ನ 'ವನಪ್ರಯಾಣಕ್ಕೆ ನೀವು ಅನುಮತಿಯನ್ನು ಕೊಡಬೇಕೆಂಬುದೇ ಈಗ ನಾನುಮುಖ್ಯವಾಗಿ ಅಪೇಕ್ಷಿಸತಕ್ಕಕೋರಿಕೆಯು, ನನಗೆ ಬೇರೆಯಾವುದನ್ನೂ ಕೊಡಬೇಕಾದುದಿಲ್ಲ. ಅವೆಲ್ಲಕ್ಕೂ ಪ್ರತಿನಿಧಿಯಾಗಿ ಈ ಪ್ರಯಾಣದ ಅನು ಜ್ಞೆಯೊಂದನ್ನು ಕೊಟ್ಟರೆ ಸಾಕು, ಧನಧಾನ್ಯ ಸಮೃದ್ಧವಾದ ದೇಶಗಳಿಂದ ಲೂ, ಜನಗಳಿಂದಲೂ, ಭರಿತವಾದ ಈ ಭೂಮಿಯೆಲ್ಲವನ್ನೂ ನಾನು ಭರ ತನಿಗಾಗಿಯೇ ಬಿಟ್ಟುಬಿಡುವೆನು. ಭರತನೇ ಇದನ್ನನುಭವಿಸಲಿ : ವನವಾಸ ಕ್ಯಾಗಿ ದೃಢಸಂಕಲ್ಪ ಮಾಡಿರುವ ನನ್ನ ಬುದ್ಧಿಯು ಈಗ ಎಷ್ಟು ಮಾತ್ರವೂ ಚಲಿಸಲಾರದು. ವರಪ್ರದಾತನಾದ ನೀನು ಕೈಕೇಯಿಯಲ್ಲಿ ಪ್ರಸನ್ನ ನಾಗಿ ಆಕೆಗೆ ಯಾವ ವರಗಳನ್ನು ಕೊಟ್ಟಿದ್ದೆಯೋ, ಅವುಗಳನ್ನು ಲೋಪವಿಲ್ಲದೆ ನಡೆಸಿಕೊಡು ! ನಿನ್ನ ಸತ್ಯಸಂಧತೆಯು ಕೆಡದಂತೆ ರಕ್ಷಿಸಿಕೊಳ್ಳುವನಾಗು ! ನಾನೂ ನಿನ್ನ ಆಜ್ಞೆಯನ್ನು ಯಥೋಕ್ತವಾಗಿ ಪರಿಪಾಲಿಸುತ್ತ, ಹದಿನಾ ಲ್ಕುವರ್ಷಗಳವರೆಗೆ ವನಚರರೊಡನೆ ಕಾಡಿನಲ್ಲಿ ವಾಸಮಾಡುತ್ತಿರುವೆನು. ನೀನು ಮನಸ್ಸಿನಲ್ಲಿ ಸ್ವಲ್ಪವೂ ವಿಚಾರಪಡಬೇಡ ! ಭರತನಿಗೇ ರಾಜ್ಯವನ್ನು ಕೊಡು! ನಮ್ಮ ರಘುಕುಲಕ್ಕೆ ಸಂತೋಷವನ್ನುಂಟುಮಾಡು! ನನಗೆ ನಿನ್ನಾ ಜ್ಞೆಯನ್ನು ನೆರವೇರಿಸುವುದರಲ್ಲಿರುವಷ್ಟು ಪ್ರೀತಿಯು, ರಾಜ್ಯದಲ್ಲಿಯಾಗ ತಿ, ರಾಜಭೋಗಗಳಲ್ಲಿಯಾಗಲಿ ಮತ್ಯಾವುದರಲ್ಲಿಯಾಗಲಿ ಇಲ್ಲವು. ಇನ್ನು ನಿನ್ನ ವ್ಯಸನವನ್ನು ಬಿಡು! ಈ ನಿನ್ನ ಕಣ್ಣೀರುಗಳನ್ನು ತಡೆದಿಡು ? ಸಮಸ್ತನ ದಿಗಳಿಗೂ ಪತಿಯಾದ ಮಹಾಸಾಗರವನ್ನು ಕಲಗಿಸುವುದಕ್ಕೆ ಬೇರೆಯಾರಿಂ ದತಾನೇ ಸಾಧ್ಯವು?ಹಾಗೆಯೇ ಸಮುದ್ರನಂತೆ ಧೀರನಾದ ನೀನು ಈ ಸ್ವಲ್ಪ ಕಾರಕ್ಕಾಗಿ ಧೈಯ್ಯಗೆಡುವುದುಚಿತವೇ ? ನನಗೆ ರಾಜ್ಯದಲ್ಲಿಯಾಗಲಿ, ರಾಜ್ಯ ಸುಖದಲ್ಲಿಯಾಗಲಿ ಅಸೆಯಿಲ್ಲ ! ಕೊನೆಗೆ ನನ್ನ ಪ್ರಾಣಪ್ರಿಯಳಾದ ಸೀತೆಯ ನ್ನಾದರೂ ಅಗಲಿರುವುದಕ್ಕೆ ಸಿದ್ಧನಾಗಿರುವೆನು. ಈ ಕಾಮೋಪಭೋಗಗ ಲೊಂದರಲ್ಲಿಯೂ ನನಗೆ ದೃಷ್ಟಿಯಿಲ್ಲ! ನಾನು ಸ್ವಲ್ಪ ಸೌಖ್ಯವನ್ನಾದರೂ ಆ ಪೇಕ್ಷಿಸುವವನಲ್ಲ!ಕೊನೆಗೆ ನನ್ನ ಪ್ರಾಣವನ್ನೂ ನಾನು ಲಕ್ಷ ಮಾಡತಕ್ಕವನ ಲ್ಲ. ಮುಖ್ಯವಾಗಿ ನಿನ್ನನ್ನು ಅಸತ್ಯದಲ್ಲಿ ಬಿಳಿಸದೆ ಸತ್ಯಪ್ರತಿಜ್ಯನನ್ನಾಗಿ ಮಾ ಡಬೇಕೆಂಬುದೇ ನನ್ನ ಕೋರಿಕೆ. ಈ ವಿಷಯದಲ್ಲಿ ನನಗೆ ಪ್ರತ್ಯಕ್ಷದೈವವಾದ ನಿನ್ನಿದಿರಾಗಿಯೇ ನನ್ನ ಸತ್ಯದಮೇಲೆಯೂ, ನನ್ನ ಸುಖದಮೇಲೆಯೂ, ಆಣೆ