ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೮೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೨೨ ಶ್ರೀಮದ್ರಾಮಾಯಣವು [ಸರ್ಗ ೩೪. ಇನ್ನೂ ಕೆಲವು ಕಾಲವು ಹಿಡಿಯಬಹುದಲ್ಲವೆ ? ಅದುವರೆಗೆ ಭರತನೇ ಇಲ್ಲಿ ದ್ದುಕೊಂಡು, ಅನೇಕ ಪಟ್ಟಣಗಳಿಂದ, ರಾಷ್ಟ್ರಗಳಿಂದಲೂ, ಪಶ್ವತ ಗಳಿಂದಲೂ, ಕಾಡುಗಳಿಂದಲೂ ಕೂಡಿ, ವಿಸ್ತಾರವಾದ ಎಲೆ ಕಟ್ಟುಗಳು ಕೃ ಮಂಗಳಕರವಾದ ಈ ಸಮಸ್ತ ಭೂಮಿಯನ್ನೂ ನಿರಾತಂಕವಾಗಿ ಅನು ಭವಿಸುತ್ತಿರಲಿ ! ನಾನು ಹಟದಿಂದಲೇ ಹೀಗೆ ಉದ್ದೇಶಿಸಿರುವೆನೆಂದು ತಿಳಿಯ ಬೇಡ ! ನಿನ್ನ ಆಜ್ಞೆಯನ್ನನುಸರಿಸಿಯೇ ನಾನು ನಡೆಯುತ್ತಿರುವೆನು. ಎಲೆ ದೋಷರಹಿತನೆ : ಸಜ್ಜನ ಸಮ್ಮತವಾದ ನಿನ್ನ ಆಜ್ಞೆಯನ್ನು ನಡೆಸುವುದರ ಲ್ಲಿ ನನ್ನ ಮನಸ್ಸು ಎಷ್ಟು ಮಟ್ಟಿಗೆ ಉತ್ಸಾಹಗೊಂಡಿರುವುದೋ, ಬೇರೆ ಕೋರಿಕೆಗಳಲ್ಲಿಯಾಗಲಿ, ಆತ್ಮಸುಖದಲ್ಲಿಯಾಗಲಿ, ನನಗೆ ಅಷ್ಟು ಮಟ್ಟಿಗೆ ಉತ್ಸಾಹವಿಲ್ಲವು. ನನಗಾಗಿ ನೀನು ಸ್ವಲ್ಪವೂ ದುಃಖಿಸಬೇಕಾದುದಿಲ್ಲ! ನಿನ್ನ ನ್ನು ಸತ್ಯಭ್ರಷ್ಟನನ್ನಾಗಿ ಮಾಡಿ, ಅದರಿಂದ ನಾನು ಸೌಖ್ಯಗಳನ್ನನುಭವಿಸ ಬೇಕೆಂಬುದು ನನಗೆ ಸತ್ವಧಾ ಸಮ್ಮತವಲ್ಲ. ಇದರಿಂದ ನನಗೆ ಸಮಸ್ಯೆ ಕಾ ಮಗಳೂ ಸಿದ್ದಿಸುವ ಹಾಗಿದ್ದರೂ ನಾನು ಇಷ್ಟಪಡುವವನಲ್ಲ. ನಿನ್ನನ್ನು ಅಸತ್ಯದಲ್ಲಿರಿಸಿ, ರಾಜ್ಯವನ್ನಾಗಲಿ, ಸುಖವನ್ನಾಗಲಿ, ಸೀತೆಯನ್ನಾಗಲಿ, ಕೊನೆಗೆ ನನ್ನ ಪ್ರಾಣವನ್ನೇ ಆಗಲಿ ನಾನು ಅಪೇಕ್ಷಿಸುವವನಲ್ಲ. ನೀನು ತಸ್ಯ ವ್ರತನಾಗಿರಬೇಕೆಂಬುದೇ ನನ್ನ ಮುಖ್ಯವಾದ ಕೋರಿಕೆ ! ಅದೆಲ್ಲವೂ ಹಾಗಿ ರಲಿ! ಈಗ ನಾನು ಕಾಡಿಗೆ ಹೋಗಿ ಬರುವುದರಿಂದ ನಮ್ಮಿಬ್ಬರಿಗೂ ಸೌಖ, ವುಂಟು ! ನಾನು ಅಲ್ಲಿ ವಿಧವಿಧವಾದ ಗಡ್ಡೆಗೆಣಸುಗಳನ್ನು ತಿನ್ನಬಹುದು ! ನಾನಾವಿಧಗಳಾದ ಹಣ್ಣುಗಳನ್ನು ರುಚಿನೋಡಬಹುದು ! ಚಿತ್ರವಿಚಿತ್ರ ಗಳಾದ ಬೆಟ್ಟಗಳನ್ನೂ , ನಖಗಳನ್ನೂ, ಸರೋವರಗಳನ್ನೂ ನೋಡಬಹು ದು ! ಬಗೆಬಗೆಯ ಮರಗಿಡಗಳನ್ನು ನೋಡಬಹುದು ! ಇವೆಲ್ಲಕ್ಕೂ ಈಗ ಲ್ಲದೆ ಬೇರೆ ಅವಕಾಶವೆಲ್ಲಿ ಸಿಕ್ಕುವುದು ? ನೀನೂ ಇಲ್ಲಿ ಸತ್ಯಪ್ರತಿಜ್ಞನಾಗಿ ಸುಖದಿಂದಿರಬಹುದು !” ಎಂದನು. ಈ ಮಾತನ್ನು ಕೇಳುತ್ತಾ ದಶರಥ ನು ಮಹಾವ್ಯಸನದಿಂದ ಕೂಡಿ, ಆ ದುಃಖಾಗ್ನಿಯಿಂದ ಬೆಂದ ದೇಹ ವುಳ್ಳವನಾಗಿಯೂ, ಕಂದಿದ ಮನಸ್ಸುಳ್ಳವನಾಗಿಯೂ ಪರಿತಪಿಸುತ್ತ, ರಾಮನನ್ನು ಎರಡು ತೋಳುಗಳಿಂದಲೂ ಅಪ್ಪಿಕೊಂಡು, ಹಾಗೆಯೇ ದುಃಖ ವನ್ನು ತಡೆಯಲಾರದೆ ಮೂರ್ಛಯನ್ನು ಹೊಂದಿ, ನಿಶ್ಚಲವಾಗಿ ಬಿದ್ದನು,