ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


49 ಸರ್ಗ, ೩೫] ಅಯೋಧ್ಯಾಕಾಂಡವು, ಇದನ್ನು ನೋಡಿ ಅಲ್ಲಿದ್ದ ಅಂತಃಪುರಸ್ತಿಯರು ಒಟ್ಟಾಗಿ ಹಾಹಾಕಾರವನ್ನು ಮಾಡಿ ವಿಲಪಿಸುತ್ತಿದ್ದರು. ಕೊರಮನಸ್ಸುಳ್ಳ ಕೈಕೇಯಿಯು ಹೊರತು, ಇತರಸ್ತ್ರೀಯರೆಲ್ಲರೂ ನಾನಾವಿಧವಾಗಿ ಪ್ರಲಾಪಗಳನ್ನು ಮಾಡುತಿದ್ದ ರು. ಸುಮಂತ್ರನೂಕೂಡ ವ್ಯಸನದಿಂದಳು ಮೂರ್ಛಬಿದ್ದನು. ಆ ಅಂತಃಪದಪ್ರದೇಶವೆಲ್ಲವೂ ಕೇವಲ ಹಾಹಾಕಾರಧ್ವನಿಯಿಂದಲೇ ತುಂಬಿ ಹೋಯಿತು. ಇಲ್ಲಿಗೆ ಮೂವತ್ತು ನಾಲ್ಕನೆಯು ಸರ್ಗವು, ++ಇಸುಮಂತ್ರನು ಕೈಕೇಯಿಯನ್ನು ನಿಂದಿಸಿದುದು.•ww ಆಗಸುಮಂತ್ರನಿಗೆ ವ್ಯಸನದೊಡನೆ ಮಿತಿಮೀರಿದ ಕೋಪವೂ ಉಕ್ಕಿ ಬರುತಿತ್ತು. ಆ ಕೋಪೋದ್ರೇಕದಿಂದ ತಲೆಯನ್ನೊ ದರುತ್ತಾ,ಬಾರಿಬಾರಿಗೂ ನಿಟ್ಟುಸಿರು ಬಿಡುತ್ತಿದ್ದನು ಆಗಾಗ ಹಲ್ಲುಗಳನ್ನು ಕಡಿದು ಕೈಗೆ ಳನ್ನು ಹಿಸುಕುತಿಮ್ಮನು ಸ್ವಭಾವದಿಂದ ತೆಳುವಾದ ಆತನ ಕಣ್ಣುಗಳು ಕೆಂ ಪೇರಿದುವು ದೇಹವೆಲ್ಲವೂ ಸ್ವಾಭಾವಿಕವಾದ ವರ್ಣವನ್ನು ಬಿಟ್ಟು ವೈವ ರ್ಣ್ಯವನ್ನು ಹೊಂದಿತು. ಅತೀವ್ರವಾದ ಕೋಪದಿಂದ ತಪಿಸುತಿದ್ದನು. ಕೈಕೇಯಿಯವಿಷಯದಲ್ಲಿ ಹಾಗೆ ಮರುಳಾಗಿದ್ದ ದಶರಥನ ಮನಸೂ ಕೂಡ ಈಗ ಆಕೆಯಲ್ಲಿ ಭೇದಿಸಿಹೋದುದನ್ನು ನೋಡಿ, ಈ ಸುಮಂತ್ರನಿಗೂ ಆಕೆಯ ಲ್ಲಿ ಇದುವರೆಗೂ ಇದ್ದ ಗೌರವಬುದ್ಧಿಯು ಕೆಟ್ಟು ಹೋಯಿತು. ಅತಿತೀ ಕವಾದ ತನ್ನ ವಾಗ್ಯಾಣವು ಆಕೆಯ ಹೃದಯವನ್ನು ಭೇದಿಸುವಂತೆಯೂ, ವಜ್ರಸಾರಗಳಾದ ತನ್ನ ಕ್ರೂರವಾಕ್ಯಗಳು ಅವಳ ಮರ್ಮಗಳಲ್ಲಿ ನಾವು ವಂತೆಯೂ, ಕೆಲವು ಮಾತುಗಳನ್ನಾಡತೊಡಗಿದನು. ಈ ನಿಂದಾವಾಕ್ಯಗಳಿಂ ದ ಆಕೆಯ ಗುಟ್ಟೆಲ್ಲವನ್ನೂ ಹೊರಪಡಿಸಬೇಕೆಂದು, ಎಲೆ, ದೇವಿ!ನಿನ್ನ ಪತಿ ಯಾದ ಈ ದಶರಥನನ್ನು ನೀನೇನೆಂದು ತಿಳಿದಿರುವೆ ? ಈತನು ಚರಾಚರಾತ್ಮ ಕವಾದ ಈ ಲೋಕವನ್ನೆಲ್ಲಾ ಧರಿಸಿರತಕ್ಕವನು. ಇಂತಹ ಮಹಾಪ್ರಭುವಾ ದ ರಾಜನನ್ನು ನೀನು ಅಲಕ್ಷವಾಗಿ ಕಂಡು, ಈತನ ಮೃತ್ಯುವಿಗೂ ಅಂಜದ ಮೇಲೆ, ಲೋಕದಲ್ಲಿ ಇದಕ್ಕಿಂತಲೂ ಇನ್ನು ಅಕಾರವೇನಿರುವುದು ? ಹೀಗೆ ಪತಿಹತ್ಯೆಯಲ್ಲಿ ಪ್ರಯತ್ನಿಸಿರುವ ನೀನು ಈ ಮೂಲಕವಾಗಿ ಕೊನೆಗೆ ಕುಲ